ಬಗರ್ ಹುಕ್ಕುಂ ಸಮಸ್ಯೆ ಬಗೆಹರಿಸದೆ ರೈತರನ್ನು ಅವಮಾಾನಿಸಿ, ರೈತರ ಮೇಲೆ ಗೂಂಡಾ ವರ್ತನೆ ತೋರಿದ ಗುಬ್ಬಿ ಶಾಸಕ ಶ್ರೀನಿವಾಸ್ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಗುಬ್ಬಿ ತಹಶೀಲ್ದಾರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೆಕು ಎಂದು ಒತ್ತಾಯಿಸಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಪಿಐಎಂ, ಕೆಪಿಆರ್ ಎಸ್, ಸಿಐಟಿಯು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಿಪಿಐಎಂ ಪಕ್ಷದರಾಜ್ಯ ಕಾರ್ಯದರ್ಶಿ ಡಾ ಕೆ. ಪ್ರಕಾಶ್ ಮಾತನಾಡಿ ಐದು ಬಾರಿ ಶಾಸಕರಾಗಿ ಆಯ್ಕೆಯಾದರು ಬಗರ್ ಹುಕ್ಕುಂ ಸಾಗುವಳಿದಾರರ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲವಾಗಿರುವುದರಿಂದ ರೈತರು ಅರ್ಜಿ ಸಲ್ಲಿಸಿಕೊಂಡು ಭೂಮಿಗಾಗಿ ಅಲೆದಾಡುತ್ತಿದ್ದಾರೆ ಎಂದರು.
ಗುಬ್ಬಿ ತಾಲೂಕು ಕಚೇರಿ ಮುಂದೆ ಮಾರ್ಚ್ 5 ರಂದು ಪ್ರತಿಭಟನಾ ನಿರತ ರೈತರ ಮೇಲೆ ಶಾಸಕ ಶ್ರೀನಿವಾಸ್ ಗೂಂಡಾ ವರ್ತನೆ ತೋರಿರುವುದು ಖಂಡನೀಯ ಎಂದರು.
ಭೂ ಸುಧಾರಣೆಯ ಹರಿಕಾರರು ಎಂದು ಹೇಳಿಕೋಳ್ಳುವ ಕಾಂಗ್ರೇಸಿಗರೆ ತಮ್ಮ ಪಕ್ಷದ ಶಾಸಕನ ಈ ರೀತಿಯ ವರ್ತನೆಗೆ ಏನು ಹೇಳುತ್ತಿರಿ ಎಂದು ಪ್ರಶ್ನಿಸಿದರು. ರೈತರ ಬಗ್ಗೆ ಕಾಂಗ್ರೇಸ್ ನೀತಿ ಏನು ಎಂಬುದರ ಬಗ್ಗೆ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಸಂಯುಕ್ತ ಹೋರಾಟ -ಕರ್ನಾಟಕದ ಜಿಲ್ಲಾ ಸಂಚಾಲಕ ಸಿ ಯತಿರಾಜು ಮಾತನಾಡಿ ಶಾಸಕರ ವರ್ತನೆ ಒಪ್ಪಲು ಆಗದು. ಅವರು ಗೂಂಡಗಿರಿಯಿಂದ ವರ್ತಿಸಿದ್ದಾರೆ. ರೈತರ ಪ್ರಶ್ನೆಯನ್ನು ನಿಭಾಯಿಸಬೇಕಾದ ತಹಶೀಲ್ದಾರ್ ಅವರು ರಾಜಕೀಯ ಪುಡಾರಿತರ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಎಐಕೆಎಸ್ ಸಂಘಟನೆಯ ಕಂಬೇಗೌಡ ಮಾತನಾಡಿ ರೈತರ ಪ್ರಶ್ನೆಗಳ ಬಗ್ಗೆ ಜನ ಪ್ರತಿನಿಧಿಗಳು ರೈತರ ಪರ ವಹಿಸಿ ಪರಿಹಾರ ರೂಪಿಸದೆ ಬೆದರಿಸುವ ತಂತ್ರಗಾರಿಕೆ ಸರಿಯಲ್ಲ ಎಂದರು
ಭೂಮಿ ಮತ್ತು ವಸತಿರಹಿತರ ಹೊರಾಟ ಸಮಿತಿ ಜಿಲ್ಲಾ ಸಂಚಾಲಕ ನಾಗಭೂಷಣ್ ಹಂದ್ರಾಳ್ ಮಾತನಾಡಿ ರೈತರನ್ನು ಬೆದರಿಸಿರುವವರ ಮೇಲೆ ದೂರುದಾಖಲು ಮಾಡಬೇಕು. ಜಿಲ್ಲಾ ಪೋಲಿಸ್ ಇಲಾಖೆ ಬಲಾಢ್ಯರ ಮೇಲೆ ದೂರುಗಳನ್ನು ಯಾಕೆ ದಾಖಲಿಸುತ್ತಿಲ್ಲ ಎಂದು ಪ್ರಶ್ನೆಮಾಡಿದರು.
ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ ಅರ್.ಎಸ್. ಚನ್ನಬಸಣ್ಣ ಮಾತನಾಡಿ ಗುಬ್ಬಿಯ ಗಂಗಯ್ಯನ ಪಾಳ್ಯದಲ್ಲಿ ಹೋರಾಟ ನಿರತ ರೈತರ ಮೇಲೆ 11ಕ್ಕೂ ಹೆಚ್ಚು ಕೇಸ್ ಗಳನ್ನು ಹಾಕಿಸಿದೆ. ಮಹಿಳೆಯು ಮತ್ತು ರೈತರ ಮೇಲೆ ತಲೆಒಡೆದು ಕೈ- ಕಾಲು ಮುರಿಯಲಾಗಿದೆ. ಅದರು ಸರ್ಕಾರ ಬಡರೈತ ಪರ ವಹಿಸದೆ ಬೆದರಿಸುವುದನ್ನು ರೈತರು ಸಹಿಸಬಾರದು, ಮತ್ತು ಹಿಂದೆ 5 ಲಕ್ಷ ಕೊಟ್ಟರೆ ಬಗರ್ ಹುಕ್ಕುಂ ಸಾಗುವಳಿ ಬೇಕಾದವರಿಗೆ ಮಂಜೂರು ಮಾಡಿಿಸುವ ದಲ್ಲಾಳಿಗಳು ಇದ್ದಾರೆ. ಹೋರಾಟದಿಂದ ಅವರ ಅಂಗಡಿ ಮುಚ್ಚಿ ರೈತ ಸಂಘದ ಮೇಲೆ ಸುಳ್ಳು ಅಪಾದನೆ ಮಾಡುತ್ತಿದ್ದಾರೆ ಎಂದರು.
ಸಿಐಟಿಯು ಜಿಲ್ಲಾಅಧ್ಯಕ್ಷ ಸೈಯದ್ ಮುಜೀಬ್, ಕಟ್ಟಡಕಾರ್ಮಿಕರ ಸಂಘದ ಬಿ.ಉಮೇಶ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್. ಕೆ.ಸುಬ್ರಮಣ್ಯ ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರಾಂತರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜ್ಜಪ್ಪ , ಬಗರ್ ಹುಕ್ಕುಂ ಸಾಗುವಳಿ ಹೋರಾಟ ಸಮಿತಿ ದೊಡ್ಡನಂಜಪ್ಪ ,ಮಹಿಳಾ ನಾಯಕಿ ರಾಜಮ್ಮ ಸಿಐಟಿಯು ಜಿಲ್ಲಾ ಖಜಾಂಚಿ ಎ. ಲೋಕೇಶ್, ಕಟ್ಟಡಕಾರ್ಮಿಕ ಸಂಘದ ಕಲೀಲ್, ಯುವ ಮುಖಂಡ ಸುಜೀತ್ ನಾಯಕ್, ಜನವಾದಿ ಮಹಿಳಾ ಸಂಘಟನೆಯ ಅರ್‌ಕಲ್ಪನಾ , ಇನ್ಸಾಪ್ ನ ರಫೀಕ್ ಪಾಷ, ರಾಜ್ಯರೈತ ಸಂಘದ ಶಬ್ಬಿರ್ ಅಹಮದ್ ಸೇರಿದಂತೆ ಹಲವರು ಭಾಗವಹಿಸಿದ್ದರು.