ನಾವು ಯಾವುದೇ ಪಕ್ಷದ ವಿರುದ್ಧ, ಯಾವುದೇ ಜನಾಂಗದ ವಿರುದ್ಧ, ಯಾವುದೇ ವ್ಯಕ್ತಿ ವಿರುದ್ಧವಲ್ಲ ನಮ್ಮ ಹೋರಾಟ ಅನ್ಯಾಯ ಅಸಮಾನತೆ ವಿರುದ್ಧವಾಗಿದೆ. ಉತ್ತಮ, ಸಮಾಜ ನಿರ್ಮಾಣದ ಕನಸು ಹೊಂದಿದ್ದೇವೆ” ಎಂದು ಚಲನಚಿತ್ರ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದರು.
ಗದಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಮಾನತೆ ಸಭೆಯಲ್ಲಿ ಮಾತನಾಡಿದ ಅವರು, “ತಮಿಳುನಾಡಿನಲ್ಲಿ ಚಳುವಳಿಗಳು, ಸಿದ್ಧಾಂತಗಳು ಹಾಗೂ ಸಮ ಸಮಾಜದ ವಿಚಾರಗಳು ಉಳಿದುಕೊಂಡಿವೆ. ಒಂದು ಒಳ್ಳೆ ಸಮಾಜ ನಿರ್ಮಾಣವಾಗಬೇಕಾದರೆ ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರ ಬಲಿಷ್ಠವಾದ ಭಾರತ ಮತ್ತು ಕರ್ನಾಟಕವನ್ನು ಕಟ್ಟಲು ಸಾಧ್ಯ. ಎಂದು ಹೇಳಿದರು.
“ರಾಜ್ಯದ ತುಂಬಾ ಪ್ರವಾಸ ಕೈಗೊಂಡಿದ್ದೇನೆ, ಒಂದು ಒಳ್ಳೆ ಸಮ ಸಮಾಜ ಸಮಾನತೆ ಸಭೆ ಮುಖಾಂತರ ಕಟ್ಟುತ್ತೇನೆ. ಅದಕ್ಕೆ ತಾವೆಲ್ಲರೂ ಕೂಡ ಕಂಕಣ ಬದ್ಧವಾಗಿ ನಮ್ಮ ಜೊತೆ ಕೈಜೋಡಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಹಾವೇರಿ ವಿ ವಿ ಉಳಿದರೆ ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲ : ನಿವೃತ್ತ ಕುಲಪತಿ ಡಾ. ಎ. ಮುರಿಗೆಪ್ಪ
ಸಭೆಯಲ್ಲಿ ರೈತ ಹೋರಾಟಗಾರ್ತಿ ನೀಲ ಚಿತ್ರಗಾರ, ಪುರಸಭೆ ಸದಸ್ಯ ಸಂತೋಷ್ ಕಡಿವಾಲ್, ಪುರಸಭೆ ಸದಸ್ಯ ದುರ್ಗಪ್ಪ ಹಿರೇಮನಿ, ಕಳಕಪ್ಪ ಪೋತದಾರ, ಬಸವರಾಜ ಕಾಳಿ, ಮಂಜುನಾಥ್ ಚಲವಾದಿ, ಬಸವರಾಜ್ ಹಲಗಿ, ರವಿ ಜೋಗನ್ನವರ್, ಅಕ್ಷಯ್ ದೊಡ್ಡಮನಿ, ಸಂಜು ಹಾದಿಮನಿ, ಮಂಜುನಾಥ್, ಸುರೇಶ್ ಚಲವಾದಿ, ಸಿದ್ದು ಅಮರಾವತಿ, ನಾಗರಾಜ ದೊಡ್ಡಮನಿ, ಪ್ರದೀಪ್ ಕಾಳೆ, ಆದಿತ್ಯ ದೊಡ್ಡಮನಿ, ಮಂಜುನಾಥ್ ಹಾದಿಮನಿ, ಪಕೀರಪ್ಪ ಮಾದರ್, ಅಶೋಕ್ ತಾಳದವರ, ಹಾಗೂ ಹನುಮಂತ ಚಲವಾದಿ ಅನೇಕರು ಉಪಸ್ಥಿತರಿದ್ದರು.