ಚುನಾವಣೆ ಸಂದರ್ಭದಲ್ಲಿ ಅಂಗವಿಕಲರಿಗೆ, ವೃದ್ಧರಿಗೆ ಅನಾರೋಗ್ಯಕ್ಕೆ ತುತ್ತಾಗಿರುವವರಿಗೆ ವಿತರಿಸಲೆಂದು ತಂದಿದ್ದ ನೂರಾರು ಗಾಲಿ ಕುರ್ಚಿಗಳು ನಗರಸಭೆಯ ಗೋಡೌನ್‌ನಲ್ಲಿ ತುಕ್ಕು ಹಿಡಿಯುತ್ತಿವೆ.
ಸರ್ಕಾರ ವಿವಿಧ ಯೋಜನೆಗಳು ಅನುಷ್ಠಾನದ ಸಮಸ್ಯೆಯಿಂದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂಬುದನ್ನು ಈ ಗಾಲಿ ಕುರ್ಚಿಗಳು ಸಾಕ್ಷಿಯಾಗಿವೆ. ಸಕಾಲದಲ್ಲಿ ಬಳಕೆಯಾಗದೇ ಹೋದಲ್ಲಿ ಸರ್ಕಾರ ಉದ್ದೇಶವೂ ಸಕಾರಗೊಳ್ಳುವದಿಲ್ಲ. ಫಲಾನುಭವಿಗಳ ಆಯ್ಕೆ, ಹಂಚಿಕೆ ಪ್ರಕ್ರಿಯೆ ನಡೆಸಲು ಸಹ ನಗರಸಭೆ ಆಡಳಿತಕ್ಕೆ ಸಮಯ ಇಲದೇ ಹೋಗಿರುವುದು ವಿಪರ್ಯಾಸ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರಸಭೆ ಆಡಳಿತ ಮಂಡಳಿಯ ಮೊದಲ ಅವಧಿ ಪೂರ್ಣಗೊಂಡಿದೆ. ಅಧ್ಯಕ್ಷ-ಉಪಾಧ್ಯಕ್ಷರು, ಸದಸ್ಯರು ಗಾಲಿ ಖುರ್ಚಿಗಳ ವಿತರಣೆಗೆ ಮುಂದಾಗಿಲ್ಲ. ಸಂಪೂರ್ಣ ನಿಷ್ಪಯೋಜಕವಾಗವ ಮುನ್ನ ಆಡಳಿತಾಧಿಕಾರಿ, ಜಿಲ್ಲಾಧಿಕಾರಿಗಳು ಎಚ್ಚೆತ್ತುಗೊಂಡು, ಅರ್ಹ ಫಲಾನುಭವಿಗಳಿಗೆ ಅವುಗಳನ್ನು ವಿತರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.