ಜೂನ್ ಕೊನೆಯ ವಾರ ಬಂದರೂ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಮುಂಗಾರು ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬಿತ್ತನೆ ಕುಂಠಿತವಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಬಿಜೆಪಿ ಟೀಕಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, “ಮುಂಗಾರು ಕೈಕೊಟ್ಟು ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಶೇ.10ರಷ್ಟು ಮಾತ್ರ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕೃತ ದಾಖಲೆಗಳೇ ತಿಳಿಸುತ್ತಿವೆ” ಎಂದಿದೆ.
“ಆದರೆ, ಎಟಿಎಂ ಸರ್ಕಾರ ಈಗಲೂ ಅಕ್ಕಿ ಕೊಡದಿರುವುದು ಹೇಗೆ, ಎಲ್ಲವೂಗಳ ಬೆಲೆಯನ್ನೂ ಜಾಸ್ತಿ ಮಾಡಿ ಕಮಿಷನ್ ಏಜೆಂಟ್ ಸುರ್ಜೇವಾಲಾರ ಜೇಬು ತುಂಬಿಸುವುದು ಹೇಗೆ ಎಂಬುದರಲ್ಲೇ ಕಾಲ ಕಳೆಯುತ್ತಿದೆ” ಎಂದು ಆರೋಪಿಸಿದೆ.
“ರೈತರ ಬಗ್ಗೆ ಚಿಂತಿಸಲು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಯಾವೊಬ್ಬ ಶಾಸಕರಿಗೂ ಪುರುಸೊತ್ತೇ ಇಲ್ಲ. ಕಮಿಷನ್ ಡೀಲ್ ಫಿಕ್ಸಿಂಗ್‌ಗೆ ಉನ್ನತ ಅಧಿಕಾರಿಗಳ ಗುಪ್ತ ಸಭೆ ನಡೆಸುವ ಈ ಸರ್ಕಾರ ರೈತರ ಬಗ್ಗೆ, ಬಿತ್ತನೆ ಕುಂಠಿತವಾಗುತ್ತಿರುವುದರ ಬಗ್ಗೆ ಈವರೆಗೆ ಒಂದೇ ಒಂದು ಸಭೆ ನಡೆಸಿಲ್ಲ! ಈ ರೈತ ವಿರೋಧಿ ಸರ್ಕಾರಕ್ಕೆ ಹೆಚ್ಚು ಆಯಸ್ಸಿಲ್ಲ” ಎಂದು ಬಿಜೆಪಿ ಕಿಡಿಕಾರಿದೆ.
ಈ ಸುದ್ದಿ ಓದಿದ್ದೀರಾ? ದೀನದಲಿತರ, ಬಡವರ ಏಳಿಗೆಗಾಗಿ ಭಾರತದಲ್ಲಿ ಬಿಜೆಪಿಯೇತರ ಸರ್ಕಾರ ಬರಬೇಕು: ಸಿಎಂ ಸಿದ್ದರಾಮಯ್ಯ