ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರನ್ನು ಸ್ಟಾಂಡ್‌ಅಪ್ ಕಾಮೆಡಿಯನ್ ಕುನಾಲ್ ಕಮ್ರಾ ಟೀಕಿಸಿದ್ದು, ಈ ವಿಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ಕುನಾಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕುನಾಲ್ ವಿರುದ್ಧ ಶಿಂದೆ ನೇತೃತ್ವದ ಶಿವಸೇನೆ ಶಾಸಕ ಮುರ್ಜಿ ಪಟೇಲ್ ದೂರು ನೀಡಿದ್ದಾರೆ.
ಹಾಸ್ಯವಾಗಿಯೇ ಪ್ರಸಕ್ತ ವಿಷಯಗಳನ್ನು ಜನರಿಗೆ ತಿಳಿಸುವುದರಲ್ಲೇ ಹೆಸರುವಾಸಿಯಾದ ಕಮ್ರಾ ತಮ್ಮ ಕಾರ್ಯಕ್ರಮವೊಂದರಲ್ಲಿ ಶಿಂದೆ ಅವರನ್ನು ಟೀಕಿಸಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಶಿಂದೆ ಅವರನ್ನು ‘ದ್ರೋಹಿ’ ಎಂದು ಕರೆದಿದ್ದಾರೆ. ಶಿಂದೆ ಹೆಸರನ್ನು ಎಲ್ಲಿಯೂ ಉಲ್ಲೇಖಿಸದಿದ್ದರೂ ಹಾಡಿನ ಮೂಲಕ ತನ್ನ ಪಕ್ಷವನ್ನೇ ಇಬ್ಭಾಗ ಮಾಡಿದ ದ್ರೋಹಿ ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಕುನಾಲ್ ಕಮ್ರಾ ಜೊತೆ ಟ್ವೀಟ್ ವಾರ್ | ಓಲಾ ಷೇರು ಕುಸಿತ; ಭವಿಶ್ ದುರಹಂಕಾರದ ಫಲವೆಂದ ನೆಟ್ಟಿಗರು
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಂದೆ ಬೆಂಬಲಿಗರು ಕಮ್ರಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಮ್ರಾ ಕಾರ್ಯಕ್ರಮ ನಡೆದ ಮುಂಬೈನ ಖಾರ್ ಪ್ರದೇಶದ ಹೋಟೆಲ್ ಅನ್ನು ಶಿವಸೇನೆ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ.

Maharashtra ❤️❤️❤️ pic.twitter.com/FYaL8tnT1R
— Kunal Kamra (@kunalkamra88) March 23, 2025
ಇತ್ತೀಚೆಗೆ ಶಿವಸೇನೆಗೆ ಸೇರಿದ ಸಂಜಯ್ ನಿರುಪಮ್ ಕಮ್ರಾಗೆ ಬೆದರಿಕೆ ಹಾಕಿದ್ದಾರೆ. “ನಾವು ನಾಳೆ ಬೆಳಿಗ್ಗೆ 11 ಗಂಟೆಗೆ ಕುನಾಲ್ ಕಮ್ರಾಗೆ ಪಾಠ ಕಲಿಸುತ್ತೇವೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
कल करेंगे कुणाल कामरा की धुलाई।
— Sanjay Nirupam (@sanjaynirupam) March 23, 2025
11 बजे।
ಕಮ್ರಾ ‘ನಯ ಭಾರತ್’ (ಹೊಸ ಭಾರತ) ಎಂಬ ಕಾರ್ಯಕ್ರಮದಲ್ಲಿ ಸಮಕಾಲೀನ ರಾಜಕೀಯದ ಬಗ್ಗೆ ಹಾಸ್ಯವಾಗಿ ಚರ್ಚಿಸಿದ್ದರು. ಮೊದಲು ಬಿಜೆಪಿಯಿಂದ ಶಿವಸೇನೆ ಹೊರಬಂತು, ಬಳಿಕ ಶಿವಸೇನೆಯಿಂದ ಶಿವಸೇನೆಯೇ ಹೊರಬಂದಿದೆ ಎಂದು ಗೇಲಿ ಮಾಡಿದ್ದಾರೆ. ಥಾಣೆಯ ನಾಯಕ ಎನ್ನುವ ಮೂಲಕ ಪರೋಕ್ಷವಾಗಿ ಶಿಂದೆ ಅವರನ್ನು ಸಂಬೋಧಿಸಿದ ಹಾಡೊಂದರಲ್ಲಿ ಶಿಂದೆ ತನ್ನವರಿಗೆ ದ್ರೋಹ ಬಗೆದವರು (ದ್ರೋಹಿ) ಎಂದಿದ್ದಾರೆ.
ಇದನ್ನು ಓದಿದ್ದೀರಾ? ಕೆಟ್ಟು ನಿಲ್ಲುತ್ತಿವೆ ‘ಓಲಾ ಇವಿ’; ಓಲಾ ಸಿಇಒ ಅಗರ್ವಾಲ್ ಮತ್ತು ಕುನಾಲ್ ಕಮ್ರಾ ನಡುವೆ ಟ್ವೀಟ್ ವಾರ್
ಶಿವಸೇನೆ ನಾಯಕರು ಹೋಟೆಲ್ ಧ್ವಂಸ ಮಾಡಿ, ತನ್ನ ವಿರುದ್ಧ ದೂರು ದಾಖಲಿಸಿದ ಬೆನ್ನಲ್ಲೇ ಕಮ್ರಾ ಎಕ್ಸ್‌ನಲ್ಲಿ ಮತ್ತೊಂದು ಪೋಸ್ಟ್ ಮಾಡಿದ್ದಾರೆ. ಕೆಂಪು ಬಣ್ಣದ ಸಣ್ಣ ಸಂವಿಧಾನದ ಪ್ರತಿಯನ್ನು ಹಿಡಿದ ಚಿತ್ರದೊಂದಿಗೆ “ಮುಂದಿನ ದಾರಿ” ಎಂದು ಬರೆದುಕೊಂಡಿದ್ದಾರೆ.
The only way forward… pic.twitter.com/nfVFZz7MtY
— Kunal Kamra (@kunalkamra88) March 23, 2025
ಈ ಸಂವಿಧಾನ ಪ್ರತಿಯು ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ಕೆಲವು ತಿಂಗಳುಗಳ ಹಿಂದೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇದೇ ರೀತಿಯ ಸಂವಿಧಾನದ ಪ್ರತಿಯನ್ನು ಕೊಂಡೊಯ್ದು “ಸಂವಿಧಾನವನ್ನು ಉಳಿಸಿ” ಎಂದು ಜನರಿಗೆ ಕರೆ ನೀಡಿದ್ದರು.
