ನಾಲ್ವರು ಭತ್ತದರಾಶಿ ಗುಡ್ಡಕ್ಕೆ ಬೆಂಕಿ ಹಚ್ಚುತ್ತಿದ್ದ ಘಟನೆ, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕುದುರೆಮುಖ ವನ್ಯಜೀವಿ ವಲಯದ ಸಂಸೆ ಶಾಖೆ ಕಳಕೊಡು ವ್ಯಾಪ್ತಿಯ ತುಂಗಭದ್ರಾ ಮೀಸಲು ಅರಣ್ಯ ಪ್ರದೇಶದಲ್ಲಿ ಭಾನುವಾರ ನಡೆದಿದೆ.

ಬಂಧಿತರಾದ ಆರೋಪಿಗಳು ದೇವರಾಜ, ಗಗನ್, ರಕ್ಷಣ್, ಉಮೇಶ ಎಂದು ಗುರುತಿಸಲಾಗಿದೆ. ಆರೋಪಿಗಳು ಭತ್ತದರಾಶಿ ಗುಡ್ಡದಲ್ಲಿ ಗುಡ್ಡಕ್ಕೆ ಬೆಂಕಿ ಹಚ್ಚುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯವರು ಬಂಧಿಸಿದ್ದಾರೆ.
ಈ ಕುರಿತು ಕುದುರೆಮುಖ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ವನ್ಯಜೀವಿ ಸಂಕರಣಾ ಕಾಯ್ದೆ 1972 ಕಾಯ್ದೆಯಡಿ ಬಂದಿಸಿ, ಮೂಡಿಗೆರೆ ಜೆ.ಎಮ್.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ವಾಮಾಚಾರ ಶಂಕೆ ಮಹಿಳೆ ಅತ್ಮಹತ್ಯೆ
ಈ ವೇಳೆ ಕಾರ್ಯಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಎಂ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಜೆ.ಡಿ ದಿನೇಶ್, ವಲಯ ಅರಣ್ಯಾಧಿಕಾರಿಗಳು ಚೇತನ್ ಹೆಚ್.ಪಿ ಇವರ ಮಾರ್ಗದರ್ಶನದಂತೆ ಉಪವಲಯ ಅರಣ್ಯಾಧಿಕಾರಿ ಹರೀಶ್ ವೀ ಸವಣೂರ, ಗಸ್ತು ವನಪಾಲಕ ಅಯ್ಯನಗೌಡ, ಪ್ರಸಾದ್ ಕುಮಾರ್ ಪಿ, ಗೋಪಾಲ, ಗುಂಡಪ್ಪ ಅಂಬಿಗೇರ, ನಿತೀಶ್ ಅರಣ್ಯ ವೀಕ್ಷಕರು ಹಾಗೂ ಗಣೇಶ್ ಕೆ.ಎಸ್, ಪ್ರದೀಪ. ಪ್ರಶಾಂತ, ವಿಜಯಕುಮಾರ್ ಹಾಗೂ ಇನ್ನಿತರರಿದ್ದರು.
