ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗ ಜಮಾಯಿಸಿ ಹೇಮಾವತಿಯಿಂದ ಕೆರೆಗಳಿಗೆ ನೀರು ಹರಿಸುವಂತೆ ಹಾಗೂ ಕಾವೇರಿ ಕೊಳ್ಳದ ಎಲ್ಲ ಕೆರೆಕಟ್ಟೆಗಳಿಗೆ ನೀರು ಹರಿಸಿ ತುಂಬಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಪಾಂಡವಪುರ, ಕೆ ಆರ್ ಪೇಟೆ , ನಾಗಮಂಗಲ, ಮಂಡ್ಯ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ.ಈ ಸಂಭಂದ ತಿಂಗಳು ಗಟ್ಟಲೆಯಿಂದ ಕೆ ಆರ್ ಪೇಟೆ ತಾಲ್ಲೂಕು ಕಛೇರಿ ಮುಂಭಾಗದಲ್ಲಿಯೂ ಸಹ ಪ್ರತಿಭಟನೆ ನಡೆಸಿ, ರೈತ ಸಂಘ ಜಿಲ್ಲಾದ್ಯಂತ ನಿರಂತರವಾಗಿ ಪ್ರತಿಭಟಿಸಿ, ಸಬಂಧಪಟ್ಟ ಅಧಿಕಾರಿಗಳಿಗೆ, ಇಲಾಖೆಗೆ ಮನವಿ ಮಾಡಿದರು ಇದುವರೆಗೆ ಸ್ಪಂದಿಸಿಲ್ಲ.

ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು, ರೈತರ ಬೆಳೆ ಉಳಿಸಬೇಕು.ಸರಿಯಾದ ಸಮಯಕ್ಕೆ ನೀರು ಬಿಡದೆ ಹೋದರೆ ಬೆಳೆ ನಷ್ಟವಾಗಿ, ರೈತ ಸಾಲಕ್ಕೆ ಗುರಿಯಾಗಬೇಕಾಗುತ್ತದೆ.ಅಧಿಕಾರಿಗಳು ಈ ಬಗ್ಗೆ ಸ್ಪಂದಿಸಬೇಕು.
ಬೇಸಿಗೆಯ ಬಿಸಿಲಿಗೆ ಕಾವೇರಿ ಕೊಳ್ಳದ ಕೆರೆಕಟ್ಟೆಗಳು ಒಣಗಿದ್ದು ನೀರು ಹರಿಸಿ ತುಂಬಿಸಬೇಕು, ಜಾನುವಾರು, ರೈತರಿಗೆ ಅನುಕೂಲ ಆಗುವಂತೆ ಮಾಡಬೇಕಾಗಿ ವಿನಂತಿ ಮಾಡಿದರು.

ರೈತರ ಕೃಷಿ ಪಂಪ್ ಸೆಟ್ ಗಳಿಗೆ ಕನಿಷ್ಠ 7 ಗಂಟೆವರೆಗಿನ ತ್ರಿ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮುಂಗಾರಿನ ಮೊದಲ ಉಳುಮೆ ‘ ಹೊನ್ನಾರು ‘
ಪ್ರತಿಭಟನೆಯಲ್ಲಿ ರೈತಸಂಘದ ಹಿರಿಯ ಮುಖಂಡರಾದ ಜಯರಾಂ,ಮಂಡ್ಯ ಜಿಲ್ಲಾಧ್ಯಕ್ಷ ಕೆಂಪುಗೌಡ,ರಾಜ್ಯ ಕಾರ್ಯದರ್ಶಿ ಹೊಸಕೋಟೆ ಬಸವರಾಜು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ ಮರಂಕಯ್ಯ, ತಾಲ್ಲೂಕು ಅಧ್ಯಕ್ಷರುಗಳಾದ ಪುಟ್ಟೇಗೌಡ, ಆನಂದೂರು ಪ್ರಭಾಕರ್ ಸೇರಿದಂತೆ ಇನ್ನಿತರರು ಇದ್ದರು.