ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿ ಜಿ.ಹೊಸಹಳ್ಳಿ ಸಮೀಪವಿರುವ ಬ್ಯಾಡಗೆರೆ ಗ್ರಾಮದಲ್ಲಿ ದಿಢೀರ್ ಪ್ರತ್ಯಕ್ಷವಾದ ಕಾಡುಪಾಪವೊಂದನ್ನು ಸ್ಥಳೀಯರು ಹಿಡಿದು ಮತ್ತೆ ಕಾಡಿಗೆ ಬಿಟ್ಟಿರುವ ಘಟನೆ ನಡೆದಿದೆ.
ಸದಾ ಭಯ ಮತ್ತು ನಾಚಿಕೆ ಸ್ವಭಾವದ ಪ್ರಾಣಿಯಾದ ಕಾಡುಪಾಪ ಇತ್ತೀಚೆಗೆ ವಿರಳವಾಗುತ್ತಿದೆ. ಜಿಲ್ಲೆಯ ದೇವರಾಯನದುರ್ಗ, ಸಿದ್ದರಬೆಟ್ಟ, ಹಾಗೂ ನಮ್ಮ ತಾಲೂಕಿನ ಅಂಕಸಂದ್ರ ಕಾಡಿನಲ್ಲಿ ಕಾಣಬಹುದಾದ ಈ ಜೀವಿ ಅದು ಹೇಗೆ ಹಳ್ಳಿಗೆ ಬಂತು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.
ಅಪರೂಪದ ಜೀವಿಗಳನ್ನು ಉಳಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ದಿಟ್ಟ ನಿರ್ಧಾರ ಕೈಗೊಳ್ಳಬೇಕಿದೆ. ಅಳಿವಿನ ಅಂಚಿನಲ್ಲಿರುವ ಈ ಕಾಡು ಪಾಪ ಪ್ರಾಣಿ ಗ್ರಾಮದಲ್ಲಿ ಕಾಣಿಸಿಕೊಂಡಿದೆ ಅಂದರೆ ಕಾಡಿನ ವಿನಾಶದ ಹಾದಿ ತಿಳಿದು ಹಸಿರು ಕ್ರಾಂತಿ ಮಾಡಬೇಕಿದೆ. ಅರಣ್ಯ ಪ್ರದೇಶವನ್ನು ಮನುಷ್ಯನಿಂದ ಕಾಪಾಡಬೇಕಿದೆ ಎಂದು ಪರಿಸರವಾದಿಗಳ ವಾದವಾಗಿದೆ.