ವಿಜಯನಗರ | ಸಾರಿಗೆ ಬಸ್ ಚಾಲಕನಿಗೆ ಹಲ್ಲೆ; ಕೂಡ್ಲಿಗಿ ಮುಖ್ಯ ಪೊಲೀಸ್ ಪೇದೆ ವಿರುದ್ಧ ದೂರು ದಾಖಲು

Date:

ಕೂಡ್ಲಿಗಿ ತಾಲೂಕಿನ ಗಜಾಪುರ ಗ್ರಾಮದ ಬಳಿ ಸಾರಿಗೆ ಬಸ್ ತಡೆದು, ಕ್ಷುಲ್ಲಕ ಕಾರಣಕ್ಕೆ ಸಾರಿಗೆ ಬಸ್ ಚಾಲಕನ ಮೇಲೆ ಮುಖ್ಯ ಪೊಲೀಸ್ ಪೇದೆ ಹಲ್ಲೆ ಮಾಡಿರುವ ಘಟನೆಯ ನಡೆದಿದೆ. ಈ ಕುರಿತು ಚಾಲಕ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪೇದೆಯ ವಿರುದ್ದ ದೂರು ದಾಖಲಿಸಿದ್ದಾರೆ.

- Advertisement -

ಕೂಡ್ಲಿಗಿ ಮುಖ್ಯ ಪೊಲೀಸ್ ಪೇದೆ ಮಂಜುನಾಥ ಸಾರ್ವಜನಿಕರೆದುರು ಹಾಗೂ ಪ್ರಯಾಣಿಕರೆದುರಲ್ಲಿ ಅಶ್ಲೀಲ ಪದಬಳಸಿ ನಿಂದನೆ ಮಾಡಿದ್ದಾರೆ ಹಾಗೂ ಚಪ್ಪಲಿಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಬಸ್‌ ಚಾಲಕ ಆರೋಪಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಬಸ್ ಚಾಲಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಠಾಣೆಯಲ್ಲೇ ಆರೋಪಿಯು ಮುಖ್ಯ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ಕೂಡ್ಲಿಗಿ ಪಟ್ಟಣದವರಾಗಿದ್ದಾರೆ.

ಸಾರಿ ಬಸ್ ಚಾಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲಿ ಹೇಳಿಕೆ ನೀಡಿದ್ದು, “ತಾನು ಕರ್ಥವ್ಯದಲ್ಲಿದ್ದಾಗಲೇ ಚಪ್ಪಲಿಯಿಂದ ಹೊಡೆದು ಅಶ್ಲೀಲ ಪದಗಳಿಂದ ನಿಂದಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾನೆ. ಕೂಡ್ಲಿಗಿ ಮುಖ್ಯ ಪೊಲೀಸ್ ಪೇದೆ ಕ್ಷುಲ್ಲಕ ಕಾರಣಕ್ಕೆ , ಸಾರಿಗೆ ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಅಮಾನವೀಯವಾಗಿ ಹಿಗ್ಗಾಮುಗ್ಗಾ ಥಳಿಸಿದರು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

WhatsApp Image 2025 08 08 at 7.57.42 PM

ದಾವಣಗೆರೆ ಜಿಲ್ಲೆಯ ಹರಿಹರದಿಂದ ಕೂಡ್ಲಿಗಿ, ಸಂಡೂರು ಮಾರ್ಗವಾಗಿ ಬಳ್ಳಾರಿ ಕಡೆ ಚಲಿಸುತ್ತಿದ್ದ ಬಸ್, ಕೊಟ್ಟೂರಿನಿಂದ ನಿರ್ಗಮಿಸಿ ಮಲ್ಲನಾಯಕಹಳ್ಳಿ ಸಮೀಪದ ಮಾರ್ಗದಲ್ಲಿ ಮುಂದೆ ಚಲಿಸುತ್ತಿತ್ತು. ಬಸ್‌ ಮುಂದೆ ಚಲಿಸುತ್ತಿದ್ದ ಬೈಕ್ ಅನ್ನು ಹಿಂದಿಕ್ಕಲು ಬಸ್ ಚಾಲಕ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಎದುರಗಡೆಯಿಂದ ಕಾರೊಂದು ವೇಗವಾಗಿ ಬಂದಿದೆ. ಕೂಡಲೇ ಬಸ್ ಚಾಲಕ ರಾಮಲಿಂಗಪ್ಪ ಬಸ್‌ ಅನ್ನು ರಸ್ತೆ ಮೇಲೆ ತಿರುಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ವಿಜಯನಗರ | ಮುಕ್ತ ಚಿಂತನೆಗೆ ಅಪಾಯವಿದೆ: ಎಸ್. ಸಿರಾಜ್ ಅಹಮದ್

ಹಿಂದೆ ಇದ್ದ ಬೈಕ್ ಸವಾರ ಮುಖ್ಯ ಪೇದೆ ನಿಯಂತ್ರಣಕ್ಕೆ ತಂದುಕೊಂಡಿದ್ದಾನೆ. ಇದರಿಂದ ಕುಪಿತಗೊಂಡ, ಪೊಲೀಸ್ ಪೇದೆ ಬಸ್ ಅನ್ನು ಬೆನ್ನಟ್ಟಿ, ಗಜಾಪುರ ಗ್ರಾಮದ ಬಳಿ ಬರುತ್ತಿದ್ದಂತಿಯೇ, ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಚಾಲಕ ರಾಮಲಿಂಗಪ್ಪ ನಡೆದ ಘಟನೆಯ ಬಗ್ಗೆ ತಪ್ಪಾಗಿದೆಯೆಂದು ವಿಷಾದಿಸಿದರೂ ಮುಖ್ಯ ಪೇದೆ ಮಂಜುನಾಥರವರನ್ನು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಆದರೂ ಸುಮ್ಮನಾಗದೆ ಪುಡಿ ರೌಡಿಯಂತೆ ಬಸ್ ಒಳಗೆ ನುಗ್ಗಿ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹರಿದಾಡುತ್ತಿದೆ. ಬಸ್‌ನಲ್ಲಿದ್ದ ಪ್ರಯಾಣಿಕರ ಮಾತಿಗೂ ಕಿವಿಗೊಟ್ಟಿಲ್ಲ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.

ಪೊಲೀಸ್ ಪೇದೆ ಪುಡಿ ರೌಡಿಯಂತೆ ವರ್ತಿಸಿದ್ದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಹಿರಿಯ ಹಾಗೂ ಕಿರಿಯ ನಾಗರಿಗರಿಕರು ಚಾಲಕನ ತಪ್ಪು ಇದ್ದರೆ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿತ್ತು. ಆದರೆ, ಈ ರೀತಿ ಪೊಲೀಸ್ ದರ್ಪ ಖಂಡನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ದಾರಿ: ನಾಲತವಾಡ

ವಿದ್ಯಾರ್ಥಿಗಳಲ್ಲಿ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ...

ವಿಜಯಪುರ | ಮತದಾರರ ಹಕ್ಕು ರಕ್ಷಣೆಗೆ SIR ಪರಿಶೋಧನಾ ಪ್ರವಾಸ; ನಟ ಪ್ರಕಾಶ್ ರಾಜ್ ಭಾಗಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ...

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಅಹಿಂಸೆ-ಸತ್ಯಾಗ್ರಹದ ಸಂದೇಶದೊಂದಿಗೆ ಸಾಮರಸ್ಯ ನಡಿಗೆ

ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಭಾರತವನ್ನು ಮುನ್ನಡೆಸಿ, ಜಗತ್ತಿಗೆ ಬೆಳಕಾದ ಮಹಾತ್ಮ...