ಅಮೆರಿಕ | ಮನೆಯ ಮೇಲೆ ಅಪ್ಪಳಿಸಿದ ವಿಮಾನ; ಎಲ್ಲಾ ಪ್ರಯಾಣಿಕರು ಸಾವು

Date:

ಮನೆಯೊಂದಕ್ಕೆ ಸಣ್ಣ ವಿಮಾನವೊಂದು ಅಪ್ಪಳಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಶನಿವಾರ ಮಧ್ಯಾಹ್ನ ಅಮೆರಿಕದ ಮಿನ್ನೇಸೋಟದ ಬ್ರೂಕ್ಲಿನ್ ಪಾರ್ಕ್‌ನಲ್ಲಿ ನಡೆದಿದೆ.

- Advertisement -

ಅಮೆರಿಕದ ವಾಯುಯಾನ ಕಾವಲು ಸಂಸ್ಥೆ, ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ವಿಮಾನವು ಸ್ಥಳೀಯ ಸಮಯ ಮಧ್ಯಾಹ್ನ 12:20ರ ಸುಮಾರಿಗೆ ಹಾರಾಟ ನಡೆಸಿದೆ. ನಂತರ ಬ್ರೂಕ್ಲಿನ್ ಪಾರ್ಕ್ ಪ್ರದೇಶದಲ್ಲಿ ಮನೆಯೊಂದಕ್ಕೆ ಅಪ್ಪಳಿಸಿದ್ದು ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಇದನ್ನು ಓದಿದ್ದೀರಾ? ಕುವೈತ್‌ನಿಂದ 45 ಭಾರತೀಯರ ಮೃತದೇಹಗಳನ್ನು ಕೇರಳಕ್ಕೆ ಕರೆತಂದ ವಿಮಾನ

ಆದರೆ ಅಪಘಾತಕ್ಕೀಡಾದ ಸಣ್ಣ ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಈವರೆಗೂ ಖಚಿತವಾಗಿಲ್ಲ. ಆದರೆ ಯಾರೂ ಕೂಡಾ ಬದುಕುಳಿರುವ ಸಾಧ್ಯತೆಯೇ ಇಲ್ಲ ಎಂದು ಬ್ರೂಕ್ಲಿನ್ ಪಾರ್ಕ್ ಅಗ್ನಿಶಾಮಕ ಮುಖ್ಯಸ್ಥ ಶಾನ್ ಕಾನ್ವೇ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿದ್ದ ಎಲ್ಲರೂ ಕೂಡಲೇ ಮನೆಯಿಂದ ಹೊರ ಬಂದಿದ್ದು, ಸುರಕ್ಷಿತವಾಗಿದ್ದಾರೆ. ಆದರೆ ಮನೆಯಲ್ಲಿದ್ದವರು ಈ ಘಟನೆ ನಡೆಯುವುದಕ್ಕೂ ಮುನ್ನ ಅಥವಾ ನಂತರ ಮನೆಯಿಂದ ಹೊರಬಂದಿದ್ದಾರೆಯೇ ಎಂಬುದೂ ಸ್ಪಷ್ಟವಾಗಿಲ್ಲ.

ವಿಮಾನ ಅಪಘಾತದ ಕಾರಣ ಇನ್ನೂ ತಿಳಿದಿಲ್ಲ. ಅಪಘಾತ ಘಟನೆಯ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಯುಎಸ್ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಹೇಳಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಜಾದಲ್ಲಿ ಮೃತರ ಸಂಖ್ಯೆ 74,000 ದಾಟಿದೆ: ಆರೋಗ್ಯ ಸಚಿವಾಲಯ

ಇಸ್ರೇಲ್ ನಡೆಸುತ್ತಿರುವ ದೀರ್ಘಕಾಲದ ಕ್ರೌರ್ಯದಿಂದಾಗಿ ಗಾಜಾ ಪಟ್ಟಿಯಲ್ಲಿ ಮೃತರ ಸಂಖ್ಯೆ 74,000...

ದಕ್ಷಿಣ ಆಫ್ರಿಕಾದ ಹಲವೆಡೆ ಸಾಮೂಹಿಕ ಗುಂಡಿನ ದಾಳಿ; 27 ಮಂದಿ ಭೀಕರ ಸಾವು

ದಕ್ಷಿಣ ಆಫ್ರಿಕಾದ ವಿವಿಧ ಪಟ್ಟಣಗಳಲ್ಲಿ ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದ್ದು,...

ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ: 11 ಮಂದಿ ಬಲಿ, 30 ಜನರಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ...

ಯುದ್ಧದಾಹಿ ಅಮೆರಿಕ: ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾವಕ್ಕೆ ಟ್ರಂಪ್ ತಿರಸ್ಕಾರ

ಇರಾನ್‌ ಕದನ ವಿರಾಮಕ್ಕೆ ಮುಂದಿಟ್ಟಿರುವ 7 ದಿನಗಳ ಶಾಂತಿ ಪ್ರಸ್ತಾವವನ್ನು ಅಮೆರಿಕ...