ಹಾವೇರಿ | ಹಾವೇರಿ ವಿ ವಿ ಉಳಿದರೆ ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ : ನಿವೃತ್ತ ಕುಲಪತಿ ಡಾ. ಎ. ಮುರಿಗೆಪ್ಪ

Date:

Advertisements

“ಹಾವೇರಿ ವಿವಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಕೇಳಬೇಕು, ‘ವಿಶ್ವವಿದ್ಯಾಲಯ ಎಷ್ಟು ಮುಖ್ಯ ಎಂದು ಅವರಿಂದ ತಿಳಿದುಕೊಂಡು, ಈ ಹೋರಾಟದಲ್ಲಿ ವಿದ್ಯಾರ್ಥಿಗಳ ಪೋಷಕರನ್ನು ಪಾಲ್ಗೊಳ್ಳುವಂತೆ ಮಾಡಬೇಕಿರುವುದು ಅವಶ್ಯಕತೆ ಇದೆ. ಜೊತೆಗೆ ಪಕ್ಷಾತೀತವಾಗಿ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕು. ಹಾವೇರಿ ವಿ ವಿ ಇಲ್ಲಿಯೇ ಉಳಿದರೆ ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ” ಎಂದು ಹಂಪಿ ವಿವಿ ನಿವೃತ್ತ ಕುಲಪತಿ ಡಾ. ಎ. ಮುರಿಗೆಪ್ಪ ಅಭಿಪ್ರಾಯ ಪಟ್ಟರು.

ಹಾವೇರಿ ಪಟ್ಟಣದ ರಾಜ್ಯ ಸರಕಾರಿ ನೌಕರರ ಭವನದಲ್ಲಿ ಇಂದು ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ಹಾವೇರಿ ಜಿಲ್ಲೆಯ ಅಸ್ಮಿತೆ ಹಾವೇರಿ ವಿಶ್ವವಿದ್ಯಾಲಯವನ್ನು ಉಳಿಸಲು – ಬೆಳೆಸಲು ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದರು.

“ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚಿದರೆ, ವಿಲೀನಗೊಳಿಸಿದರೆ ಈ ಭಾಗದ ವಿದ್ಯಾರ್ಥಿಗಳಿಗೆ ಸಾಕಷ್ಟು ಸಮಸ್ಯೆ ಆಗುತ್ತದೆ. ಯಾವುದೇ ಒಂದು ಸಣ್ಣ ಕೆಲಸಕ್ಕೆ, ಪ್ರಮಾಣ ಪತ್ರ ತೆಗೆದುಕೊಳ್ಳಲು ಧಾರವಾಡಕ್ಕೆ ಹೋಗಬೇಕಾಗುತ್ತದೆ. ಎಂದು ಹೇಳಿದರು.

Advertisements

“ಪ್ರಸ್ತುತ ಹಾವೇರಿ ವಿಶ್ವವಿದ್ಯಾಲಯದಲ್ಲಿ ಮುಖ್ಯವಾಗಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ಸಮಾಜ ಕಾರ್ಯ ವಿಭಾಗಗಳಿದ್ದು, ಇವು ವೃತ್ತಿಪರ ಶಿಕ್ಷಣ ಕೋರ್ಸ್ ಗಳಾಗಿವೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಬೆಳವಣಿಗೆ ಹೊಂದಲು ಸಾಧ್ಯ. ಆದರೆ ಸರಕಾರ ವಿವಿಯನ್ನು ಸಂಯೋಜನೆಗೊಳಿಸಲು ಹೊರಟಿರುವುದು ಈ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯ ಉಂಟಾಗುತ್ತದೆ. ಎಂದು ಹೇಳಿದರು.

ಶ್ರೀ ಸದಾಶಿವ ಮಹಾಸ್ವಾಮಿಗಳು ಹುಕ್ಕೇರಿಮಠ ಮಾತನಾಡಿ, “ಸರಕಾರ ಗ್ಯಾರಂಟಿ ಯೋಜನೆಗಳಿಂದ ಜನರ ಅಶೋತ್ತರಗಳನ್ನು ಈಡೇರಿಸುವುದು ಎಷ್ಟು ಮುಖ್ಯವೋ, ಅಷ್ಟೇ ನಿರುದ್ಯೋಗ ನೀವಾರಿಸುವುದು ಮುಖ್ಯವಾಗಿದೆ. ಇದಕ್ಕೆ ಪೂರಕವಾಗಿ ಶಿಕ್ಷಣ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಸರಕಾರ ಹಾವೇರಿ ವಿಶ್ವವಿದ್ಯಾಲಯವನ್ನು ಸಂಯೋಜನೆಗೊಳಿಸಲು ಹೊರಟಿರುವುದು ಖಂಡನೀಯ. ಹಾವೇರಿ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲು ಇಡೀ ಹಾವೇರಿ ಜನತೆ ಹೊರಡಲು ಸಿದ್ದರಿದ್ದಾರೆ” ಎಂದು ಸ್ವಾಮೀಜಿಗಳು ಹೇಳುದರು.

“ಒಂದು ಕಾಲದಲ್ಲಿ ಶ್ರೀಮಂತರಿಗೆ, ಉಳ್ಳವರಿಗೆ ಮಾತ್ರ ಶಿಕ್ಷಣ ದೊರಕುತ್ತಿತ್ತು. ಆದರೆ ಇಂದು ಬದಲಾಗಿದೆ. ಶಿಕ್ಷಣವೂ ಸಾರ್ವರ್ತಿಕರಣ ಆಗಿದ್ದು, ಎಲ್ಲರೂ ಪಡೆಯುವಂಟಾಗಿದೆ. ಸರಕಾರ ಹಾವೇರಿ ವಿಶ್ವವಿದ್ಯಾಲಯವನ್ನು ಉಳಿಸಿಕೊಂಡು ಪ್ರೋತ್ಸಾಹ, ಅನುದಾನ ನೀಡಿ ಉತ್ತಮ ಶಿಕ್ಷಣ ವನ್ನು ಈ ಭಾಗದ ವಿದ್ಯಾರ್ಥಿಗಳಿಗೆ ದೊರಕಿಸಬೇಕು. ಅದು ಬಿಟ್ಟು ಸರಕಾರ ಹಾವೇರಿ ವಿವಿಯನ್ನು ವಿಲೀನಗೊಳಿಸಲು ಹೊರಟರೆ ತೀವ್ರ ಹೋರಾಟಕ್ಕೆ ನಾವೆಲ್ಲರೂ ಮುಂದಾಗುತ್ತೇವೆ” ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿ, “ಸರಕಾರ ಹಾವೇರಿ ವಿವಿಯನ್ನು ವಿಲೀನಗೊಳಿಸಲು ಬೇರೆ ಬೇರೆ ಕಾರಣಗಳನ್ನು ಹೇಳುತ್ತಿದೆ. ಈ ವಿವಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮಕ್ಕಳು ಕಲಿಯುತ್ತಿದ್ದಾರೆ. ಸರಕಾರದ ಈ ನಡೆಯಿಂದ ಈ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲು ಹೊರಟಿದೆ. ಶಿಕ್ಷಣ ಪ್ರಗತಿಗೆ ಹಿನ್ನಡೆಯೂ ಆಗುತ್ತದೆ. ಹಾಗಾಗಿ ಈಗಿರುವ ವಿವಿಯನ್ನು ಮುಚ್ಚದೆ ನಿಧಾನವಾಗಿಯಾದರೂ ಅನುದಾನ ನೀಡಲಿ. ಹಾವೇರಿ ವಿವಿಯನ್ನು ವಿಲೀನಗೊಳಿಸುವ ನಿರ್ಧಾರ ಹಿಂತೆಗೆದುಕೊಳ್ಳಬೇಕು. ವಿವಿ ಉಳಿವಿಗಾಗಿ ಎಲ್ಲರೂ ಜೊತೆಯಾಗೋಣ” ಎಂದು ಹೇಳಿದರು.

ನಗರಸಭೆಯ ಸದಸ್ಯ ಸಂಜೀವ ಕುಮಾರ ನೀರಲಗಿ ಮಾತನಾಡಿ, “ಜಿಲ್ಲೆಯಲ್ಲಿ ಆರು ಜನ ಶಾಸಕರು ವಿ.ವಿ ಉಳಿಸುವ ಪರವಾಗಿಯೇ ಇದ್ದು, ಯಾವುದೇ ಕಾರಣಕ್ಕೂ ಹಾವೇರಿ ವಿಶ್ವ ವಿದ್ಯಾಲಯ ಮುಚ್ಚದಂತೆ ಸರಕಾರದ ಮನವೊಲಿಸುವ ಕೆಲಸವನ್ನು ಮಾಡಲಾಗುವುದು, ಅಗತ್ಯ ಬಿದ್ದರೆ ಆರು ಜನ ಶಾಸಕರು ಹಾಗೂ ವಿ.ವಿ ಉಳಿಸಿ ಹೋರಾಟ ಸಮಿತಿ ಮುಖಂಡರ ನಿಯೋಗವನ್ನು ಕರೆದುಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿ ವಿ.ವಿ ಉಳಿಸುವ ಕೆಲಸ ಮಾಡೋಣ” ಎಂದರು.

ನಿರ್ಣಯ: ರಾಜ್ಯ ಸರಕಾರ ಹಾವೇರಿ ವಿ.ವಿ ಯನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೂಡಲೇ ಕೈಬಿಡಲು ಒತ್ತಾಯಿಸಿ ದುಂಡು ಮೇಜಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಈ ಕುರಿತಂತೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ಸಭೆ ನಿರ್ಣಯಿಸಿತು. ಸರಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ನಂತರದಲ್ಲಿ ಹಂತ ಹಂತವಾಗಿ ಹೋರಾಟವನ್ನು ತೀವ್ರವಾಗಿ ನಡೆಸಲು ತೀರ್ಮಾನಿಸಲಾಯ್ತು.

ದುಂಡು ಮೇಜಿನ ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ವಹಿಸಿದ್ದರು. ಪ್ರಸ್ತಾವಿಕವಾಗಿ ವಿ.ವಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ಮಾತನಾಡಿದರು.

ದುಂಡು ಮೇಜಿನ ಸಭೆಯಲ್ಲಿ ಬಣ್ಣದ ಮಠದ ಶ್ರೀ ಅಭಿನರುದ್ರ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ನಗರಸಭೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಬಿ.ಎಡ್ ವಿದ್ಯಾರ್ಥಿ ಪರಮೇಶ್, ಹಿರಿಯ ನಾಗರೀಕರ ವೇದಿಕೆ ಮುಖಂಡರು ಪ್ರೊ. ಡಿ.ವಿ ಹಿರೇಮಠ, ಎಸ್.ಎನ್ ತಿಪ್ಪನಗೌಡ್ರ, ಅನಿತಾ ಮಂಜುನಾಥ, ಕರವೇ ರಾಜ್ಯ ಮುಖಂಡರು ಕರಬಸಯ್ಯ ಬಸರೀಹಳ್ಳಿಮಠ, ಡಿಎಸ್.ಎಸ್ ರಾಜ್ಯ ಮುಖಂಡರು ಉಡಚಪ್ಪ ಮಾಳಗಿ, ಅಲೆಮಾರಿ ಸಮುದಾಯ ಸಂಘಟನೆ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ನಾಯಕ, ಕರವೆ ಗಜಪಡೆ ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಲಮಾಣಿ, ಕರವೇ ಸ್ವಾಭಿಮಾನಿ ಬಣದ ಸಂಜೀವರೆಡ್ಡಿ ಮುದಗುಣಕಿ, ಸಿಐಟಿಯು ಹಮಾಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮುಖಂಡರು ಮಲ್ಲೇಶ ಮದ್ಲೇರ್, ಸಾಹಿತಿ ಕಲಾವಿದರ ಬಳಗದ ಕೆ.ಎನ್ ಜಾನ್ವೇಕರ್, ಡಾ. ತಿಪ್ಪೇಸ್ವಾಮಿ ಹೊಸಮನಿ, ಹನುಮಂತಗೌಡ ಗಾಜೀಗೌಡ್ರ, ಲೇಖಕಿ ಅಕ್ಕಮಹಾದೇವಿ ಹಾನಗಲ್, ನಿವೃತ್ತ ಸೈನಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಯರೇಸೀಮಿ, ಬಹುಜನ ಚಳುವಳಿಯ ಮುಖಂಡ ಎಂ.ಕೆ ಮಕಬುಲ್, ಜುಬೇದಾ ನಾಯ್ಕ್, ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಬಿಜಿವಿಎಸ್ ರಾಜ್ಯ ಮುಖಂಡರಾದ ರೇಣುಕಾ ಗುಡಿಮನಿ ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ಕೊಡಗು | ಕದನ ವಿರಾಮ ಉಲ್ಲಂಘನೆ; ಎಸ್ಡಿಪಿಐನಿಂದ ಪ್ರತಿಭಟನೆ

ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಸಿ.ಆರ್ ಮಾಳಗಿ, ರಾಜೇಂದ್ರ ಹೆಗಡೆ, ಗಿರೀಶ ಬಾರ್ಕಿ, ಶರಣಪ್ಪ ಸಂಗನಾಳ, ಪೃಥ್ವಿರಾಜ ಬೆಟಗೇರಿ, ಸತೀಶ ಎಂ.ಬಿ, ಮಂಜಪ್ಪ ಮರೋಳ, ಜ್ಯೋತಿ ಅರ್ಕಸಾಲಿ, ಬಾಲಚಂದ್ರ ಹಂದ್ರಾಳ, ಶಿವಯೋಗಿ ಹೊಸಗೌಡ್ರ, ವೀರಭದ್ರಗೌಡ ಹೊಮ್ಮರಡಿ, ಎಸ್.ಬಿ ಅಣ್ಣಿಗೇರಿ, ವಿ.ಎಸ್ ಮುಳತಳ್ಳಿ ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು. ಎಂ. ಆಂಜನೇಯ ಸ್ವಾಗತಿಸಿದರು. ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

Download Eedina App Android / iOS

X