ಸನ್‌ರೈಸರ್ಸ್ ಹೈದ್ರಾಬಾದ್ ತಂಡವು ತಮ್ಮತವರು ರಾಜ್ಯದಲ್ಲಿರುವ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಡುವುದಿಲ್ಲ. ಬೇಕಿದ್ದರೆ ಅಲ್ಲಿನ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುತ್ತೇವೆ ಎಂದು ಹೇಳಿದೆ.
ಕ್ರೀಡಾಂಗಣದಲ್ಲಿನ ನೀಡಬೇಕಾದ ಉಚಿತ ಟಿಕೆಟ್‌ಗಳ ವಿಚಾರವಾಗಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಜೊತೆ ಎಸ್‌ಆರ್‌ಎಚ್ ಪ್ರಾಂಚೈಸಿ ನಡುವೆ ತಿಕ್ಕಾಟ ನಡೆಯುತ್ತಿದೆ. ಹೀಗಾಗಿ, ಪಂದ್ಯವನ್ನೇ ಸ್ಥಳಾಂತರಿಸುವುದಾಗಿ ಎಸ್‌ಆರ್‌ಎಚ್ ಪ್ರಾಂಚೈಸಿ ಎಚ್ಚರಿಕೆ ನೀಡಿದೆ.
ಎಚ್‌ಸಿಎ ಉನ್ನತ ಅಧಿಕಾರಿಗಳ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಫ್ರಾಂಚೈಸಿ ಆರೋಪಿಸಿದೆ. ತವರಿನಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಬೇರೆ ಕ್ರೀಡಾಂಗಣಗಳಲ್ಲಿ ಆಡುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಎಸ್‌ಆರ್‌ಎಚ್‌ನ ಜನರಲ್ ಮ್ಯಾನೇಜರ್ ಶ್ರೀನಾಥ್ ಟಿಬಿ ಅವರು ಎಚ್‌ಸಿಎ ಖಜಾಂಚಿ ಸಿಜೆ ಶ್ರೀನಿವಾಸ್ ರಾವ್ ಅವರಿಗೆ ಪತ್ರ ಬರೆದಿದ್ದಿದ್ದಾರೆ. ಎಚ್‌ಸಿಎ ನಡವಳಿಕೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. “ಎಚ್‌ಸಿಎ ಅಧ್ಯಕ್ಷರ ನಡವಳಿಕೆಗಳು ತಂಡವು ಹೈದ್ರಾಬಾದ್ ಕ್ರೀಡಾಂಗಣದಲ್ಲಿ ಆಡುವುದು ಇಷ್ಟವಿಲ್ಲ ಎಂಬಂತೆ ತೋರಿಸುತ್ತಿವೆ. ಹಾಗೇನಾದರೂ ಇದ್ದರೆ, ಲಿಖಿತವಾಗಿ ತಿಳಿಸಿಬಿಡಿ, ನಾವು ಬೇರೆ ಸ್ಥಳಕ್ಕೆ ಹೋಗುತ್ತೇವೆ” ಎಂದಿದ್ದಾರೆ.
ಕ್ರೀಡಾಂಗಣಕ್ಕೆ ಸೂಕ್ತವಾದ ಬಾಡಿಗೆ ಪಾವತಿಸುತ್ತೇವೆ.ಹಲವು ವರ್ಷಗಳಿಂದ, ಒಟ್ಟು 3,900 ಉಚಿತ ಟಿಕೆಟ್‌ಗಳಲ್ಲಿ 50 ಟಿಕೆಟ್‌ಗಳನ್ನು (F12A ಬಾಕ್ಸ್) ಎಚ್‌ಸಿಎಗೆ ಹಂಚಿಕೆ ಮಾಡಲಾಗಿದೆ. ಆದರೆ, ಈಗ ಬಾಕ್ಸ್ ಸಾಮರ್ಥ್ಯ ಕೇವಲ 30 ಎಂದು ಹೇಳಿಕೊಳ್ಳುತ್ತಿದ್ದೀರಿ. ಬೇರೆ ಬಾಕ್ಸ್‌ನಲ್ಲಿ ಹೆಚ್ಚುವರಿಯಾಗಿ 20 ಉಚಿತ ಟಿಕೆಟ್‌ಗಳನ್ನು ಕೇಳುತ್ತಿದ್ದೀರಿ. ನೀವು ಎಫ್3 ಬಾಕ್ಸ್ ಅನ್ನು ಲಾಕ್ ಮಾಡಿದ್ದೀರಿ. 20 ಹೆಚ್ಚುವರಿ ಉಚಿತ ಟಿಕೆಟ್ ಕೊಡದೇ ಇದ್ದರೆ ಬಾಕ್ಸ್ ತೆರೆಯಲ್ಲ ಎಂದಿದ್ದೀರಿ. ಇದು ವೃತ್ತಿಪರ ನಡೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.