ಶಿವಮೊಗ್ಗ ಸಂಚಾರಿ ಪಿಎಸ್‌ಐ ತಿರುಮಲೇಶ್ ಅವರ ಸಮಾಜಮುಖಿ ಕಾರ್ಯ ನಗರದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ನಗರದ ಗೋಪಿ ಸರ್ಕಲ್‌ನಿಂದ ಅಮಿರ್ ಅಹಮದ್ ಸರ್ಕಲ್ ಮಾರ್ಗದಲ್ಲಿ ರಸ್ತೆಯಲ್ಲಿದ್ದ ಗುಂಡಿ ಮುಚ್ಚುವ ಕೆಲಸಕ್ಕೆ ಸ್ವತಃ ಮುಂದಾಗಿದ್ದಾರೆ. ಸ್ಮಾರ್ಟ್‌ಸಿಟಿ ಲಿಮಿಟಿಡ್ ನಿರ್ಲಕ್ಷ್ಯ ನೋಡಿ ಬೇರೆ ದಾರಿ ಕಾಣದೆ ಶಿವಮೊಗ್ಗ ಸಂಚಾರಿ ಪೊಲೀಸರು ತಾವೇ ಖುದ್ದಾಗಿ ತಡರಾತ್ರಿ ಕರ್ನೆ, ಬಾಣಲಿ, ಮಟ್ಟಗೋಲು ಹಿಡಿದು ಒಂದಿಷ್ಟು ಕಾಂಕ್ರಿಟ್ ತಂದು ಹಾಕಿ, ರಸ್ತೆ ಗುಂಡಿಯನ್ನು ಮುಚ್ಚಿದ್ದಾರೆ.
ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ತಿರುಮಲೇಶ್, ಎಎಸ್‌ಐ ಮೋಹನ್ ಕುಮಾರ್ ಮತ್ತು ಪೊಲೀಸ್ ಕಾನ್ಸ್ಟೇಬಲ್ ದಿನೇಶ್ ಕುಮಾರ್ ತಂಡ ಗೋಪಿ ಸರ್ಕಲ್ ನಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚುತ್ತಿರುವ ವಿಡಿಯೋ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಫೇಸ್‌ಬುಕ್ ಪೇಜ್‌ನಲ್ಲಿ ಅಪ್‌ಲೋಡ್ ಆಗಿದ್ದು, ಜನರ ಮೆಚ್ಚುಗೆ ಪಡೆದುಕೊಳ್ತಿದೆ.
ಇದನ್ನೂ ಓದಿ: ಶಿವಮೊಗ್ಗ | ಹೊಸನಗರ ಮನೆಗಳ್ಳನ ಬಂಧನ