ಏ.1 ರಿಂದ ಅನ್ವಯವಾಗುವಂತೆ ಹಾಲಿನ ದರ ಹಾಗೂ ವಿದ್ಯುತ್ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ನಿರ್ಧಾರವು ಅತ್ಯಂತ ಜನವಿರೋಧಿ ನಡೆಯಾಗಿದೆ ಎಂದು ಎಐಯುಟಿಯುಸಿ ವಿಜಯಪುರ ಜಿಲ್ಲಾ ಸಮಿತಿ ಅಭಿಪ್ರಾಯಸಿದೆ.
ಒಂದು ಲೀಟರ್ ಹಾಲಿಕೆ 4 ರೂಪಾಯಿಯಂತೆ ಹಾಲಿನ ದರ ಹೆಚ್ಚಿಸಿರುವುದು, ವಿದ್ಯುತ್ ನೌಕರರಿಗೆ ಗ್ರಾಚ್ಯೂಟಿ ಹಾಗೂ ಪಿಂಚಣಿ ನೀಡಲು ಪ್ರತಿ ಯೂನಿಟ್‌ಗೆ 0.36 ಪೈಸೆ ಹೆಚ್ಚಿಸಿರುವುದು, ಈಗಾಗಲೇ ನೀರಿನ ದರ, ಬಸ್ ಟಿಕೆಟ್ ದರ ಏರಿಕೆ ಮಾಡಿ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರು ಹಾಗೂ ದುಡಿಯುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸರ್ಕಾರವು ಕಾರ್ಮಿಕರ ಅಸಂಘಟಿತ ವಲಯದ ಕಾರ್ಮಿಕರಿಗೆ, ಗುತ್ತಿಗೆ ಕಾರ್ಮಿಕರಿಗೆ ಸ್ಕೀಮ್, ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಮಾಡದಿರುವುದರಿಂದ ಅವರ ಕೊಳ್ಳುವ ಸಾಮರ್ಥ್ಯವು ಹೆಚ್ಚಳವಾಗದೇ ಇರುವುದರಿಂದ ಈ ದರ ಏರಿಕೆಯು ಅವರ ಜೀವನವನ್ನು ಮತ್ತಷ್ಟು ದುರ್ಬರಗೊಳಿಸುತ್ತದೆ. ಆದ್ದರಿಂದ ಈ ಜನವಿರೋಧಿ ಹಾಲಿನ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕೆಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಚ್. ಟಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಹರನಾಳ ಗ್ರಾಪಂ ಅವ್ಯವಹಾರ ಖಂಡಿಸಿ ದಸಂಸ ಪ್ರತಿಭಟನೆ