ಎರಡು ಕುಟುಂಬಗಳ ನಡುವೆ ನಡೆಯುತ್ತಿದ್ದ ಗಲಾಟೆ ವೇಳೆ ಮನೆಯ ಛಾವಣಿ ಕುಸಿದುಬಿದ್ದಿದ್ದು, 10 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಬಳಿಯ ದೇನೆನಗರದಲ್ಲಿ ಘಟನೆ ನಡೆದಿದೆ. ಕುಸಿದ ಬಿದ್ದ ಛಾವಣಿ ಅಡಿಯಲ್ಲಿ ಸಿಲುಕಿಕೊಂಡಿದ್ದ 10 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಆಘಾತಕಾರಿ ಘಟನೆಯನ್ನು ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಷುಲ್ಲಣ ಕಾರಣವೊಂದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಜಗಳವಾಗಿದೆ. ಗಲಾಟೆಯು ವಿಕೋಪಕ್ಕೆ ತಿರುಗಿದ್ದು, ಹೊಡೆದಾಟಕ್ಕೂ ಕಾರಣವಾಗಿದೆ.
ಮನೆಯ ಛಾವಣಿ ಮೇಲೆ ನಿಂತು ಹೊಡೆದಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಮನೆಯ ಛಾವಣಿ ಕುಸಿದು ಬಿದ್ದಿದೆ. ಛಾವಣಿ ಮೇಲಿದ್ದವರು ಮನೆಯೊಳಗೆ ಬಿದ್ದಿದ್ದಾರೆ. ಅಲ್ಲದೆ, ಮನೆಯೊಳಗಿದ್ದವರ ಮೇಲೆ ಛಾವಣಿಯ ಮುರಿದ ಭಾಗಗಳು ಬಿದ್ದಿವೆ. ಪರಿಣಾಮ, 10 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
#Maharashtra #viralVideo
— Mayuresh Ganapatye (@mayuganapatye) April 4, 2025
Shocking incident in Bhiwandi! A fight between two families on a rooftop turned disastrous as the floor collapsed, causing several people to fall. All sustained serious injuries. Police are investigating. #Bhiwandi #Accident #ViralVideo pic.twitter.com/U9J41wAw69
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಉಭಯ ಕುಟುಂಬಗಳ ನಡುವೆ ಸಂಧಾನ ಸಭೆ ನಡೆಸಿದ್ದಾರೆ. ಮನೆಯ ಹಾನಿಯನ್ನು ದುರಸ್ಥಿಗೊಳಿಸಲು ಎರಡೂ ಕುಟುಂಬಗಳು ಹಣ ವ್ಯಯಿಸಲು ಒಪ್ಪಿಕೊಂಡಿವೆ ಎಂದು ವರದಿಯಾಗಿದೆ.