ರಂಝಾನ್ ಕೇವಲ ಉಪವಾಸದ ತಿಂಗಳಲ್ಲದೆ ಸಾಮಾಜಿಕ ಸಾಮರಸ್ಯ ಉತ್ತೇಜಿಸುವ ಹಬ್ಬ

Date:

Advertisements

ರಂಝಾನ್ ಇಸ್ಲಾಂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ತಿಂಗಳಾಗಿದ್ದು, ಈ ತಿಂಗಳಲ್ಲಿ ಉಪವಾಸ, ಪ್ರಾರ್ಥನೆ, ಧ್ಯಾನ ಮತ್ತು ಸಮುದಾಯದ ಹಾಗೂ ಸಮಾಜದ ಒಗ್ಗಟ್ಟನ್ನು ಕಾಣಬಹುದು.

ರಂಝಾನ್ ಪವಿತ್ರ ತಿಂಗಳ ಸಾರ

ರಂಝಾನ್ ಎಂಬುದು ಇಸ್ಲಾಮೀ ಚಂದ್ರ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು ಮತ್ತು ಮುಸಲ್ಮಾನ್ ಬಾಂಧವರಿಗೆ ಅತ್ಯಂತ ಪವಿತ್ರವಾದ ಸಮಯ. ಈ ತಿಂಗಳಲ್ಲಿ ಪವಿತ್ರ ಕುರ್‌ಆನ್ ಗ್ರಂಥವು ಪ್ರವಾದಿ ಮುಹಮ್ಮದ್ ಅವರಿಗೆ ದೇವದೂತ ಜಿಬ್ರೀಲ್ ಮೂಲಕ ಮೊದಲ ಬಾರಿಗೆ ಬಹಿರಂಗಗೊಂಡಿತೆಂದು ನಂಬಲಾಗಿದೆ. ಈ ಕಾರಣದಿಂದಾಗಿ, ರಂಝಾನ್ ತಿಂಗಳು ಆಧ್ಯಾತ್ಮಿಕ ಚಿಂತನೆ, ಸ್ವಯಂ ಶಿಸ್ತು ಮತ್ತು ದೇವರಿಗೆ ಸಮರ್ಪಣೆಯ ಸಂಕೇತ.

Advertisements

ಉಪವಾಸದ ಮಹತ್ವ

ರಂಝಾನ್ ತಿಂಗಳಲ್ಲಿ ಮುಸಲ್ಮಾನ್ ಬಾಂಧವರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ (ರೋಝಾ) ಆಚರಿಸುತ್ತಾರೆ. ಈ ಉಪವಾಸವು ಕೇವಲ ಆಹಾರ ಮತ್ತು ಪಾನೀಯದಿಂದ ದೂರವಿರುವುದು ಮಾತ್ರವಲ್ಲ. ದುಷ್ಟ ಆಲೋಚನೆಗಳು, ಮಾತುಗಳು ಮತ್ತು ಕ್ರಿಯೆಗಳಿಂದಲೂ ದೂರವಿರುವ ಸಂಕಲ್ಪವನ್ನು ಒಳಗೊಂಡಿದೆ.

ಇದು ತಾಳ್ಮೆ, ಸಹಾನುಭೂತಿ ಮತ್ತು ಕರುಣೆಯನ್ನು ಬೆಳೆಸುವ ಒಂದು ಮಾರ್ಗವಾಗಿದೆ. ಉಪವಾಸವು ಐದು ಪ್ರಮುಖ ಕರ್ತವ್ಯಗಳಲ್ಲಿ (ಫರ್ಜ್) ಒಂದಾಗಿದ್ದು, ಇದನ್ನು ಇಸ್ಲಾಂನ ಐದು ಆಧಾರ ಸ್ತಂಭಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ.

ದಿನಚರಿ ಮತ್ತು ಪ್ರಾರ್ಥನೆ

ರಂಝಾನ್ ಸಮಯದಲ್ಲಿ ಮುಸಲ್ಮಾನ್ ಬಾಂಧವರು ದಿನವನ್ನು ಸಹರ್ ಎಂಬ ಮುಂಜಾನೆಯ ಊಟದೊಂದಿಗೆ ಪ್ರಾರಂಭಿಸುತ್ತಾರೆ. ಈ ವೇಳೆ ಸೂರ್ಯೋದಯಕ್ಕೆ ಮುಂಚೆ ಆಹಾರವನ್ನು ಸೇವಿಸಲಾಗುತ್ತದೆ.

ಸೂರ್ಯಾಸ್ತದ ನಂತರ ಇಫ್ತಾರ್ ಎಂಬ ಉಪವಾಸ ಮುಕ್ತಾಯದ ಊಟವನ್ನು ಸಾಮಾನ್ಯವಾಗಿ ಖರ್ಜೂರದೊಂದಿಗೆ ಆರಂಭಿಸಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಚರಿಸಲಾಗುತ್ತದೆ. ಈ ತಿಂಗಳಲ್ಲಿ ತರಾವೀಹ್ ಎಂಬ ವಿಶೇಷ ರಾತ್ರಿ ಪ್ರಾರ್ಥನೆಗಳು ಮಸೀದಿಗಳಲ್ಲಿ ನಡೆಯುತ್ತವೆ. ಇದರಲ್ಲಿ ಕುರ್‌ಆನ್ ಪಠಣ ಮಾಡಲಾಗುತ್ತದೆ.

ಲೈಲತುಲ್ ಖಾದ್ರ್

ರಂಝಾನ್ ಕೊನೆಯ ಹತ್ತು ದಿನಗಳಲ್ಲಿ ಬರುವ ‘ಲೈಲತುಲ್ ಖದ್ರ್’ ಅಥವಾ ‘ಶಕ್ತಿಯ ರಾತ್ರಿ’ ಎಂಬುದು ಅತ್ಯಂತ ಪವಿತ್ರವಾದ ರಾತ್ರಿಯಾಗಿದೆ. ಈ ರಾತ್ರಿಯಲ್ಲಿ ಮಾಡಿದ ಪ್ರಾರ್ಥನೆಗಳು ಮತ್ತು ಒಳ್ಳೆಯ ಕಾರ್ಯಗಳು ಸಾವಿರ ತಿಂಗಳಿಗಿಂತಲೂ ಅಧಿಕ ಕಾಲದಲ್ಲಿ ಮಾಡಿದ ಒಳ್ಳೆಯ ಕಾರ್ಯಗಳಿಗಿಂತಲೂ ಉತ್ತಮವೆಂದು ನಂಬಲಾಗಿದೆ. ರಂಝಾನ್ ತಿಂಗಳು ಮುಗಿದ ನಂತರ ಈದ್ ಉಲ್-ಫಿತ್ರ್ ಎಂಬ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಉಪವಾಸದ ಸಂಪೂರ್ಣತೆಯನ್ನು ಸಂತೋಷದಿಂದ ಆಚರಿಸುವ ಸಮಯವಾಗಿದ್ದು, ಜಕಾತ್ (ದಾನ) ನೀಡುವುದು, ಹೊಸಬಟ್ಟೆ ಧರಿಸುವುದು ಮತ್ತು ಸಮುದಾಯದೊಂದಿಗೆ ಸಂಭ್ರಮಿಸುವುದು ಆಚರಣೆಯ ಪ್ರಮುಖ ಭಾಗವಾಗಿದೆ.

ಸಾಮಾಜಿಕ ಮಹತ್ವ

ರಂಝಾನ್ ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ. ಇದು ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುತ್ತದೆ. ಬಡವರಿಗೆ ದಾನ ಮಾಡುವುದು, ಸಮುದಾಯದಲ್ಲಿ ಹಾಗೂ ಸಮಾಜದಲ್ಲಿ ಒಗ್ಗಟ್ಟನ್ನು ಬೆಳೆಸುವುದು ಮತ್ತು ಸಹಾನುಭೂತಿಯನ್ನು ಹಂಚುವುದು ಈ ತಿಂಗಳ ಮುಖ್ಯ ಉದ್ದೇಶಗಳಾಗಿವೆ.

ಈ ಸುದ್ದಿ ಓದಿದ್ದೀರಾ? ಮೈಸೂರು | ಆಟೋ ಅಮ್ಮನಿಗೆ ಪ್ರತಿಷ್ಠಿತ ‘ ರಿಯಾಲಿಟಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ‘ಪ್ರಶಸ್ತಿ ಗೌರವ

ರಂಝಾನ್ ಎಂಬುದು ಕೇವಲ ಉಪವಾಸದ ತಿಂಗಳು ಮಾತ್ರವಲ್ಲ. ಆತ್ಮ ಶುದ್ಧೀಕರಣ, ದೇವರೊಂದಿಗಿನ ಸಂಬಂಧವನ್ನು ಬಲಪಡಿಸುವ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಮಯವಾಗಿದೆ. ಇತ್ತೀಚಿಗೆ ಸೌಹಾರ್ದ ಇಫ್ತಾರ್ ಕೂಟ ಹೆಚ್ಚು ಪ್ರಚಲಿತ ಆಗುವುದರ ಜತೆಗೆ ಎಲ್ಲ ಧರ್ಮದ ಧಾರ್ಮಿಕ ಮುಖಂಡರು ಭಾಗಿಯಾಗುವ ಮೂಲಕ ಸಮಾಜದ ಸೌಹಾರ್ದ ನಿರ್ಮಾಣಕ್ಕೆ ಸಹಕಾರವಾಗುತ್ತಿರುವುದನ್ನು ಮತ್ತಷ್ಟು ಸಮಾಜದಲ್ಲಿ ಸಾಮರಸ್ಯ ಹೆಚ್ಚಾಗಲು ಸಹಕಾರಿಯಾಗುತ್ತಿದೆ.

ಧಾರ್ಮಿಕ ವೈಷಮ್ಯಗಳನ್ನು ಹುಟ್ಟಿಸುವ ಈ ರಾಜಕಾರಣಿಗಳ ನಡುವೆ ಯುಗಾದಿ, ರಂಝಾನ್ ಎರಡನ್ನೂ ನಾವೆಲ್ಲರು ಜೊತೆ ಸೇರಿ ಆಚರಿಸೋಣ. ಹಬ್ಬ ಹಬ್ಬವಾಗಿರಲಿ, ರಾಜಕಾರಣಿಗಳಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಿಗುವ ಅವಕಾಶವಾಗದಿರಲಿ.

raghavendra 1
+ posts

ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಘವೇಂದ್ರ
ರಾಘವೇಂದ್ರ
ರಾಘವೇಂದ್ರ ರವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಉಂಡಿಗನಾಳು ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುವ ಇವರು ಈದಿನ ಡಾಟ್ ಕಾಮ್ ಮಾಧ್ಯಮ ಸಂಸ್ಥೆಯಲ್ಲಿ ಕಳೆದ 2023 ರಿಂದ ಶಿವಮೊಗ್ಗ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆ, ರಾಜಕೀಯ ವಿಶ್ಲೇಷಣೆ,Anchoring, (ನಿರೂಪಣೆ) ವಿಶೇಷ ಸ್ಟೋರಿ ಹಾಗೂ ತನಿಖಾ ವರದಿಗಾರಿಕೆ ಮಾಡುವುದು ಇವರ ಅಚ್ಚು ಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ, ಮುಖ್ಯಮಂತ್ರಿ, ಸಚಿವರನ್ನು ವಜಾ ಮಾಡುವ ಮಸೂದೆ: ಪ್ರಜಾಪ್ರಭುತ್ವದ ಮೇಲಿನ ದಾಳಿಯೇ?

ಪದಚ್ಯುತಿ ಮಸೂದೆಯು ಭ್ರಷ್ಟಾಚಾರ ನಿಗ್ರಹದ ನೆಪದಲ್ಲಿ ರಾಜಕೀಯ ಪಿತೂರಿಯನ್ನು ಹುಟ್ಟುಹಾಕುತ್ತದೆ. ಬಿಜೆಪಿ...

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X