ಗ್ರಾಮೀಣ ಪ್ರದೇಶದಲ್ಲಿ ಕೌಶಲ್ಯಾಧಾರಿತ ಉದ್ಯೋಗ ಸೃಷ್ಟಿಯಾಗಲು ತರಬೇತಿಯ ಅವಶ್ಯಕತೆ ಇದೆ ಸಂಗಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಫಾದರ್ ಸಂತೋಷ್ ಹೇಳಿದರು.
ಸಿಂದಗಿ ತಾಲೂಕಿನಲ್ಲಿ ಬಿವಿಟಿ ಸಂಸ್ಥೆ ಸೆಲ್ಲೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ಹಾಗೂ ಸಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸ್ವ ಉದ್ಯೋಗ ತರಬೇತಿ ಕುರಿತ 1 ದಿನದ ಕಾರ್ಯಗಾರದಲ್ಲಿ ಮಾತನಾಡಿದ ಅವರು, “ಗ್ರಾಮೀಣ ಪ್ರದೇಶದಲ್ಲಿ ಸೌರ ತಂತ್ರಜ್ಞಾನದ ಅನುಷ್ಠಾನ ಮತ್ತು ಆವಿಷ್ಕಾರದ ಕುರಿತು ಸ್ವಉದ್ಯೋಗ ಕೈಗೊಳ್ಳಲು ಮಾಹಿತಿ ಹಾಗೂ ತರಬೇತಿ ಅತ್ಯಗತ್ಯ. ಈ ಕುರಿತಾಗಿ ಸೆಲ್ಲೋ ಮತ್ತು ಸಂಗಮ ಸಂಸ್ಥೆ ಈಗಾಗಲೇ ಕಾರ್ಯಕ್ರಮಗಳನ್ನು ನಡೆಸುತ್ತಿದೆ” ಎಂದರು.
ತರಬೇತಿ ವ್ಯವಸ್ಥಾಪಕ ಶಿವುಕುಮಾರ, ಗ್ರಾಮೀಣ ಪ್ರದೇಶದಲ್ಲಿ ಸೌರ ತಂತ್ರಜ್ಞಾನ ಅನುಷ್ಠಾನ ಮತ್ತು ಆವಿಷ್ಕಾರದ ಕುರಿತು ಜೀವನೋಪಾಯಕ್ಕೆ ಅನುಕೂಲವಾಗುವ ಉಪಕರಣಗಳ ಕುರಿತು ಮಾರ್ಗದರ್ಶನ ನೀಡಿದರು.
ಕೆನರಾ ಬ್ಯಾಂಕ್‌ನ ಆರ್ಥಿಕ ಸಾಕ್ಷಾರತಾ ಸಂಯೋಜಕ ಗಿರೀಶ್ ದಂಗಿ ಅವರು, ಬ್ಯಾಂಕಿನ ಸಾಲ ಸೌಲಭ್ಯಗಳು ಹಾಗೂ ಇನ್ಸೂರೆನ್ಸ್ ಯೋಜನೆ ಹಾಗೂ ಆರ್ಥಿಕ ಸಾಕ್ಷರತೆ ಕುರಿತು ಮಾಹಿತಿ ನೀಡದರು.
ಇದನ್ನೂ ಓದಿ: ವಿಜಯಪುರ | ಏ.1ರಿಂದ ₹10,000 ಗೌರವಧನ ನೀಡುವಂತೆ ಆಶಾ ಕಾರ್ಯಕರ್ತೆಯರ ಆಗ್ರಹ
ಕಾರ್ಯಾಗಾರದಲ್ಲಿ ಸಂಗಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತೇಜಸ್ವಿನಿ ಹಳ್ಳದ ಕೇರಿ, ವಿಜಯ ಬಂಟನೂರ, ಬಸವರಾಜ ಬಿಸನಾಳ, ಸಂಗೀತಾ ಜಾಬೇನವರ ಮತ್ತಿತರು ಇದ್ದರು.