ಸೌಜನ್ಯ ಪ್ರಕರಣ | ಓದುಗರಿಗೆ ದ್ರೋಹ ಬಗೆಯದಿರಿ: ‘ಉದಯವಾಣಿ’ಗೆ ನಾಗರಿಕ ಸೇವಾ ಟ್ರಸ್ಟ್ ಪತ್ರ

Date:

Advertisements

ಸೌಜನ್ಯ ಪ್ರಕರಣ ಮತ್ತು ಧರ್ಮಸ್ಥಳಕ್ಕೆ ಸಂಬಂಧಿಸಿದ ಹಲವಾರು ಸುದ್ದಿಗಳನ್ನು ದಾಖಲೆ ಸಮೇತವಾಗಿ ಕಳುಹಿಸಿದರೂ ‘ಉದಯವಾಣಿ’ ಪತ್ರಿಕೆ ಒಂದೂ ಸುದ್ದಿಯನ್ನೂ ಪ್ರಕಟಿಸಿಲ್ಲ ಎಂದು ನಾಗರಿಕ ಸೇವಾ ಟ್ರಸ್ಟ್‌ ಆರೋಪಿಸಿದೆ. ‘ಉದಯವಾಣಿ’ ಪತ್ರಿಕೆಯು ಓದುಗರಿಗೆ ದ್ರೋಹ ಬಗೆಯುತ್ತಿದೆ. ಪತ್ರಿಕೆಯ ಹೆಸರ ಪಕ್ಕದಲ್ಲೇ ‘ಹೆಗ್ಗಡೆವಾಣಿ’ ಎಂದೂ ಬರೆದುಕೊಳ್ಳಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಧರ್ಮಸ್ಥಳದಲ್ಲಿ ನಡೆಯುವ ಅಕ್ರಮಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸದೆ ನಿರ್ಲಕ್ಷ್ಯ ಧೋರಣೆ ತಳೆದಿದೆ ಎಂದು ಆರೋಪಿಸಿರುವ ಟ್ರಸ್ಟ್‌, ‘ಉದಯವಾಣಿ’ಗೆ ಪತ್ರ ಬರೆದಿದೆ. ಪತ್ರದಲ್ಲಿ:

“ದಕ್ಷಿಣ ಕನ್ನಡ ಮತ್ತು ಉಡುಪಿ – ಎರಡು ಜಿಲ್ಲೆ ಪ್ರಮುಖ ದೈನಿಕ ಉದಯವಾಣಿ. ಪತ್ರಿಕೆಯು ತನ್ನ ಓದುಗರಿಗೆ ಎಲ್ಲ ಸುದ್ದಿಗಳನ್ನು ನೀಡಬೇಕಾದ್ದು ಪತ್ರಿಕಾ ಧರ್ಮ. ಅದೇನೂ ನಿಮ್ಮ ಉಪಕಾರ ಅಲ್ಲ. ಹೆಗ್ಗಡೆಯವರ ಸುದ್ದಿಗಳನ್ನು ಕಾಲಂಗಟ್ಟಲೆ ಫೋಟೋಸಹಿತ ರಾಜ್ಯಮಟ್ಟದ ವರದಿಯಾಗಿ ಪ್ರಕಟಿಸುವ ನೀವು ನಾಗರಿಕ ಸೇವಾ ಟಸ್ಟ್‌ ಕಳಿಸುವ ವರದಿಗಳನ್ನು, ನಾವು ಹೆಗ್ಗಡೆಯವರ ಅಕ್ರಮಗಳನ್ನು ದಾಖಲೆಸಹಿತ ಬಯಲಿಗೆಳೆಯುತ್ತಿದ್ದರೂ ನೀವು ಪ್ರಕಟಿಸುತ್ತಿಲ್ಲ. ಹೆಗ್ಗಡೆಯವರು ನಿಮಗೆ ಕೋಟಿಗಟ್ಟಲೆ ರೂಪಾಯಿಯ ಜಾಹೀರಾತು ನೀಡುವ ಕಾರಣಕ್ಕಾಗಿ ನೀವು ನಮ್ಮ ಸುದ್ದಿಗಳನ್ನು ಪ್ರಕಟಿಸದಿರುವುದು, ಪದೇಪದೇ ನೆನಪಿಸಿದಾಗ ಯಾವಾಗಲೋ ಒಂದು ಚಿಕ್ಕ ವರದಿಯನ್ನು ಬೆಳ್ತಂಗಡಿ-ಬಂಟ್ವಾಳಕ್ಕೆ ಸೀಮಿತವಾದ ಸುದಿನದಲ್ಲಿ ಪಕಟಿಸುವುದು ನಡೆಯುತ್ತಿದೆ. ನಮ್ಮನ್ನು ನೀವು ಹಗುರವಾಗಿ ಪರಿಗಣಿಸುತ್ತಿದ್ದೀರಿ” ಎಂದು ಕಿಡಿಕಾರಿದೆ.

Advertisements
image 47

“ನಿಮ್ಮ ಪತಿಕೆಯಲ್ಲಿ ವರದಿ ಬಂದರೆ ನಮಗೆ ಕಿರೀಟ ಬರುವುದಿಲ್ಲ. ಆದರೆ, ನೀವು ಸುದ್ದಿ ಪ್ರಕಟಿಸದೆ, ಓದುಗರಿಗೆ ದೋಹ ಮಾಡಿದಂತಾಗುತ್ತದೆ. ನಿಮ್ಮ ಪತಿಕೆಗೆ ಬೇಕೆಟ್‌ನಲ್ಲಿ ‘ಹೆಗ್ಗಡೆವಾಣಿ’ ಎಂದು ಹಾಕಿದರೆ ಸೂಕ್ತವಲ್ಲವೇ? ಧರ್ಮಾಧಿಕಾರಿಗಳ ಪರವಾಗಿ ಉಜಿರೆಯಿಂದ ಧರ್ಮಸ್ಥಳಕ್ಕೆ 4 ಸಾವಿರ ಮಂದಿ ನಡೆಸಿದ ಪಾದಯಾತ್ರೆಯನ್ನು 25 ಸಾವಿರ ಜನರ ಪಾದಯಾತ್ರೆಯೆಂದು ಬರೆಯುತ್ತೀರಿ. ಧರ್ಮಸ್ಥಳದ ದಲಿತರ ಮುರುಕು ಮನೆಗಳ ದುಃಸ್ಥಿತಿ ನಿಮ್ಮ ಕಣ್ಣಿಗೆ ಕಾಣುವುದಿಲ್ಲ. ಹೆಗ್ಗಡೆಯವರ ಬೀಡು ಚಿತ್ರೀಕರಿಸುವ ನಿಮಗೆ ಸೌಜನ್ಯಾಳ ಕುಟುಂಬದ ಗೋಳು ಕೇಳುವುದಿಲ್ಲ. ಧರ್ಮಸ್ಥಳದಲ್ಲಾದ ನೂರಾರು ಎಕರೆ ಅತಿಕ್ರಮಣ ಕಾಣುವುದಿಲ್ಲ. ಇವುಗಳ ಬಗ್ಗೆ ನಾವು ಆಧಾರಸಹಿತ ನಿಮಗೆ ಕಳಿಸಿದ ವರದಿ ಕಸದ ಬುಟ್ಟಿಗೆ ಹಾಕಿದ್ದೀರಿ! ನೀವು ಪಶ್ಚಾತ್ತಾಪ ಪಡಬೇಕಾದ ಕಾಲ ದೂರವಿಲ್ಲ-ನೆನಪಿರಲಿ” ಎಂದು ಎಚ್ಚರಿಕೆ ನೀಡಿದೆ.

“ಇನ್ನು ಮುಂದೆ ನಾವು ನಮ್ಮ ವರದಿ, ಪತ್ರಿಕಾ ಹೇಳಿಕೆಗಳನ್ನು ನಿಮಗೆ ಕಳಿಸುವುದಿಲ್ಲ. ನಿಮಗೆ ದುಂಬಾಲು ಬಿದ್ದು ವರದಿ ಹಾಕಿಸುವ ದರ್ದು ನಮಗಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X