ಮನೆಯೊಂದಕ್ಕೆ ಸಣ್ಣ ವಿಮಾನವೊಂದು ಅಪ್ಪಳಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ಅಮೆರಿಕದ ಮಿನ್ನೇಸೋಟದ ಬ್ರೂಕ್ಲಿನ್ ಪಾರ್ಕ್‌ನಲ್ಲಿ ನಡೆದಿದೆ.
ಅಮೆರಿಕದ ವಾಯುಯಾನ ಕಾವಲು ಸಂಸ್ಥೆ, ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ವಿಮಾನವು ಸ್ಥಳೀಯ ಸಮಯ ಮಧ್ಯಾಹ್ನ 12:20ರ ಸುಮಾರಿಗೆ ಹಾರಾಟ ನಡೆಸಿದೆ. ನಂತರ ಬ್ರೂಕ್ಲಿನ್ ಪಾರ್ಕ್ ಪ್ರದೇಶದಲ್ಲಿ ಮನೆಯೊಂದಕ್ಕೆ ಅಪ್ಪಳಿಸಿದ್ದು ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಕುವೈತ್‌ನಿಂದ 45 ಭಾರತೀಯರ ಮೃತದೇಹಗಳನ್ನು ಕೇರಳಕ್ಕೆ ಕರೆತಂದ ವಿಮಾನ
ಆದರೆ ಅಪಘಾತಕ್ಕೀಡಾದ ಸಣ್ಣ ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಈವರೆಗೂ ಖಚಿತವಾಗಿಲ್ಲ. ಆದರೆ ಯಾರೂ ಕೂಡಾ ಬದುಕುಳಿರುವ ಸಾಧ್ಯತೆಯೇ ಇಲ್ಲ ಎಂದು ಬ್ರೂಕ್ಲಿನ್ ಪಾರ್ಕ್ ಅಗ್ನಿಶಾಮಕ ಮುಖ್ಯಸ್ಥ ಶಾನ್ ಕಾನ್ವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
My team is in touch with local officials on the scene in Brooklyn Park and we are monitoring the situation closely.
— Governor Tim Walz (@GovTimWalz) March 29, 2025
Grateful to the first responders answering the call. https://t.co/D4mGfPIaD6
ಮನೆಯಲ್ಲಿದ್ದ ಎಲ್ಲರೂ ಕೂಡಲೇ ಮನೆಯಿಂದ ಹೊರ ಬಂದಿದ್ದು, ಸುರಕ್ಷಿತವಾಗಿದ್ದಾರೆ. ಆದರೆ ಮನೆಯಲ್ಲಿದ್ದವರು ಈ ಘಟನೆ ನಡೆಯುವುದಕ್ಕೂ ಮುನ್ನ ಅಥವಾ ನಂತರ ಮನೆಯಿಂದ ಹೊರಬಂದಿದ್ದಾರೆಯೇ ಎಂಬುದೂ ಸ್ಪಷ್ಟವಾಗಿಲ್ಲ.
Video: Plane crashes into home in Brooklyn Park, Minnesota, engulfing it in flames.
— Moni 💕 (@MoniFunGirl) March 29, 2025
There was reportedly no one inside the home at the time. No word on those onboard.
Im sure Gov. Walz will blame Trump and DOGE
pic.twitter.com/8Nue1WQtMC
ವಿಮಾನ ಅಪಘಾತದ ಕಾರಣ ಇನ್ನೂ ತಿಳಿದಿಲ್ಲ. ಅಪಘಾತ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಯುಎಸ್ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಹೇಳಿದೆ.
