ವಿಜಯನಗರ ಜಿಲ್ಲೆಯ ಹೊಸಪೇಟೆಯ ವಡಕರಾಯದಲ್ಲಿ ಎಸ್ಎಫ್ಐ ಹಾಗೂ ಡಿವೈಎಫ್ಐನಿಂದ ಹಮ್ಮಿಕೊಂಡಿದ್ದ ಭಗತ್ ಸಿಂಗ್, ಸುಖದೇವ್, ರಾಜುಗುರು ಅವರ 95ನೇ ಹುತಾತ್ಮ ದಿನವನ್ನು ಪಂಜಿನ ಮೆರವಣಿಗೆ ಮೂಲಕ ಆಚರಿಸಲಾಯಿತು.
ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಇಡಿಗರ ಮಂಜುನಾಥ ಮಾತಬಾಡಿ, “ಮಹಾತ್ಮರ ತ್ಯಾಗ ಬಲಿದಾನಗಳು ಇಂದು ಆಚರಣೆಗೆ ಸೀಮಿತವಾಗಿವೆ. ಯುವಜನರು ಭಗತ್ ಸಿಂಗ್ರ ಕನಸನ್ನು ನನಸು ಮಾಡಲು ಪಣ ತೊಡಬೇಕಿದೆ. ಈ ದೇಶದ ಯುವಸಂಪತ್ತು ಆಧುನಿಕ ಜೀವನ ಶೈಲಿಯಲ್ಲಿ ಮಹಾತ್ಮಾರ ತ್ಯಾಗ ಬಲಿದಾನಗಳನ್ನು ಮರೆತು ನೆಡಿಯುತ್ತಿದೆ. ಭಗತ್ ಸಿಂಗ್ ಸಮಸಮಾಜದ ಕನಸು ಕಂಡಿದ್ದರು. ಶೋಷಣೆ ವಿರುದ್ಧ, ದಬ್ಬಾಳಿಕೆ ವಿರುದ್ಧ ಭಗತ್ ಸದನ ನಡೆಯುವಾಗ ಬಾಂಬ್ ಸ್ಪೋಟಸಿ ಅಂದಿನ ಬ್ರಿಟಿಷ್ ವಸಾಹತುಶಾಹಿಗೆ ನಡುಕ ಹುಟ್ಟಿಸಿದ್ದರು. ಇವತ್ತು ಪ್ರಶ್ನಿಸಬೇಕಾದ ಯುವಜನತೆ ಕೋಮುಗಲಭೆಗಳಲ್ಲಿ ಮುಳುಗಿದ್ದು, ತಮ್ಮ ಹಕ್ಕನ್ನು ಮರೆತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿಸರು.
ಎಸ್ಎಫ್ಐನ ಕಾರ್ಯದರ್ಶಿ ಶಿವರೆಡ್ಡಿ ಮಾತನಾಡಿ, “ದೇಶ ಸದೃಢವಾಗಲು ನಮ್ಮ ಬದಕು ಸದೃಢವಾಗಲು ಯಾವ ಉದ್ಯೋಗ ಬೇಕೋ ಅದನ್ನು ಯುವಜನತೆ ಅರಿಯದೆ ಬದಲಾಗಿ ದ್ವೇಷ ಸಂಘಟನೆಗಳಲ್ಲಿ ಹಂಚಿ ಹೋಗಿದ್ದಾರೆ. ‘ದೇಶದ ಅಧಿಕಾರದ ಚುಕ್ಕಾಣಿ ಯುವಜನತೆಯ ಕೈಗೆ ದೊರೆತಾಗ ದೇಶ ಸಮಾನತೆಯ ಬದಕು ಕಾಣುತ್ತದೆ’ ಎಂದು ಭಗತ್ ಸಿಂಗ್ ಆಶಯ ಹೊತ್ತಿದ್ದರು. ಆದರೆ ಈಗ ದೇಶದ ನಾಗರಿಕರು ಇದರ ಅರಿವೇ ಇಲ್ಲದೆ ಹಣ, ಅಧಿಕಾರದ ಆಸೆಗೆ ಬಲಿಯಾಗಿ ಹಂಚಿಹೋಗಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಲ್ಯಾಣ ಕರ್ನಾಟಕ ಸೇರಿ 16 ಸಾವಿರ ಶಿಕ್ಷಕರ ನೇಮಕಕ್ಕೆ ಹಣಕಾಸು ಇಲಾಖೆ ಒಪ್ಪಿಗೆ
ಡಿವೈಎಫ್ಐನ ಜಿಲ್ಲಾಧ್ಯಕ್ಷ ವಿ ಸ್ವಾಮಿ ಮಾತನಾಡಿ, “ಮಹಾತ್ಮಾರು ಹುತಾತ್ಮರಾಗಿ 95 ವರ್ಷಗಳಾದವು. ಆದರೂ ಪರಿಸ್ಥಿತಿ ಬದಲಾಗಿಲ್ಲ. ಬದಲಾಗಿ ಕೋಮುಗಲಭೆ ಮೇಲು ಕೀಳು ಹೆಚ್ಚಾಗಿದೆ. ಯಾವ ರಾಜಿಕೀಯ ಪಕ್ಷಗಳೂ ಮಹಾತ್ಮರ ತ್ಯಾಗ ಬಲಿದಾನಗಳನ್ನು ನೆನೆದು ಕೆಲಸ ಮಾಡಬೇಕಿತ್ತೊ, ಬದಲಾಗಿ ದಾಸರನ್ನಾಗಿ ಮಾಡಿದ್ದಾರೆ. ಪ್ರಶ್ನೆ ಕೇಳುವ ಮನೋಭಾವವನ್ನು ಹೊಸಕಿ ಹಾಕಿದ್ದಾರೆ. ಇನ್ನಾದರೂ ಮಹಾತ್ಮರ ತ್ಯಾಗಗಳನ್ನು ನೆನದು ದುಡಿಯಬೇಕಿದೆ” ಎಂದರು.
ಬಂಡೆ ತಿರುಕಪ್ಪ, ಪವನ್, ಅಲ್ತಾಫ್, ದಿವಾಕರ್, ಹನುಮ ನಾಯ್ಕ, ಮಂಜು, ಜಂಬಯ್ಯಾ ನಾಯಕ, ಎಂ ಗೋಪಾಲ, ಯಲ್ಲಾಲಿಂಗ, ಬಸವರಾಜ್, ತಾಯಪ್ಪ ನಾಯಕ, ಸೂರ್ಯ, ಮಹೇಶ್ ಬಿಸಾಟಿ, ಕಲ್ಯಾಣ್, ವೆಂಕಟೇಶ್, ಮುನೀರ್ ಭಾಷಾ, ಚೆನ್ನ ಬಸಯ್ಯ, ಎರಿಸ್ವಾಮಿ, ತಿರುಪತಿ, ಪ್ರಕಾಶ್, ಭಾಸ್ಕರ್ ರೆಡ್ಡಿ, ರೇಣುಕಾ, ಬಸವರಾಜ್ ಸೇರಿದಂತೆ ಇತರರು ಇದ್ದರು.