ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದ ಕೃಷ್ಣಮೃಗದ ಎಡಗಾಲಿಗೆ ಪೆಟ್ಟುಬಿದ್ದಿದ್ದು, ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.
ಉದ್ಯಾನದ ವೈದ್ಯ ಡಾ. ಉಮಾಶಂಕರ್ ಮತ್ತು ಡಾ. ವಿಜಯ್ ತಂಡದವರು ಶಸ್ತ್ರಚಿಕಿತ್ಸೆ ನಡೆಸಿದ್ದು, ಕೃಷ್ಣಮೃಗದ ಕಾಲಿನ ಮುರಿದಿದ್ದ ಮೂಳೆಯನ್ನು ಜೋಡಿಸಿದ್ದಾರೆ.
ಜೈವಿಕ ಉದ್ಯಾನದ ಸಸ್ಯಹಾರಿ ಸಫಾರಿಯಲ್ಲಿ 80ಕ್ಕೂ ಹೆಚ್ಚು ಕೃಷ್ಣಮೃಗಗಳಿದ್ದು, ಕೆಲವೊಮ್ಮೆ ಪರಸ್ಪರ ಕಾದಾಟದಲ್ಲಿ ಗಾಯಮಾಡಿಕೊಳ್ಳುವುದು ಸಾಮಾನ್ಯ ಸಂಗತಿ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮಳೆಗಾಗಿ ಹೂತಿದ್ದ ಶವಗಳ ಬಾಯಿಗೆ ನೀರುಬಿಟ್ಟ ಗ್ರಾಮಸ್ಥರು!
ಕೃಷ್ಣಮೃಗ ಗಾಯಗೊಂಡಿರುವುದು ಕಂಡು ಬರುತ್ತಿದ್ದಂತೆ ಉದ್ಯಾನದ ವೈದ್ಯರು ಪಶುವೈದ್ಯಕೀಯ ಆಸ್ಪತ್ರೆಗೆ ತಂದು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸುನೀಲ್ ಪನ್ವಾರ್ ತಿಳಿಸಿದ್ದಾರೆ.