ಇಬ್ಬರು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳು ಸಾಬೀತಾಗಿರುವುದರಿಂದ ಅಪರಾಧಿಗೆ 20 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ಸಿಂಧನೂರಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ (ಪೋಕ್ಸೋ ವಿಶೇಷ) ನ್ಯಾಯಾಲಯ ತೀರ್ಪು ನೀಡಿದೆ. ಸಿಂಧನೂರು ತಾಲೂಕಿನ ಆರ್ ಹೆಚ್ ಕ್ಯಾಂಪ್ ನಂ.2 ನಿವಾಸಿ ಅರುಣ್ ರಾಯ್ (50) ಶಿಕ್ಷೆಗೆ ಗುರಿಯಾದ ಅಪರಾಧಿ.
2020ರ ಫೆಬ್ರವರಿಯಲ್ಲಿ ಅರುಣ್ ರಾಯ್, ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದು, ನ್ಯಾಯಾಲಯವು ಸಾಕ್ಷಿ ಪುರಾವೆಗಳನ್ನು ಆಧರಿಸಿ, ಆರೋಪಿತನು ಎಸಗಿರುವ ಆರೋಪವು ಸಾಬೀತಾಗಿದ್ದರಿಂದ ಆರೋಪಿತನಿಗೆ 20 ವರ್ಷಗಳ ಕಾರಾಗೃಹ ವಾಸ ಮತ್ತು 25,000 ದಂಡವನ್ನು ವಿಧಿಸಿದೆ. ಸರ್ಕಾರದ ಸಂತ್ರಸ್ತರ ಪರಿಹಾರ ನಿಧಿಯಿಂದ ಬಾಧಿತ ಬಾಲಕಿಯರಿಗೆ ತಲಾ 7.50 ಲಕ್ಷ ಪರಿಹಾರ ನೀಡಬೇಕೆಂದು ನ್ಯಾಯಾಧೀಶ ಬಿ.ಬಿ.ಜಕಾತಿರವರು ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ರಾಯಚೂರು | ‘ಏಮ್ಸ್ʼ ಮಂಜೂರಿಗೆ ಸಂಸದರ ಸಕರಾತ್ಮಕ ಪ್ರತಿಕ್ರಿಯೆ: ಬಸವರಾಜ ಕಳಸ
ಘಟನೆ ಸಂಬಂಧ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕ ಬಾಲಚಂದ್ರ ಡಿ. ಲಕ್ಕಂ ಆರೋಪಿತನ ವಿರುದ್ಧ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.