ಪಾಕಿಸ್ತಾನ ಕ್ರಿಕೆಟ್ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿ ತನ್ನ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದು, ಟಿ20 ಸರಣಿ ಸೋಲಿನ ನಂತರ ಏಕದಿನ ಟೂರ್ನಮೆಂಟ್ನಲ್ಲೂ ಪರಾಭವಗೊಂಡಿದೆ.
ಹ್ಯಾಮಿಲ್ಟನ್ನ ಸೆಡ್ಡೋನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕಿವೀಸ್ ತಂಡದ ವಿರುದ್ಧ 84 ರನ್ಗಳ ಅಂತರದಲ್ಲಿ ಸೋಲು ಅನುಭವಿಸಿದೆ. 293 ರನ್ಗಳ ಸವಾಲನ್ನು ಬೆನ್ನಟ್ಟಿದ ಪಾಕ್ ತಂಡ 208 ರನ್ಗಳಿಗೆ ಸರ್ವಪತನ ಕಂಡಿತು. ಮಧ್ಯಮ ಕ್ರಮಾಂಕದ ಆಟಗಾರ ಫಾಹಿಮ್ ಅಶ್ರಫ್ (73) ಹಾಗೂ ಬೌಲರ್ ನಸೀಂ ಶಾ (51) ಅರ್ಧ ಶತಕ ಗಳಿಸುವ ಮೂಲಕ ಒಂದಿಷ್ಟು ಪ್ರತಿರೋಧ ನೀಡಿದರು. ಉಳಿದ ಆಟಗಾರರು 20ರ ಗಡಿ ದಾಟಲು ವಿಫಲರಾದರು.
ನ್ಯೂಜಿಲೆಂಡ್ ವೇಗಿ ಬೆನ್ ಸಿಯರ್ಸ್ 59/5, ಜೆಕಬ್ ಡುಫಿ 35/3 ವಿಕೆಟ್ ಪಡೆಯುವ ಮೂಲಕ ಪಾಕ್ ತಂಡದ ಬ್ಯಾಟರ್ಗಳನ್ನು ಪೆವಿಲಿಯನ್ಗೆ ಕಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಮೂಲಕ ಕಿವೀಸ್ ತಂಡ ಮೂರು ಪಂದ್ಯಗಳ ಏಕಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿದೆ.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ಅಂದು ಪುಟ್ಟ ಹುಡುಗ; ಇಂದು ಗುರುವನ್ನೇ ಮೀರಿಸಿದ ಶಿಷ್ಯ
ಪಾಕ್ ತಂಡದ ನಾಯಕ ಮೊಹಮ್ಮದ್ ರಿಜ್ವಾನ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರೂ ನ್ಯೂಜಿಲೆಂಡ್ ತಂಡವನ್ನು ಕಡಿಮೆ ರನ್ಗಳಿಗೆ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕಿವೀಸ್ ವಿಕೆಟ್ ಕೀಪರ್ ಮಿಷಲ್ ಹೇ ಅಜೇಯ 99 ಬಾರಿಸಿ ಒಂದು ರನ್ನಿಂದ ಶತಕ ತಪ್ಪಿಸಿಕೊಂಡರೂ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.
ಇನ್ನುಳಿದಂತೆ ಉದಯೋನ್ಮುಖ ಆಟಗಾರ ಮೊಹಮ್ಮದ್ ಅಬ್ಬಾಸ್(41), ನಿಕ್ ಕೆಲ್ಲಿ (31),ಹೇನ್ರಿ ನಿಕೊಲೊಸ್(22)ರನ್ ಬಾರಿಸುವ ಮೂಲಕ ನ್ಯೂಜಿಲೆಂಡ್ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 292 ರನ್ ಪೇರಿಸಲು ನೆರವಾದರು. ಪಾಕ್ ಪರ ಮುಖೀಮ್, ವಾಸೀಮ್ ತಲಾ 2 ವಿಕೆಟ್, ಫಾಹಿಮ್, ಜಾವೇದ್ ಹಾಗೂ ಹ್ಯಾರಸ್ ತಲಾ ಒಂದೊಂದು ವಿಕೆಟ್ ಪಡೆದರು.