ಐಪಿಎಲ್‌ 2025 | ಅಶುತೋಷ್‌ ಆರ್ಭಟದಿಂದ ಡೆಲ್ಲಿಗೆ ಜಯ; ಪಂತ್‌ಗೂ ಬಿಸಿ ಮುಟ್ಟಿಸಿದ ಲಖನೌ ಮಾಲೀಕ!

Date:

ಏಳು ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಿದ್ದರು ಕೊನೆಯಲ್ಲಿ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕ್ರೀಸ್‌ಗ ಬಂದ ಅಶುತೋಷ್‌ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಡೆಲ್ಲಿ ತಂಡ ಲಖನೌ ವಿರುದ್ಧ 1 ವಿಕೆಟ್‌ ರೋಚಕ ಜಯ ಸಾಧಿಸಿದೆ.

- Advertisement -

ವಿಶಾಖಪಟ್ಟಣಂನಲ್ಲಿ ನಡೆದ 18ನೇ ಆವೃತ್ತಿಯ 4ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಲಖನೌ 8 ವಿಕೆಟ್‌ ನಷ್ಟಕ್ಕೆ 209 ರನ್‌ ಹೊಡೆಯಿತು. ಕಠಿಣ ಸವಾಲು ಬೆನ್ನತ್ತಿದ ಡೆಲ್ಲಿ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಅಂತಿಮವಾಗಿ 19.3 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 211 ರನ್‌ಗಳಿಸಿ ಗೆಲುವು ಪಡೆಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...

ಐದು ಭಾಷೆ, ಆರು ದಶಕ, ಅನಂತ ಪ್ರಯೋಗ: ಭಾರತೀಯ...

ಬದುಕಿನ ಕೊನೆಯ ಉಸಿರಿನವರೆಗೂ ಕೇವಲ ಸಿನಿಮಾವನ್ನೇ ಶ್ವಾಸವಾಗಿಸಿಕೊಂಡಿದ್ದ, 95ನೇ ವಯಸ್ಸಿನಲ್ಲೂ ಹೊಸ ಕಥೆಯ ಕನಸು ಕಾಣುತ್ತಿದ್ದ ಭಾರತೀಯ ಚಿತ್ರರಂಗದ ಅಪ್ರತಿಮ ದಾರ್ಶನಿಕ ಸಿಂಗೀತಂ ಶ್ರೀನಿವಾಸರಾವ್ ನಮ್ಮೊಂದಿಗಿಲ್ಲ. ಆರು ದಶಕಗಳ ಕಾಲ ತಮ್ಮ ಅನಂತ...

ಡೆಲ್ಲಿ 7 ರನ್‌ಗಳಿಸುವಷ್ಟರಲ್ಲೇ 3 ವಿಕೆಟ್‌ ಕಳೆದುಕೊಂಡು ತೊಂದರೆಯಲ್ಲಿತ್ತು. ನಾಯಕ ಅಕ್ಷರ್‌ ಪಟೇಲ್‌ 22 ರನ್ (11 ಎಸೆತ, 3 ಬೌಂಡರಿ, 1 ಸಿಕ್ಸ್‌), ಡುಪ್ಲೆಸಿಸ್‌ 29 ರನ್‌(18 ಎಸೆತ, 3 ಬೌಂಡರಿ, 2 ಸಿಕ್ಸ್‌) ಸಿಡಿಸಿ ಸ್ವಲ್ಪ ಚೇತರಿಕೆ ನೀಡಿದರು. ಟ್ರಿಸ್ಟಾನ್ ಸ್ಟಬ್ಸ್ 34 ರನ್‌(22 ಎಸೆತ, 1 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದಾಗ ಪಂದ್ಯ ಲಖನೌ ಪರ ವಾಲಿತ್ತು.

7ನೇ ವಿಕೆಟಿಗೆ ಅಶುತೋಷ್‌ ಮತ್ತು ನಿಗಮ್‌ 22 ಎಸೆತಗಳಲ್ಲಿ 55 ರನ್‌ ಹೊಡೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಡೆಲ್ಲಿ ಪರ 16ನೇ ಓವರ್‌ನಲ್ಲಿ 20 ರನ್‌, 17 ನೇ ಓವರ್‌ನಲ್ಲಿ 3 ರನ್‌, 18ನೇ ಓವರ್‌ನಲ್ಲಿ 17 ರನ್‌, 19ನೇ ಓವರ್‌ನಲ್ಲಿ 16 ರನ್‌ ಬಂದಿತ್ತು. 20ನೇ ಓವರ್‌ನಲ್ಲಿ 6 ರನ್‌ ಬೇಕಿತ್ತು.

ಸ್ಟ್ರೈಕ್‌ನಲ್ಲಿದ್ದ ಮೋಹಿತ್‌ ಶರ್ಮಾ ಮೊದಲ ಎಸೆತದಲ್ಲಿ ಸ್ಟಂಪ್‌ ಔಟಾಗುವ ಸಾಧ್ಯತೆ ಇತ್ತು. ಎರಡನೇ ಎಸೆತದಲ್ಲಿ 1 ರನ್‌ ಓಡಿ ಅಶುತೋಷ್‌ಗೆ ಸ್ಟ್ರೈಕ್‌ ನೀಡಿದರು.3ನೇ ಎಸೆತವನ್ನು ಅಶುತೋಶ್‌ ಸಿಕ್ಸ್‌ಗೆ ಅಟ್ಟುವ ಮೂಲಕ ಡೆಲ್ಲಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

ಈ ಸುದ್ದಿ ಓದಿದ್ದೀರಾ? ಪಾಕಿಸ್ತಾನ V/s ನ್ಯೂಜಿಲೆಂಡ್‌ | ಬ್ಯಾಟರ್​ಗಳ ಅಬ್ಬರ; ವಿಶ್ವ ದಾಖಲೆ ಛಿದ್ರಗೊಳಿಸಿದ ಪಾಕ್‌ ತಂಡ

ವಿಪ್ರಜ್‌ ನಿಗಮ್‌ 39 ರನ್‌(15 ಎಸೆತ, 5 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದರೆ ಅಶುತೋಷ್‌ ಔಟಾಗದೇ 66 ರನ್‌(31 ಎಸೆತ, 5 ಬೌಂಡರಿ, 5 ಸಿಕ್ಸ್‌) ಸಿಡಿಸಿ ಗೆಲುವು ತಂದರು.

ಈ ಮೊದಲು ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಲಖನೌ ಉತ್ತಮ ಆರಂಭ ಪಡೆಯಿತು. ಮಾಕ್ರಮ್‌ ಮತ್ತು ಮಿಚೆಲ್‌ ಮಾರ್ಶ್‌ ಮೊದಲ ವಿಕೆಟಿಗೆ 46 ರನ್‌ ಹೊಡೆದರು. ಎರಡನೇ ವಿಕೆಟಿಗೆ ಮಾರ್ಶ್‌ ಮತ್ತು ನಿಕೂಲಸ್‌ ಪೂರನ್‌ 42 ರನ್‌ ಎಸೆತಗಳಲ್ಲಿ 87 ರನ್‌ ಜೊತೆಯಾಟವಾಡಿದರು.

ಮಾರ್ಶ್‌ 72 ರನ್‌(36 ಎಸೆತ, 6 ಬೌಂಡರಿ, 6 ಸಿಕ್ಸರ್‌) ಹೊಡೆದರೆ ಪೂರನ್‌ 75 ರನ್‌(30 ಎಸೆತ, 6 ಬೌಂಡರಿ, 7 ಸಿಕ್ಸ್‌) ಹೊಡೆದು ಔಟಾದರು. ಕೊನೆಯಲ್ಲಿ ಡೇವಿಡ್‌ ಮಿಲ್ಲರ್‌ ಔಟಾಗದೇ 27 ರನ್‌( 19 ಎಸೆತ, 1 ಬೌಂಡರಿ, 2 ಸಿಕ್ಸ್‌) ಸಿಡಿಸಿದ ಪರಿಣಾಮ ಲಖನೌ 200 ರನ್‌ಗಳ ಗಡಿಯನ್ನು ದಾಟಿತು.

ಪಂತ್‌ಗೂ ಬಿಸಿ ಮುಟ್ಟಿಸಿದ ಲಖನೌ ಮಾಲೀಕ ಸಂಜೀವ್‌ ಗೋಯಂಕಾ!

ಐಪಿಎಲ್​ನ 4ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ 1 ವಿಕೆಟ್​ನಿಂದ ಸೋಲೊಪ್ಪಿಕೊಂಡಿದೆ.​ ಈ ಸೋಲಿನ ಬೆನ್ನಲ್ಲೇ ಎಲ್‌ಎಸ್‌ಜಿ ತಂಡದ ಮಾಲೀಕರಾದ ಸಂಜೀವ್ ಗೊಯೆಂಕಾ ಅವರು ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ಆವೃತ್ತಿಯಲ್ಲಿ​ ಐಪಿಎಲ್​ನಲ್ಲಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಎಲ್‌ಎಸ್‌ಜಿ ತಂಡವು ಹೀನಾಯವಾಗಿ ಸೋಲನುಭವಿಸಿತ್ತು. ಈ ಸೋಲಿನ ಬಳಿಕ ಸಂಜೀವ್ ಗೊಯೆಂಕಾ ಎಲ್​ಎಸ್​ಜಿ ತಂಡದ ನಾಯಕರಾಗಿದ್ದ ಕೆ ಎಲ್ ರಾಹುಲ್ ಅವರನ್ನು ಮೈದಾನದಲ್ಲೇ ತರಾಟೆಗೆ ತೆಗೆದುಕೊಂಡಿದ್ದರು.

ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕರ ಈ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗಿದ್ದವು. ಅಲ್ಲದೆ ಇದೇ ಕಾರಣದಿಂದ ಕೆ ಎಲ್ ರಾಹುಲ್ ಕೂಡ ಎಲ್‌ಎಸ್‌ಜಿ ತಂಡವನ್ನು ತೊರೆದಿದ್ದರು. ಇದೀಗ ನಾಯಕ ಬದಲಾದರೂ, ಲಖನೌ ಸೂಪರ್ ಜೈಂಟ್ಸ್ ಮಾಲೀಕರು ಮಾತ್ರ ಬದಲಾಗಿಲ್ಲ.

ಮೊದಲ ಪಂದ್ಯದ ಸೋಲಿನ ಬೆನ್ನಲ್ಲೇ ಹೊಸ ನಾಯಕ ರಿಷಭ್ ಪಂತ್ ಅವರೊಂದಿಗೆ ಸಂಜೀವ್ ಗೊಯೆಂಕಾ ಪಂದ್ಯದ ಬಗ್ಗೆ ಚರ್ಚಿಸುತ್ತಿರುವುದು ದೃಶ್ಯಗಳಲ್ಲಿ ಕಾಣಿಸಿಕೊಂಡಿದೆ. ಇದ ಕೆ ಎಲ್ ರಾಹುಲ್​ಗೆ ಆದ ಪರಿಸ್ಥಿತಿಯೇ ಪಂತ್​ಗೂ ಬಂದು ಎರಗಲಿದೆಯಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

Sanjeev goenka
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಷ್ಯನ್ ಗೇಮ್ಸ್: ಬಿಲ್ಲುಗಾರಿಕೆಯಲ್ಲಿ ಇತಿಹಾಸ ಬರೆದ 17 ವರ್ಷದ ಕುಂಕುಮ್‌ಗೆ ಬಂಗಾರ!

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ನೇ ಸಾಲಿನ ಏಷ್ಯನ್ ಗೇಮ್ಸ್‌ನ 15ನೇ ದಿನ...

ಏಷ್ಯನ್ ಗೇಮ್ಸ್: 4 ದಶಕಗಳ ಬಳಿಕ ಮಹಿಳಾ ಹಾಕಿಯಲ್ಲಿ ಭಾರತಕ್ಕೆ ಒಲಿದ ಸುವರ್ಣ ಪದಕ

ಜಪಾನಿನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಮಹಿಳಾ ಹಾಕಿ...