ವಾಮಾಚಾರದ ಪ್ರಯೋಗ ನಡೆದಿದೆ ಎಂಬ ಭಯದಿಂದ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ, ಚಿಕ್ಕಮಗಳೂರು ಜಿಲ್ಲೆಯ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆ ಜಯಂತಿ(29), ಬೇಲೂರು ತಾಲೂಕಿನ ತಿಮ್ಮೇನಹಳ್ಳಿ ಗ್ರಾಮದ ಬೋವಿ ಕಾಲೋನಿಯವರು. ಸುಮಾರು 10 ವರ್ಷದ ಹಿಂದೆ ಚಿಕ್ಕಮಗಳೂರಿನ ಭಕ್ತರಹಳ್ಳಿ ಗ್ರಾಮದ ಮಂಜು ಎಂಬುವವರ ಜೊತೆ ವಿವಾಹವಾಗಿದ್ದರು. ಗ್ರಾಮದಲ್ಲಿ ಯಾರೋ ಇಬ್ಬರು ವಾಮಾಚಾರದ ಪ್ರಯೋಗ ಮಾಡಿದ್ದಾರೆ, ಎಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ವಿಷ ಕುಡಿದು ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅಪಘಾತದಲ್ಲಿ ಹಲ್ಲು ಕಳೆದುಕೊಂಡಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
ಈ ಘಟನೆ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿಗಳಿಗೆ ಸೂಕ್ತ ಹಾಗೂ ಕಠಿಣ ಶಿಕ್ಷೆಗೆ ಒಳ ಪಡಿಸಬೇಕೆಂದು ಮೃತ ಮಹಿಳೆಯ ಪತಿ ಮಂಜು ಆಗ್ರಹಿಸಿದರು.
