ಮಹಾಡ್ ಚೌಡರ್ ಕೆರೆ ಪ್ರವೇಶ ವಿಜಯೋತ್ಸವ ಅಂಗವಾಗಿ ಸಮಸಮಾಜ ನಿರ್ಮಾಣದ ಕುರಿತು ವಿಚಾರ ಸಂಕಿರಣ ಹಾಗೂ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಮಿತಿಯಿಂದ ಆಯೋಜಿಸಲಾಯಿತು.
ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಂತೆ ಧಮ್ಮಾನಂದ ಮಹಾಥೇರೊ ಸಾನಿಧ್ಯ ವಹಿಸಿದ್ದರು.
ವಿಶೇಷ ಉಪನ್ಯಾಸ ನೀಡಲು ಆಗಮಿಸಿದ ಮಹಾರಾಷ್ಟ್ರದ ಮಹಾಡ ಪಟ್ಟಣದ ವ ಪ್ರೊ.ವಿಶಾಲ ಖಾಂಭೆ ದಂಪತಿ ಚೌಡಾರ್ ಕೆರೆಯಿಂದ ತಂದ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಸ್ಥಾಪಕ ಪರಶುರಾಮ ನೀಲನಾಯಕ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಪ್ರತಿವರ್ಷ ನಾವೆಲ್ಲರೂ ಸಮಸಮಾಜ ನಿರ್ಮಾಣಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿದ ಮಾರ್ಗದಲ್ಲಿ ಸಾಗೋಣʼ ಎಂದು ತಿಳಿಸಿದರು.
ಪ್ರೊ.ವಿಶಾಲ ಖಾಂಭೆ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚೌಡರ್ ಕೆರೆಯ ಕುರಿತು ನಡೆಸಿದ ಸತ್ಯಾಗ್ರಹ ಮತ್ತು ಕುಡಿಯುವ ನೀರಿಗಾಗಿ ಅಂಬೇಡ್ಕರ್ ಅವರು ನಡೆಸಿದ ಹೋರಾಟದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಕದಸಂಸ (ಭೀಮವಾದ) ಜಿಲ್ಲಾ ಸಂಚಾಲಕ ಸುನೀಲ ಸಂಗಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೋಡೆ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯಕುಮಾರ ಮಾಳಗೆ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ, ಹುಮನಾಬಾದ್ ತಾಲೂಕಾ ಪಂಚಾಯತ ಸಹಾಯಕ ನಿರ್ದೇಶಕ ತಮ್ಮಣ್ಣಾ, ನಗರಸಭೆ ನಾಮನಿರ್ದೇಶಿತ ಸದಸ್ಯ ಸೂರ್ಯಕಾಂತ ಸಾಧುರೆ ಸೇರಿದಂತೆ ಪ್ರಮುಖರಾದ ಎಂ.ಎ. ಜಬ್ಬಾರ್, ಶಶಿಕಾಂತ ಪೊಲೀಸ್ ಪಾಟೀಲ ಚೌಳಿ, ಗೌತಮ ಚಿಂತಲಗೇರಾ, ಸಂಜೀವಕುಮಾರ ಮೇಟಿ, ಸೂರ್ಯಕಾಂತ ಸಾಧುರೆ, ಗೋವಿಂದ ಪೂಜಾರಿ, ಸಚಿನ ಕೌಠಾ, ಕೃಷ್ಣಾ ಹೊಸಮನಿ, ಚಂದ್ರಕಾಂತ ಶಾಹಬಾದಕರ್, ಪಾಂಡುರಂಗ ಬೆಲ್ದಾರ್, ಸುರೇಶ ಕಾಳೆ, ಸಿದ್ಧಾರ್ಥ ಭಾವಿಕಟ್ಟಿ, ಸಿದ್ರಾಮ ಶಿಂಧೆ, ರಾಜು ಸಾಗರ, ಸುಧಾಕರ ಶೇರಿಕಾರ, ಬಬ್ರುವಾಹನ, ಧನರಾಜ, ಸಂಜೀವಕುಮಾರ ಡಾಕುಳಗಿ ಇದ್ದರು.
ಈ ಸುದ್ದಿ ಓದಿದ್ದೀರಾ? ಐಪಿಎಲ್ ಕ್ರಿಕೆಟ್ | ಆಟಗಾರರು, ಅಭಿಮಾನಿಗಳು ಮತ್ತು ಸೋಷಿಯಲ್ ಮೀಡಿಯಾ ಎಂಬ ಕಿಂದರಿಜೋಗಿ
ಕಾರ್ಯಕ್ರಮದ ಆಯೋಜಕರಾದ ಕಿಶ ನ್ವಾಘಮಾರೆ ಭಾಲ್ಕಿ, ಶಿವಕುಮಾರ ಶಿಂಧೆ ಚಂದನಹಳ್ಳಿ, ತುಕಾರಾಮ ಮೇತ್ರೆ, ಪುಟ್ಟರಾಜ್ ದೀನೆ, ಅಂಕುಶ ಡಾಂಗೆ, ಸುಧಾಕರ ಸಂಗಮ, ಅಡ್ವಾನಿ ನಾಯಕ, ಶಿವರಾಜ ಮಹೇಶಗೊಂಡ ಉಪಸ್ಥಿತರಿದ್ದರು. ಸುನೀಲ ಸಂಗಮ ಸ್ವಾಗತಿಸಿದರು, ಅಂಬಾದಾಸ ಗಾಯಕವಾಡ್ ವಂದಿಸಿದರು, ಅಂಬಾದಾಸ ಸೋನಿ ನಿರೂಪಿಸಿದರು.