ತುಮಕೂರು | ಡಿಜಿಟಲ್ ಮಾಧ್ಯಮವನ್ನು ಸಮಾಜದ ಒಳಿತಿಗೆ ಬಳಸಿ : ಸಾಹೇ ವಿವಿ ಕುಲಪತಿ ಡಾ.ಲಿಂಗೇಗೌಡ

Date:

Advertisements

 ತಂತ್ರಜ್ಞಾನದ ಆವಿಷ್ಕಾರದಿಂದಾಗಿ ಡಿಜಿಟಲ್ ಮಾಧ್ಯಮದ ಮಜಲುಗಳು ವ್ಯಾಪಕವಾಗಿದ್ದು, ಪತ್ರಿಯೊಬ್ಬರಿಗೂ ಇದರ ಸೇವೆ ಸಿಗುತ್ತಿದೆ. ಸಮಾಜದ ಒಳಿತಿಗಾಗಿ ಮಾತ್ರ ಈ ಮಾಧ್ಯಮಗಳನ್ನು ಬಳಸಿಕೊಳ್ಳಿ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಪತಿ ಡಾ.ಲಿಂಗೇಗೌಡ ತಿಳಿಸಿದರು.

ತುಮಕೂರು ನಗರದ ಎಸ್ ಎಸ್‌ಎಸ್‌ಐಟಿ ಕ್ಯಾಂಪಸ್ ಆವರಣದಲ್ಲಿ ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಷನ್,ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ,, ಈದಿನ ಡಾಟ್ ಕಾಮ್ ಹಾಗೂ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು (ಪತ್ರಿಕೋದ್ಯಮ ವಿಭಾಗ) ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ “ಡಿಜಿಟಲ್ ಮಾಧ್ಯಮ: ಸವಾಲು ಮತ್ತು ಸಾಧ್ಯತೆಗಳು” ಕುರಿತು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,  

1001232907

ಮಾಧ್ಯಮಗಳ ಮಹತ್ವ ಮತ್ತು ಅವುಗಳ ಅಗತ್ಯತೆಯನ್ನು ಅರಿತುಕೊಳ್ಳಬೇಕು. ಆ ಮೂಲಕ ಅಭಿವೃದ್ಧಿ ಮತ್ತು ಜನಪರ ಒಳಿತಿಗಾಗಿ ಮಾಧ್ಯಮಗಳ ಬಳಕೆಯಾಗಬೇಕು. ಪತ್ರಿಕೋದ್ಯಮ ವಿದ್ಯಾರ್ಥಿಗಳು ಡಿಜಿಟಲ್ ಮಾಧ್ಯಮ ತಮ್ಮ ಮುಂದೆ ಇಟ್ಟಿರುವ ಸವಾಲುಗಳನ್ನು ಎದುರಿಸಿ ತಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕು ಎಂದು  ಕರೆ ನೀಡಿದರು.

Advertisements

ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ ಪ್ರಸ್ತುತ ಎಲ್ಲಾ ಕ್ಷೇತ್ರ ಗಳಲ್ಲೂ ಸವಾಲೇ ಆಗಿದೆ. ಎಲ್ಲಾ ಸವಾಲುಗಳನ್ನು ಎದುರಿಸುವ ಶಕ್ತಿ ಸಾಮರ್ಥ್ಯಗಳನ್ನು ಬಳಸಿಕೊಳ್ಳಬೇಕಿದೆ. ಒಂದು ಕಾಲದಲ್ಲಿ ಶಕ್ತಿ ಬಲಕ್ಕಿತ್ತು, ಇಂದು ಕೌಶಲ್ಯಕ್ಕಿದೆ. ಕೌಶಲ್ಯ ಮತ್ತು ತಂತ್ರಜ್ಞಾನ ವನ್ನು ಹೇಗೆ ಬಳಸಿಕೊಳ್ಳುತ್ತೇವೆ, ಅದರ ಮೇಲೆ ನಮ್ಮ ಭವಿಷ್ಯ ನಿಂತಿರುತ್ತದೆ ಎಂದರು. 

1001232909

ಹಿಂದೆ ಮುದ್ರಣ ಪತ್ರಿಕೆ ತುಂಬಾ ಜನ ಓದುತ್ತಿದ್ದರು. ಈಗ ಜನರಿಗೆ ಪತ್ರಿಕೆ ಓದಲು ಸಮಯ ವಿಲ್ಲವೋ, ಆಸಕ್ತಿ ಇಲ್ಲವೋ, ಮನಸ್ಸಿಲ್ಲವೋ ಗೊತ್ತಿಲ್ಲ. ಸುದ್ದಿ ಮಾಧ್ಯಮಗಳು ಆರ್ಕಷಿತ ಮತ್ತು ವರ್ಣರಂಜಿತ ಸುದ್ದಿಗಳು ಬೇಕು. ಸುದ್ದಿ ಹೊರಗೆ ಬರುವ ತನಕ ಅದು ನಿಮ್ಮ ನಿಯಂತ್ರಣದಲ್ಲಿ ಇರುತ್ತದೆ. ಸುದ್ದಿ ಹೊರಗೆ ಬಂದ ಮೇಲೆ ಅದು ನಿಮ್ಮನ್ನು ಆಳುತ್ತದೆ. ಸುದ್ದಿಗಳು ನ್ಯಾಯ, ಸತ್ಯ, ಧರ್ಮದ ನಿಟ್ಟಿನಲ್ಲಿ ಒಳ್ಳೆಯ ಆಲೋಚನೆ ಉತ್ತಮ ಸುದ್ದಿಗಳನ್ನು ನೀಡಲು ಸಿದ್ದರಾಗಿ ಎಂದು ಭವಿಷ್ಯದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಅವರು ಕಿವಿ ಮಾತುಗಳನ್ನು ಹೇಳಿದರು. 

ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ  ಮಾತನಾಡಿ, ಸುದ್ದಿಗಳನ್ನು ಮಾಡುವಾಗ ಹಳ್ಳಿಯ ಮತ್ತು ರೈತರ ಸಮಸ್ಯೆ, ಆದರ್ಶ ರೈತ, ಆದರ್ಶ ಕೃಷಿಕ, ಶುಂಠಿ, ನಾಟಿ ಈರುಳ್ಳಿ, ಉಪ್ಪಿನಕಾಯಿ ಮಾಡುವ ಹಳ್ಳಿಯ ಪ್ರತಿಭೆ ಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ರೈತರು, ಸಮಾಜ ಸುಧಾರಕರು, ನಾಡಿಗಾಗಿ ಶ್ರೀಗಂಧದಂತೆ ಶ್ರಮಿಸಿದವರ ಬಗ್ಗೆ ಸುದ್ದಿಗಳನ್ನು ಪ್ರಸಾರ ಮಾಡುವತ್ತ ಮುಂದಾಗುವ ಅಗತ್ಯತೆಯನ್ನು ಒತ್ತಿ ಹೇಳಿದರು.

1001232910

ಈದಿನ ಡಾಟ್ ಕಾಮ್‌ನ ಸಮುದಾಯ ವಿಭಾಗ ದ ಮುಖ್ಯಸ್ಥ  ಡಾ. ಹೆಚ್. ವಿ. ವಾಸು  ಮಾತನಾಡಿ ಸಮುದಾಯದ ಒಳಿತಿಗಾಗಿ ಮಾಧ್ಯಮ ಕೆಲಸ ಮಾಡಬೇಕು. ನಾವೆಲ್ಲರು ಸೇರಿ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು. 

ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಡಾ. ಹೇಮಲತಾ ಪಿ. ಮಾತನಾಡಿ ವಿದ್ಯಾರ್ಥಿ ಗಳಿಗೆ ಹೊಸದಾಗಿ ಇನ್ನಷ್ಟು ತಂತ್ರಜ್ಞಾನ ಕಲಿತು-ಬಳಸಿ ಮುಂದಿನ ಉದ್ಯೋಗ ಭವಿಷ್ಯವನ್ನು ಖಾತ್ರಿ ಮಾಡಿಕೊಳ್ಳಿ ಎಂದರು.

ಸಮಾರೋಪ ಮಾತುಗಳನ್ನಾಡಿದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್, ಮುಂದಿನ ದಿನದಲ್ಲಿ ವೈದ್ಯಕೀಯ ಮತ್ತು ತಂತ್ರಜ್ಞಾನ ಶಿಕ್ಷಣದಲ್ಲಿ ಮಾಧ್ಯಮಗಳ ಪಾತ್ರ, ವಿವಿಧ ಮಾಧ್ಯಮಗಳ ಅನಿವಾರ್ಯತೆ ಮತ್ತು ಅಗತ್ಯತೆಯ ವಿಷಯಗಳನ್ನು ಕುರಿತ ಕಾರ್ಯಾಗಾರಗಳನ್ನು ಮುದ್ರಣ ಮತ್ತು ಟೆಲಿವಿಷನ್ ಮಾಧ್ಯಮ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಮುಂದುವರಿಸಲಾಗುವುದು ಎಂದರು. 

ಈದಿನ ಡಾಟ್ ಕಾಮ್‌ನ ರಿಸರ್ಚ್ ಟೀಮ್‌ನ ಮುಖ್ಯಸ್ಥರಾದ ಭರತ್ ಹೆಬ್ಬಾಳ್,  ಕನ್ನಡ ಫ್ಯಾಕ್ಟ್ ಚೆಕ್ ನ ಸಂಪಾದಕ ಮುತ್ತುರಾಜು, ಪತ್ರಕರ್ತರಾದ ಚಂದನ್, ಅನಿಲ್ ಕುಮಾರ್,  ಸಂತೋಷ್, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಎಂ.ಪಿ.ಶ್ವೇತ ಕಾರ್ಯಕ್ರಮ ನಿರೂಪಿಸಿದರೆ, ರವಿ ವಂದನಾರ್ಪಣೆ ಮಾಡಿದರೆ, ಉಪನ್ಯಾಸಕಿ ಶಿಲ್ಪಶ್ರೀ ಸ್ವಾಗತ ಮಾಡಿದರು. ತುಮಕೂರು ಸೇರಿದಂತೆ ರಾಜ್ಯದ ವಿವಿದ ಭಾಗಗಳಿಂದ ಆಗಮಿಸಿ, ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 130 ಮಂದಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಸೆ. 6ಕ್ಕೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ

ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ಉತ್ಸವದಲ್ಲಿ ಈ ಬಾರಿ ಏನೆಲ್ಲಾ...

ಬೆಳಗಾವಿ : ಗಾಂಜಾ ಮಾರಾಟ ಮಾಫಿಯಾ 9 ಮಂದಿ ಅರೆಸ್ಟ್ : ರೂ 30 ಲಕ್ಷ ಮೌಲ್ಯದ ಗಾಂಜಾ ವಶ

ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಜಾಲ ಬಯಲಾಗಿದ್ದು, ಬೆಳಗಾವಿ ಪೊಲೀಸರು ದೊಡ್ಡ...

ಬಾಗಲಕೋಟೆ | ಬಿಜೆಪಿ ಮತಗಳ್ಳತನ ವಿರುದ್ಧ ವ್ಯಾಪಕ ಹೋರಾಟ: ಮಾಜಿ ಸಚಿವ ವಿನಿಯಕುಮಾರ್

ಬಿಜೆಪಿ ಮತಗಳ್ಳತನ ನಡೆಸಿ ಚುನಾವಣೆ ಅಕ್ರಮ ಎಸಗಿರುವ ಬಗ್ಗೆ ವ್ಯಾಪಕವಾಗಿ ಹೋರಾಟ...

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

Download Eedina App Android / iOS

X