ಎರಡು ಬಾರಿ ತಪ್ಪು ಮಾಡಿದೆ, ಇನ್ನೆಂದೂ ಎನ್‌ಡಿಎ ತೊರೆಯಲ್ಲ: ನಿತೀಶ್‌ ಕುಮಾರ್‌

Date:

Advertisements

ಎರಡು ಬಾರಿ ಎನ್‌ಡಿಎ ಕೂಟವನ್ನು ತೊರೆದು ತಪ್ಪು ಮಾಡಿದೆ. ಇನ್ನೆಂದೂ ಆ ತಪ್ಪನ್ನು ಮಾಡಲಾರೆ, ಎನ್‌ಡಿಎ ತೊರೆಯಲಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಭಾನುವಾರ ಹೇಳಿದ್ದಾರೆ.

ಪಾಟ್ನಾದ ಬಾಪು ಸಭಾಂಗಣದಲ್ಲಿ ಸಹಕಾರಿ ಇಲಾಖೆಯ ಕಾರ್ಯಕ್ರಮದಲ್ಲಿ ಬಿಹಾರ ಸಿಎಂ ಈ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಭಾಗಿಯಾಗಿದ್ದರು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಆಯಾ ಕುಮಾರ್, ಗಯಾ ಕುಮಾರ್’- ಅವರೇ ನಿತೀಶ್ ಕುಮಾರ್

Advertisements

“ಬಿಹಾರದಲ್ಲಿ, ವಿಶೇಷವಾಗಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ನಾಯಕತ್ವದಲ್ಲಿ ಸಹಕಾರಿ ವಲಯವು ದೊಡ್ಡ ಪ್ರಮಾಣದ ಪ್ರಯೋಜನಗಳನ್ನು ಪಡೆದಿವೆ” ಎಂದು ಸಿಎಂ ನಿತೀಶ್ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್, “2005ರ ಮೊದಲು ರಾಜ್ಯದ ಪ್ರಗತಿಯನ್ನು ಅಂದಿನ ಆಡಳಿತ ಕುಂಠಿತಗೊಳಿಸಿದ್ದಾರೆ. ಅವರ ಆಡಳಿತದ ವೇಳೆ ಜನರು ಸಂಜೆ ನಂತರ ತಮ್ಮ ಮನೆಗಳಿಂದ ಹೊರಬರಲು ಭಯಪಡುತ್ತಿದ್ದರು” ಎಂದು ಆರೋಪಿಸಿದರು.

ಅಧಿಕಾರ ಎಲ್ಲಿರುತ್ತದೆಯೋ ಅಲ್ಲಿಗೆ ವಾಲಿಕೊಳ್ಳುವುದರಲ್ಲೇ ಪ್ರಸಿದ್ಧರಾಗಿರುವ ನಿತೀಶ್ ಕುಮಾರ್ ಅವರು ಹಲವು ಬಾರಿ ತನ್ನ ಮೈತ್ರಿ ಬದಲಾಯಿಸಿಕೊಂಡವರು. ಈ ಹಿಂದೆ ಎರಡು ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದಿಂದ ಹೊರನಡೆದು, ಯುಪಿಎ ಒಕ್ಕೂಟ ಸೇರಿದ್ದರು. ತನ್ನ ರಾಜಕೀಯ ಜೀವನದಲ್ಲಿ ಬಹುತೇಕ ಕ್ಷಣಗಳಲ್ಲಿ ಮೈತ್ರಿ ಮುರಿದು ಇನ್ನೊಂದು ಮಿತ್ರಕೂಟಕ್ಕೆ ಹಾರುವ ಮೂಲಕವೇ ನಿತೀಶ್ ಸುದ್ದಿಯಾಗಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X