ಕರ್ತವ್ಯಲೋಪ, ಹಣ ದುರ್ಬಳಕೆ ಹಾಗೂ ಬೇಜವಾಬ್ದಾರಿತನ ಆರೋಪದಡಿಯಲ್ಲಿ ಲಿಂಗಸುಗೂರು ಪುರಸಭೆಯ ಮುಖ್ಯಾಧಿಕಾರಿ ರೆಡ್ಡಿರಾಯನಗೌಡ ಅವರನ್ನು ರಾಯಚೂರು ಜಿಲ್ಲಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡ ಹಿರಿಯ ಆರೋಗ್ಯ ನಿರೀಕ್ಷಕರಾಗಿದ್ದಾರೆ. ಈ ಹಿಂದೆ ಮಸ್ಕಿ ಪುರಸಭೆಯ ಮುಖ್ಯಾಧಿಕಾರಿಕಾರಿಯಾಗಿದ್ದರು.
ಹಾಲಿ ಲಿಂಗಸುಗೂರು ಪುರಸಭೆಯ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೆಡ್ಡಿ ರಾಯನಗೌಡ, ಮಸ್ಕಿ ಪುರಸಭೆ ಕಾರ್ಯಾಲಯಕ್ಕೆ ಪೀಠೋಪಕರಣಗಳ ಅಳವಡಿಕೆಗೆ 57.64 ಲಕ್ಷ ಮೊತ್ತದ ಕಾಮಗಾರಿ ನಿರ್ವಹಣೆಯಲ್ಲಿ ಸರ್ಕಾರದ ನಿಯಮಗಳ ಪಾಲನೆ ಮಾಡದೇ ಕರ್ತವ್ಯಲೋಪವೆಸಗಿದ್ದರು.
ಇದನ್ನೂ ಓದಿ: ರಾಯಚೂರು | ನಾಲೆಗಳಿಗೆ ಏ.20ವರಗೆ ನೀರು ಹರಿಸಲು ರೈತರ ಅಹೋರಾತ್ರಿ ಧರಣಿ
ಪೀಠೋಪಕರಣ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಕರವೇ ಅಧ್ಯಕ್ಷ ದುರ್ಗರಾಜ ವಟಗಲ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ ತನಿಖೆ ನಡೆಸಿ, ಆರೋಪ ಸಾಬೀತಾದ ಹಿನ್ನೆಲೆ ರೆಡ್ಡಿ ರಾಯನಗೌಡ ಅವರನ್ನು ಅಮಾನತುಗೊಳಿಸಿದ್ದಾರೆ.