“ಯುವ ಕಾರ್ಯಕರ್ತರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಯುವ ನಾಯಕತ್ವ ತರಬೇತಿ ಶಿಬಿರವನ್ನು ಏಪ್ರಿಲ್ 3 ಮತ್ತು ಎಪ್ರಿಲ್ 6ರಂದು ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ” ಎಂದು ಕೆಆರ್ ಎಸ್ ಪಕ್ಷದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ.ಬಸವರಾಜಯ್ಯ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು “ತರಭೇತಿ ಶಿಬಿರದಲ್ಲಿ ಸ್ವ ಅರಿವು ಮತ್ತು ಸ್ವ ವಿಮರ್ಶೆ ಜೊತೆಗೆ ನಾನೇಕೆ ರಾಜಕೀಯ ನಾಯಕತ್ವ ವಹಿಸಬೇಕು. ತನ್ನ ಸುತ್ತಮುತ್ತಲಿನ ಸಮಕಾಲೀನ ಸಮಸ್ಯೆಗಳನ್ನು ಮುಖಾಮುಖಿಯಾಗಿ ಸಮರ್ಥವಾಗಿ ಹೇಗೆ ಎದುರಿಸಬೇಕು? ಪ್ರಾಮಾಣಿಕ ರಾಜಕೀಯ, ಪ್ರಸ್ತುತ ರಾಜಕೀಯ, ಸಮಕಾಲೀನ ಚಿಂತನೆಗಳಲ್ಲದೆ ನಾಯಕತ್ವ ಅರ್ಥ, ವಿಧಗಳು ಇತ್ಯಾದಿ ವಿಷಯ ತಿಳಿಸಲಾಗುತ್ತದೆ” ಎಂದರು
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಎಸ್ ಬಿ ಐ ಬ್ಯಾಂಕ್ ಕಳ್ಳತನ ಪ್ರಕರಣ, ಸಾಲ ನಿರಾಕರಿಸಿದ್ದಕ್ಕೆ ಬ್ಯಾಂಕ್ ದರೋಡೆ.
“ಭಾಷಣ ಕಲೆ ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆಯ ಕೌಶಲ್ಯಗಳನ್ನು ತರಬೇತಿ ಒಳಗೊಂಡಿದೆ. ಶಿಬಿರವು ಸಮಾಜದ ಉತ್ತಮ ನಾಯಕಿಯರು, ನಾಯಕರಾಗಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತದೆ. ಯುವ ಪೀಳಿಗೆಯಲ್ಲಿನ ನಾಯಕಿಯರು, ನಾಯಕರನ್ನು ವಿಮರ್ಶೆಗೊಳಪಡಿಸಿ ಉತ್ತಮ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ. ಈ ತರಬೇತಿ ಶಿಬಿರವು 2 ದಿನ ನಡೆಯಲಿದ್ದು, 2 ದಿನವೂ ಕೆಆರ್ ಎಸ್ ಪಕ್ಷದ ಕಾರ್ಯಕರ್ತರು. ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಬೇಕು. ಹಾಗೇ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಭಾಗವಹಿಸುವವರು ತಮ್ಮ ಹೆಸರನ್ನು ನೋಂದಾಯಿಸಲು 7619353525, 8749065597 ಸಂಪರ್ಕಿಸಲು ಕೋರಿದರು.
ಈ ಸುದ್ದಿಯನ್ನು ಓದಿ; ಚಿತ್ರದುರ್ಗ | ಹಬ್ಬಕ್ಕೆ ಗ್ರಾಮ ಸ್ವಚ್ಛಗೊಳಿಸದ ಬಂಡ ಅಧಿಕಾರಿಗಳು, ರೊಚ್ಚಿಗೆದ್ದ ವೃದ್ಧನಿಂದ ಚರಂಡಿ ಸ್ವಚ್ಛತೆ
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯ ಪುಟ್ಟನಾಯ್ಕ, ಕೆ.ಎಸ್.ವೀರಭದ್ರಪ್ಪ, ವಿ.ಬಿ.ಕೃಷ್ಣ, ಮಂಜುನಾಥ್ ಹಳ್ಳಿಕೆರೆ, ರಾಘವೇಂದ್ರ, ಸುರೇಶ್ ಸಂಗೇನಹಳ್ಳಿ, ಟಿ.ಅಜೇಶ್ ಹಾಗೂ ಮುಖಂಡರು ಹಾಜರಿದ್ದರು.