ಐಪಿಎಲ್ 2025 | 30 ಲಕ್ಷಕ್ಕೆ ಹರಾಜಾದ ಆಟಗಾರನ ವಿನೂತನ ದಾಖಲೆ; ಗೆದ್ದ ಖುಷಿಯಲ್ಲಿ ರೋಹಿತ್ ಇಲ್ಲ

Date:

Advertisements

ಹದಿನೆಂಟನೇ ಆವೃತ್ತಿಯ ಐಪಿಎಲ್‌ನಲ್ಲಿ 27, 25, 20 ಕೋಟಿ ರೂ.ಗಳಿಗೆ ಹರಾಜಾದವರೆಲ್ಲ ರನ್‌ ಗಳಿಸಲು ಹಾಗೂ ವಿಕೆಟ್‌ ಕೀಳಲು ಪರದಾಡುತ್ತಿರುವ ಸಂದರ್ಭದಲ್ಲಿ ಕೇವಲ 30 ಲಕ್ಷಕ್ಕೆ ಬಿಕರಿಯಾದ ಆಟಗಾರನೊಬ್ಬ ತನ್ನ ಪಾದಾರ್ಪಣೆ ಪಂದ್ಯದಲ್ಲೇ ವಿನೂತನ ದಾಖಲೆ ಮಾಡಿದ್ದಾನೆ. ಮುಂಬೈ ಇಂಡಿಯನ್ಸ್‌ ತಂಡದ ಎಡಗೈ ವೇಗಿ ಅಶ್ವನಿ ಕುಮಾರ್ ತನ್ನ ಮೊದಲ ಪಂದ್ಯದಲ್ಲಿ ಕೆಕೆಆರ್‌ನ ಘಟಾನುಘಟಿ ನಾಲ್ವರು ಬ್ಯಾಟರ್‌ಗಳನ್ನು ಔಟ್‌ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. 

4 ವಿಕೆಟ್​ ಪಡೆಯುವ ಮೂಲಕ ಅಶ್ವನಿ ಕುಮಾರ್ ​ಇತಿಹಾಸ ಸೃಷ್ಟಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್​ ಎನಿಸಿಕೊಂಡಿದ್ದಾರೆ. ಅಲ್ಲದೆ ಐಪಿಎಲ್​ ಪಾದಾರ್ಪಣೆ ಪಂದ್ಯದಲ್ಲೇ ಅತಿ ಹೆಚ್ಚು ವಿಕೆಟ್​ ಪಡೆದ ಒಟ್ಟಾರೆ ಎರಡನೇ ಬೌಲರ್​ ಕೂಡ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಅಲ್ಜಾರಿ ಜೋಸೆಫ್ ಮೊದಲ ಸ್ಥಾನದಲ್ಲಿದ್ದಾರೆ. ಇವರು ಐಪಿಎಲ್​ ಪಾದಾರ್ಪಣೆ ಪಂದ್ಯದಲ್ಲಿ 6 ವಿಕೆಟ್​ಗಳನ್ನು ಪಡೆದಿದ್ದರು.

ಕಳೆದ ವರ್ಷ ಜೆಡ್ಡಾದಲ್ಲಿ ನಡೆದ ಐಪಿಎಲ್​ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್​ ತಂಡ ಅಶ್ವನಿ ಕುಮಾರ್​ ಅವರನ್ನು 30 ಲಕ್ಷಕ್ಕೆ ಖರೀದಿ ಮಾಡಿತ್ತು. ಅದಕ್ಕೆ ತಕ್ಕಂತೆ ಚೊಚ್ಚಲ ಪಂದ್ಯದಲ್ಲೇ ಎಡಗೈ ವೇಗಿ ಅಶ್ವನಿ ಕುಮಾರ್​ ಮಿಂಚಿನ ಬೌಲಿಂಗ್​ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

Advertisements

ಮುಂಬೈ ಪರ ಬೌಲಿಂಗ್​ ಮಾಡಿದ ಯುವ ವೇಗಿ ಅಶ್ವನಿ ಕುಮಾರ್​ ಕೆಕೆಆರ್​ ತಂಡದ ನಾಲ್ವರು ಬಲಿಷ್ಠ ಆಟಗಾರರ ವಿಕೆಟ್​ ಉರುಳಿಸುವಲ್ಲಿ ಯಶಸ್ವಿಯಾದರು. ಮೂರು ಓವರ್​ ಬೌಲ್​ ಮಾಡಿದ ಅಶ್ವಿನಿ 24 ರನ್​ ನೀಡಿ ಅಜಿಂಕ್ಯಾ ರಹಾನೆ, ರಿಂಕು ಸಿಂಗ್​​, ಮನಿಶ್​ ಪಾಂಡೆ, ರಸೆಲ್​ ವಿಕೆಟ್​ಗಳನ್ನು ಉರುಳಿಸಿದರು. ಇದರೊಂದಿಗೆ ಐಪಿಎಲ್​ನಲ್ಲಿ ದೊಡ್ಡ ದಾಖಲೆ ಬರೆದರು.

ಈ ಆಟಗಾರನನ್ನು ಡೆತ್(ಕೊನೆಯ) ಓವರ್‌ಗಳಲ್ಲಿ ಪರಿಣಿತ ಎಂದು ಪರಿಗಣಿಸಲಾಗುತ್ತದೆ. 2022ರಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಪಂಜಾಬ್ ಪರ ಅಶ್ವನಿ ಪಾದಾರ್ಪಣೆ ಮಾಡಿದರು. ಇಲ್ಲಿಯವರೆಗೂ 4 ಟಿ20 ಪಂದ್ಯಗಳಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ತಂಡದ ಗೆಲುವಿಗಾಗಿ ಶತಕ ಬಿಟ್ಟುಕೊಟ್ಟ ಶ್ರೇಯಸ್‌ ಅಯ್ಯರ್; ಗಮನ ಸೆಳೆದ ಕನ್ನಡಿಗ

ಅಶ್ವನಿ ಕುಮಾರ್ 29 ಆಗಸ್ಟ್ 2001 ರಂದು ಮೊಹಾಲಿಯ ಸಣ್ಣ ಹಳ್ಳಿಯಾದ ಝಂಝೇರಿಯಲ್ಲಿ ಜನಿಸಿದರು. ಈ ಆಟಗಾರ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಮೈದಾನದಲ್ಲಿ ಕಸರತ್ತು ಮಾಡಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಅಶ್ವನಿ ಕುಮಾರ್ ಹೆಸರು ಗಳಿಸಿದ್ದು ಟಿ20 ಕಪ್‌ ಶೇರ್-ಎ-ಪಂಜಾಬ್ ಟೂರ್ನಮೆಂಟ್‌ನಲ್ಲಿ. ಆರು ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿ ಎಲ್ಲರ ಗಮನ ಸೆಳೆದರು. ಅಲ್ಲದೆ ಐಪಿಎಲ್‌ನ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ 10ನೇ ಆಟಗಾರ ಎನಿಸಿಕೊಂಡರು.

ಇಂದು ಐಪಿಎಲ್‌ನಲ್ಲಿ ಅಶ್ವನಿ ಒಂದೇ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 3/37 ಮತ್ತು ಟಿ20 ಕ್ರಿಕೆಟ್‌ನಲ್ಲಿ 1/19 ಅವರ ಹಿಂದಿನ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿತ್ತು.

ಅಶ್ವನಿ ಕುಮಾರ್ ಅವರ ವಿಶೇಷತೆ ಎಂದರೆ ಅವರ ವಿಭಿನ್ನ ಶೈಲಿಯ ಬೌಲಿಂಗ್. ವೇಗ ಬದಲಾವಣೆಯ ಹೊರತಾಗಿ, ಈ ಆಟಗಾರ ಬೌನ್ಸರ್‌ಗಳು ಮತ್ತು ಯಾರ್ಕರ್‌ಗಳನ್ನು ಎಸೆಯುವುದರಲ್ಲಿಯೂ ಪರಿಣಿತರು. ಇದಲ್ಲದೆ, ಅವರು ಕೆಳ ಕ್ರಮಾಂಕದಲ್ಲಿ ಉತ್ತಮವಾಗಿ ಬ್ಯಾಟಿಂಗ್‌ ಕೂಡ ಮಾಡಬಲ್ಲರು. ಈ ಆಟಗಾರ ಒತ್ತಡದಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕೆ ಹೆಸರುವಾಸಿ. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ಈ ಆಟಗಾರನ ಮೇಲೆ ಹೆಚ್ಚು ನೆಚ್ಚಿಕೊಂಡಿದೆ.

ಕೆಕೆಆರ್‌ ಸೋಲಿಗೆ ಕಾರಣಗಳು

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ ಮುಂಬೈ ಇಂಡಿಯನ್ಸ್ ಎದುರು 8 ವಿಕೆಟ್‌ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದೆ. ಈ ಪಂದ್ಯದಲ್ಲಿ ಕೋಲ್ಕತ್ತಾ ಸೋಲಿಗೆ ಪ್ರಮುಖ ಕಾರಣಗಳಿವೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಪರ ಕ್ವಿಂಟನ್ ಡಿ ಕಾಕ್ ಮತ್ತು ಸುನಿಲ್ ನರೈನ್ ಇನಿಂಗ್ಸ್ ತೆರೆಯುವ ಅವಕಾಶ ಪಡೆದರು. ಆದರೆ ಈ ಇಬ್ಬರೂ ಬ್ಯಾಟರ್‌ಗಳು ಮೊದಲ ಎರಡು ಓವರ್‌ಗಳಲ್ಲಿ ಪೆವಿಲಿಯನ್‌ಗೆ ಮರಳಿದರು. ಮೊದಲ ಓವರ್‌ನಲ್ಲಿ ಸುನಿಲ್ ನರೈನ್ ಶೂನ್ಯಕ್ಕೆ ಔಟಾದರೆ, ಕ್ವಿಂಟನ್‌ ಡಿ ಕಾಕ್ ಕೇವಲ 1 ರನ್ ಗಳಿಸಿ ಎರಡನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಕಳಪೆ ಆರಂಭದಿಂದಾಗಿ ಕೆಕೆಆರ್ ಇನಿಂಗ್ಸ್ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದರ ಭಾರವನ್ನು ತಂಡ ಹೊರಬೇಕಾಯಿತು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಿದ ಕಾರಣ ಸಂಕಷ್ಟದ ಪರಿಸ್ಥಿತಿಗೆ ಸಿಲುಕಿತ್ತು. ಇಂತಹ ಸಂದರ್ಭದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕೂಡ ತಮ್ಮ ಜವಾಬ್ದಾರಿಯನ್ನು ಮರೆತರು. ಮಧ್ಯಮ ಕ್ರಮಾಂಕದ ಬ್ಯಾಟರ್‍‌ಗಳು ಜವಾಬ್ದಾರಿಯುತ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬೇಕಿತ್ತು.

ಆದರೆ ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಉತ್ತಮ ಇನಿಂಗ್ಸ್ ಕಟ್ಟುವಲ್ಲಿ ವಿಫಲವಾದರು. ಕೆಕೆಆರ್ ತಂಡದ ವಿಕೆಟ್‌ಗಳು ಒಂದೊಂದಾಗಿ ಬೀಳುತ್ತಲೇ ಇದ್ದವು. ಪರಿಣಾಮ ಕೆಕೆಆರ್ ನಿಗದಿತ 20 ಓವರ್‍‌ಗಳನ್ನು ಪೂರ್ಣವಾಗಿ ಆಡಲು ಸಾಧ್ಯವಾಗಲಿಲ್ಲ.

ಪಂದ್ಯವಾಡದೆ ದಾಖಲೆಯಿಂದ ತಪ್ಪಿಸಿಕೊಂಡ ರೋಹಿತ್

ಮುಂಬೈ ಹಾಗೂ ಕೆಕೆಆರ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ. ರೋಹಿತ್‌ ಕೆಕೆಆರ್‌ ವಿರುದ್ಧ ಐಪಿಎಲ್‌ನಲ್ಲಿ 954 ರನ್‌ ಸಿಡಿಸಿದ್ದಾರೆ. ಈ ಟೀಂ ವಿರುದ್ಧ ಅವರ ಸ್ಟ್ರೈಕ್‌ ರೇಟ್‌ 128.05 ಇದೆ. ಸೋಮವಾರದ ಪಂದ್ಯದಲ್ಲಿ ರೋಹಿತ್ 46 ರನ್‌ ಬಾರಿಸಿದ್ದರೆ ಕೆಕೆಆರ್ ವಿರುದ್ಧ 1 ಸಾವಿರ ರನ್‌ ಪೂರ್ಣಗೊಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಬಹುದಿತ್ತು. ಆದರೆ ಈ ದಾಖಲೆಯನ್ನು ಹಿಟ್ ಮ್ಯಾನ್‌ ತಪ್ಪಿಸಿಕೊಂಡರು. ಮಹತ್ವದ ದಾಖಲೆಯನ್ನು ಮುರಿಯಲು ಕೆಕೆಆರ್‌ ಮುಂದಿನ ಪಂದ್ಯದವರೆಗೂ ರೋಹಿತ್ ಕಾಯಬೇಕಿದೆ. ಮುಂದೆ ಕೆಕೆಆರ್‌ ಜೊತೆ ಲೀಗ್‌ ಪಂದ್ಯಗಳು ಇಲ್ಲದಿರುವ ಕಾರಣ ಎರಡೂ ತಂಡಗಳು ಮೇಲುಗೈ ಸಾಧಿಸಿದ ನಂತರ ಕ್ವಾಲಿಫೈಯರ್‌ ಹಂತದ ಪಂದ್ಯಗಳವರೆಗೂ ತಾಳಿಕೊಳ್ಳಬೇಕಿದೆ. ಇಲ್ಲದಿದ್ದರೆ ಮುಂದಿನ ವರ್ಷದ ಆವೃತ್ತಿಯಲ್ಲಿ ಈ ಸಾಧನೆಯ ಬಗ್ಗೆ ಗಮನಹರಿಸಬೇಕಿದೆ.

ಮುಂಬೈ ಹಾಗೂ ಕೆಕೆಆರ್‌ ನಡುವೆ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

ರೋಹಿತ್ ಶರ್ಮಾ –  954

ಸೂರ್ಯಕುಮಾರ್ ಯಾದವ್ – 590

ವೆಂಕಟೇಶ್ ಅಯ್ಯರ್ – 362

ಗೌತಮ್ ಗಂಭೀರ್ -349

ಮನೀಶ್ ಪಾಂಡೆ -329

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಗರ್ ಧನಕರ್ ಹತ್ಯೆ ಪ್ರಕರಣ: ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದು

ಜೂನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧನಕರ್ ಹತ್ಯೆ ಪ್ರಕರಣದ ಪ್ರಮುಖ...

ತಾಂತ್ರಿಕ ಕಾರಣದಿಂದ ಯುವಕನಿಗೆ ಸಿಕ್ಕ ಆರ್‌ಸಿಬಿ ಆಟಗಾರನ ಸಿಮ್‌; ಕೊಹ್ಲಿ, ಎಬಿಡಿಯಿಂದ ನಿತ್ಯ ಕರೆ!

ಛತ್ತೀಸ್‌ಗಢದ ಯುವಕನೊಬ್ಬನಿಗೆ ತಾಂತ್ರಿಕ ದೋಷದಿಂದಾಗಿ ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್‌ರ...

ಬಿಸಿಸಿಐ ಷರತ್ತಿನಿಂದ ವಿರಾಟ್‌, ರೋಹಿತ್‌ 2027ರ ಏಕದಿನ ವಿಶ್ವಕಪ್‌ ಕನಸು ಕಮರಿ ಹೋಗಲಿದೆಯೇ?

ಟೀಂ ಇಂಡಿಯಾದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ...

ಊಹಾಪೋಹಗಳಿಗೆ ತೆರೆ: ಭಾರತ–ಪಾಕ್‌ ಏಷ್ಯಾಕಪ್‌ ಕ್ರಿಕೆಟ್‌ ಪಂದ್ಯ ರದ್ದಾಗುವುದಿಲ್ಲ

ಪಹಲ್ಗಾಮ್‌ ಉಗ್ರ ದಾಳಿಯ ನಂತರ ಭಾರತ–ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ...

Download Eedina App Android / iOS

X