ದೇಶದಲ್ಲಿ ದಿನನಿತ್ಯ ಮಹಿಳೆಯರ ಮೇಲೆ ಅತ್ಯಾಚಾರ,ಕೊಲೆ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿವೆ ಎಂದು ಮನನೊಂದು ಯುವತಿಯು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವ ಉದ್ದೇಶದಿಂದ ದೆಹಲಿಗೆ ಕಾಲ್ನಡಿಗೆ ಯಾತ್ರೆ ಹೊರಟಿದ್ದಾರೆ.
ಮಂಜುಳಾ ಯುವತಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಗ್ರಾಮದ ನಿವಾಸಿಯಾಗಿದ್ದಾಳೆ.ಯುವತಿಯು ಬೆಂಡೋಣಿ ಗ್ರಾಮದಿಂದ ಪಾದಯಾತ್ರೆಯನ್ನು ಕಳೆದ ಮೂರ್ನಾಲ್ಕು ದಿನದಿಂದ ಕಾಲ್ನಡಿಗೆ ಮೂಲಕ ತೆರಳುತ್ತಿದ್ದಾರೆ.
ಈ ಸುದ್ಡಿ ಓದಿದ್ದೀರಾ? ರಾಯಚೂರು | ಎಫ್‌ಪಿವಿ ವೈರಸ್‌ಗೆ ರಾಯಚೂರಿನಲ್ಲಿ 38 ಬೆಕ್ಕುಗಳು ಬಲಿhttps://eedina.com/karnataka/raichur-cat-virus-38/2025-03-26/
ಲಿಂಗಸುಗೂರು ಮಾರ್ಗವಾಗಿ ಕಾಲ್ನಡಿಗೆ ಹೊರಟಿರುವ ಮಂಜುಳಾ ಇವರು ನಾಲತವಾಡದಿಂದ ಮುದ್ದೇಬಿಹಾಳ ನಗರಕ್ಕೆ ತೆರಳಿದ್ದಾರೆ. ಮುದ್ದೇಬಿಹಾಳದಲ್ಲಿ ವಾಸ್ತವ್ಯ ಮಾಡಿ ಬಸವನ ಬಾಗೇವಾಡಿ ತಾಲೂಕಿನತ್ತ ಇಂದು ಪ್ರಯಾಣ ಬೆಳೆಸಲಿದ್ದಾರೆ ಎಂದು ಹೇಳಲಾಗಿದೆ.