ʼಭಾರತದ ಸಿಲಿಕಾನ್ ವ್ಯಾಲಿʼ ಎಂದೇ ಪ್ರಸಿದ್ಧಿ ಪಡೆದಿರುವ ಬೆಂಗಳೂರು, ಜಗತ್ತಿನ ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿ ಹೆಸರಾಗಿದೆ. ಒಂದೆಡೆ ಬೆಂಗಳೂರು- ಐಟಿ ಸೇವೆಗಳು ಮತ್ತು ಹೊರಗುತ್ತಿಗೆಯ ಜಾಗತಿಕ ಕೇಂದ್ರವಾಗಿ ಬೆಳೆದಿದ್ದರೆ, ಇನ್ನೊಂದೆಡೆ ವೈವಿಧ್ಯಪೂರ್ಣ ಆವಿಷ್ಕಾರಗಳು ಮತ್ತು ಉತ್ಪನ್ನ-ಕೇಂದ್ರಿತ ಕಂಪನಿಗಳಿಗೆ ಹೆಸರುವಾಸಿಯಾಗುತ್ತಿದೆ. ಹೀಗೆ ಈ ಎರಡೂ ವಿಭಿನ್ನ ವಾತಾವರಣಗಳೊಂದಿಗೆ ಬೇರೆ ಬೇರೆ ಆದ್ಯತೆಗಳನ್ನು ಸಾಧಿಸಲು ಹೊರಟಿರುವ ಬೆಂಗಳೂರನ್ನು ಸಿಲಿಕಾನ್ ವ್ಯಾಲಿಯೊಂದಿಗೆ ಮತ್ತೆ ಮತ್ತೆ ಹೋಲಿಕೆ ಮಾಡುವಾಗ ಕೂಲಂಕಷವಾಗಿ ಪರಿಶೀಲಿಸಬೇಕಾಗುತ್ತದೆ. ಈ ಲೇಖನವು ಬೆಂಗಳೂರಿನ ತಂತ್ರಜ್ಞಾನ ಕ್ಷೇತ್ರದ ಇತಿಹಾಸ, ಬೆಳವಣಿಗೆ ಮತ್ತು…

ಮುರಳೀಧರ ಕೇಶವಮೂರ್ತಿ
ಐಟಿ ಕ್ಷೇತ್ರದಲ್ಲಿ 38 ವರ್ಷಗಳ ಅನುಭವ ಹೊಂದಿರುವ ಮುರಳಿಯವರು ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅಲ್ಲಿ ಕೃತಕ ಬುದ್ಧಿಮತ್ತೆ (AI) ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದಾರೆ. ನಂತರ ಕ್ಯಾಲಿಫೋರ್ನಿಯಾದ ನ್ಯಾಷನಲ್ ಸೆಮಿಕಂಡಕ್ಟರ್ಸ್‌ನಲ್ಲಿ ಕೆಲಸ ಮಾಡಿ, ಭಾರತಕ್ಕೆ ಹಿಂದಿರುಗಿದ ನಂತರ, ಹವ್ಲೆಟ್ ಪ್ಯಾಕರ್ಡ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ಸಿಯಾಟಲ್ ಮತ್ತು ಸಿಲಿಕಾನ್ ವ್ಯಾಲಿ (ಅಮೆರಿಕ)ಯಲ್ಲಿ ಅನೇಕ ಸ್ಟಾರ್ಟಪ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿ, ಕೃತಕ ಬುದ್ಧಿಮತ್ತೆ, ದಾಖಲೆ ನಿರ್ವಹಣೆ ಮತ್ತು ಆರ್ಥಿಕ ತಂತ್ರಜ್ಞಾನ ಉದ್ಯಮಗಳನ್ನು ಅಭಿವೃದ್ಧಿಪಡಿಸಿದ್ದಾರೆ.