ಕಲಬುರಗಿ | ಬಿಹಾರದ ಮಹಾ ಬೋಧಿ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡುವಂತೆ ಒತ್ತಾಯ

Date:

Advertisements

ಬಿ ಟಿ ಆ್ಯಕ್ಟ್ 1949 ರದ್ದುಗೊಳಿಸಿ, ಮಹಾ ಬೋಧಿ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡಲು ಒತ್ತಾಯಿಸಿ, ಬುದ್ಧ ಗಯಾದಲ್ಲಿ ನಡೆದಿರುವ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನದಿಂದ ಪ್ರತಿಭಟನೆ ನಡೆಸಿದರು.

ಬೌದ್ಧ ಉಪಾಸಕ, ಉಪಾಸಕಿಯರ ಕಲಬುರಗಿ ಜಿಲ್ಲಾ ಸಮಿತಿ, ಸಮಸ್ತ ದಲಿತ ಸಂಘಟನೆಗಳು ಒಗ್ಗೂಡಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಬುದ್ಧ ಘೋಷ ದೇವಿಂದ್ರ ಹೆಗಡೆ ಮಾತನಾಡಿ, “ಆಡಳಿತ ಮಂಡಳಿಯನ್ನು ಸಂಪೂರ್ಣವಾಗಿ ಬೌದ್ಧರಿಗೇ ನೀಡಬೇಕೆಂದು ಒತ್ತಾಯಿಸಿ, ಫೆಬ್ರವರಿ 12ರಿಂದಲೂ ನಿರಂತರ ಅಮರಾಣಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ. ಈ ಹೋರಾಟವನ್ನು ಹತ್ತಿಕ್ಕಲು ನಾನಾ ವಿಧದ ತಂತ್ರಗಳನ್ನು ಅನುಸರಿಸಿದರು. ಆದರೂ ಬೌದ್ಧಭಿಕ್ಕು ಸಂಘ ತನ್ನ ಹೋರಾಟವನ್ನು ತೊರೆಯಲಿಲ್ಲ. ಇದರಿಂದ ಕ್ರೋಧಗೊಂಡ ಬಿಹಾರ ಸರ್ಕಾರ ಮತ್ತು ಕೇಂದ್ರದ ಮೋದಿ ಸರ್ಕಾರ ಫೆಬ್ರವರಿ 27ರ ರಾತ್ರಿ 12ರ ಸುಮಾರಿಗೆ ಸತ್ಯಾಗ್ರಹ ನಿರತ ಬೌದ್ಧ ಬಿಕ್ಕುಗಳ ಮೇಲೆ ಅಮಾನುಷನಾಗಿ ದೌರ್ಜನ್ಯ ಎಸಗಿದ್ದು, ಅಲ್ಲದೆ ಭಿಕ್ಕುಣಿಗಳೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ಬಳಿಕ ರಾತೋರಾತ್ರಿ ಅವರನ್ನು ಬಂಧಿಸಿ ಮಡಿಕಲ್ ಕಾಲೇಜು ಗೇಟ್ ಮುಂದೆ ಬಿಟ್ಟ ಪೊಲೀಸರು ಪರಾರಿಯಾಗಿದ್ದಾರೆ” ಎಂದು ಆರೋಪಿಸಿದರು.

Advertisements

“ದೃಢಸಂಕಲ್ಪ ಬಿಟ್ಟುಕೊಡದ ಭಂತೇಜಿಗಳು ಅಲ್ಲಿಯೇ ಸತ್ಯಾಗ್ರಹ ಮುಂದುವರೆಸಿದರು. ಇದರಿಂದ ರಾಜಿಗೆ ಬಂದ ಸರ್ಕಾರ ಮಹಾಬೋಧಿ ವಿಹಾರದಿಂದ 2 ಕೀಲೋ ಮೀಟರ್ ದೂರದ ದೋಮೋಹನ ಸ್ಥಳದಲ್ಲಿ ಧರಣಿ ಸತ್ಯಾಗ್ರಹಕ್ಕೆ ಪರವಾನಿಗೆ ನೀಡಿದ್ದರೂ ಅಡ್ಡಿ ಆಂತಂಕಗಳ ನಡುವೆ ಈ ಹೋರಾಟ ಮುಂದೆ ಸಾಗುತ್ತಿದೆ. ಈ ಹೋರಾಟಕ್ಕೆ ದೇಶಾದ್ಯಂತ ಮತ್ತು ವಿಶ್ವದ ನಾನಾ ಭಾಗಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ” ಎಂದು ಹೇಳಿದರು.

“ಬಿ ಟಿ ಆ್ಯಕ್ಟ್ 1949 ರದ್ದುಗೊಳಿಸಿ, ಮಹಾ ಬೋಧಿ ವಿಹಾರದ ಆಡಳಿತ ಸಂಪೂರ್ಣ ಬೌದ್ಧರಿಗೆ ನೀಡಲು ಒತ್ತಾಯಿಸಿ. ಕಲಬುರಗಿಯಲ್ಲಿ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ
ಒಂದು ವೇಳೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಬುದ್ಧನ ಅನುಯಾಯಿಗಳು ದೇಶಾದ್ಯಂತ ತೀವ್ರವಾದ ಹೋರಾಟ ರೂಪಿಸಲಾಗುವುದು” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ವಿಜಯನಗರ | ಬಸ್‌ನಲ್ಲಿ ಅತ್ಯಾಚಾರಕ್ಕೆ ಯತ್ನ; ಮೂವರ ಬಂಧನ

ಈ ಸಂದರ್ಭದಲ್ಲಿ ಮರೆಪ್ಪ ಹಳ್ಳಿ, ಹಣಮಂತ ಯಳಸಂಗಿ, ಸುರೇಶ ಮಂಗನ್, ಶಾಂತಪ್ಪ ಕೂಡಲಗಿ, ಸೂರ್ಯಕಾಂತ ನಿಂಬಾಳಕ‌ರ್,
ಸಂತೋಷ ಮೇಲಿನಮನಿ, ಅರ್ಜುನ ಭದ್ರೆ, ಬಸವರಾಜ ಬೆಣ್ಣೂರ, ಹಣಮಂತ ಬೋಧನರ್ಕ, ದಿನೇಶ ದೊಡ್ಡಮನಿ, ದಯಾನಂದ ದೊಡ್ಡಮನಿ, ಸೋಮಶೇಖರ ಮೇಲ್ಮನಿ, ದೇವಿಂದ್ರ ಸಿನೂರ, ಲಕ್ಷ್ಮೀಕಾಂತ ಹುಬಳಿ, ದೇವೆಂದ್ರ ಶಳ್ಳಗಿ, ಮಲ್ಲಪ್ಪ ಹೊಸ್ಮನಿ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

Download Eedina App Android / iOS

X