ಸೆಕ್ಟರ್ -20 ಗುರುದ್ವಾರ ಚೌಕ್‌ನಲ್ಲಿ ಜೀಬ್ರಾ ಕ್ರಾಸಿಂಗ್‌ನಲ್ಲಿ ಚಂಡೀಗಢ ಪೊಲೀಸ್ ಕಾನ್‌ಸ್ಟೆಬಲ್ ಪತ್ನಿ ರೀಲ್ಸ್ ಮಾಡಿದ್ದು, ಈ ವಿಡಿಯೋ ವೈರಲ್ ಆದ ನಂತರ ಚಂಡೀಗಢ ಪೊಲೀಸರು ಹಿರಿಯ ಕಾನ್ಸ್‌ಟೇಬಲ್ ಅಜಯ್ ಕುಂಡು ಅವರನ್ನು ಅಮಾನತುಗೊಳಿಸಿದ್ದಾರೆ.
ಮಾರ್ಚ್ 20ರಂದು ಸಂಜೆ 4:30ರ ಸುಮಾರಿಗೆ ಈ ಘಟನೆ ಉಂಟಾಗಿದ್ದು, ಈ ರೀಲ್ಸ್ ಮಾಡುವ ವೇಳೆ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಜ್ಯೋತಿ ತನ್ನ ಅತ್ತಿಗೆ ಪೂಜಾ ಸಹಾಯದಿಂದ ರೀಲ್ಸ್ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಕೈಗೆ ಕೋಳ ಹಾಕಿದ್ದರೂ ಪೊಲೀಸರ ಮುಂದೆ ಸಿಗರೇಟ್ ಸೇದಿ ರೀಲ್ಸ್ ಮಾಡಿದ ರೌಡಿಶೀಟರ್
ಜ್ಯೋತಿ ಜನಪ್ರಿಯ ಹರ್ಯಾನ್ವಿ ಹಾಡಿಗೆ ನೃತ್ಯ ಮಾಡಿದ್ದು, ಈ ವೇಳೆ ವಾಹನ ಸಂಚಾರಕ್ಕೆ ತೊಂದರೆಯಾಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹೆಡ್ ಕಾನ್‌ಸ್ಟೆಬಲ್ ಜಸ್ಬೀರ್ ಚಂಡೀಗಢದ ಸೆಕ್ಟರ್ 34 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದಾದ ಬಳಿಕ ಚಂಡೀಗಢ ಪೊಲೀಸರು ತನಿಖೆ ಆರಂಭಿಸಿದ್ದು, ಎಎಸ್ಐ ಬಲ್ಜಿತ್ ಸಿಂಗ್ ನೇತೃತ್ವದ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. ಇದಾದ ಬಳಿಕ ಸಂಚಾರಕ್ಕೆ ಅಡ್ಡಿಪಡಿಸಿದ ಮತ್ತು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡಿದ ಆರೋಪದ ಮೇಲೆ ಎನ್‌ಎಸ್‌ನ ಸೆಕ್ಷನ್ 125, 292 ಮತ್ತು 3(5) ರ ಅಡಿಯಲ್ಲಿ ಜ್ಯೋತಿ ಮತ್ತು ಪೂಜಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
चंडीगढ़: पुलिसकर्मी की पत्नी ने ज़ेबरा क्रॉसिंग पर बनाई रील, ट्रैफिक नियमों की उड़ाई धज्जियां; रोड पर लगा जाम
— Ishani K (@IshaniKrishnaa) March 27, 2025
महिला के खिलाफ पुलिस ने FIR दर्ज की, हालांकि थाने में ही बेल दे दी गई. मामला सेक्टर-20 में गुरुद्वारा चौक के पास का है.#Chandigarh pic.twitter.com/l2j4fTYFGv
ಇನ್ನು ಈ ವಿಡಿಯೋವನ್ನು ಕಾನ್‌ಸ್ಟೆಬಲ್ ಅಜಯ್ ಕುಂಡು ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದಲೇ ಅಪ್‌ಲೋಡ್ ಮಾಡಲಾಗಿದೆ. ಈ ಕಾರಣದಿಂದಾಗಿ ಅಜಯ್ ಕುಂಡು ಅವರನ್ನು ಸೆಕ್ಟರ್ 19 ಪೊಲೀಸ್ ಠಾಣೆಯಲ್ಲಿನ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ. ಸದ್ಯ ಮಹಿಳೆಯರಿಬ್ಬರು ಜಾಮೀನು ಪಡೆದಿದ್ದಾರೆ.
ಇದನ್ನು ಓದಿದ್ದೀರಾ? ಗದಗ | ಆಸ್ಪತ್ರೆಯೊಳಗೆ ‘ರೀಲ್ಸ್’ ಮಾಡಿದ ವೈದ್ಯಕೀಯ ವಿದ್ಯಾರ್ಥಿಗಳು; 38 ಮಂದಿ ಅಮಾನತು
ಕಾನ್‌ಸ್ಟೆಬಲ್ ಅಜಯ್ ಕುಂಡು ಅವರ ಅಮಾನತು ಸಂಬಂಧ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಪತ್ನಿ ಕಾರ್ಯಕ್ಕೆ ಪತಿಯನ್ನು ಹೊಣೆಗಾರರನ್ನಾಗಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಸಂಚಾರಕ್ಕೆ ಅಡಿಪಡಿಸಿದ್ದು ಪತ್ನಿ, ಆದರೆ ಶಿಕ್ಷೆ ಪತಿಗೆ, ಇದು ನ್ಯಾಯಯುತವಲ್ಲ ಎಂದು ನೆಟ್ಟಿಗರು ವಾದಿಸಿದ್ದಾರೆ.
ಇನ್ನೂ ಕೆಲವರು, “ವಿಐಪಿ ಸಂಸ್ಕೃತಿಯನ್ನು ನಾನೆಂದಿಗೂ ಬೆಂಬಲಿಸಲ್ಲ. ಆದರೆ ಇಲ್ಲಿ ಯಾವ ತಪ್ಪೂ ನನಗೆ ಕಾಣಿಸುತ್ತಿಲ್ಲ. ರೆಡ್ ಲೈಟ್ ಇದ್ದ ಕಾರಣ ವಾಹನಗಳು ನಿಂತಿದೆ. ವಿರುದ್ಧ ದಿಕ್ಕಿನಲ್ಲಿ ಗ್ರೀನ್ ಸಿಗ್ನಲ್ ಇರುವುದನ್ನು ವಿಡಿಯೋದಲ್ಲೇ ನೋಡಬಹುದು. ಇದು ಅತಿಶಯ” ಎಂದು ಹೇಳಿದ್ದಾರೆ.
