ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಸ್ಟಾರ್ ಆಟಗಾರ ಎಂ.ಎಸ್ ಧೋನಿ ಅವರು ಐಪಿಎಲ್‌ಗೆ ನಿವೃತ್ತಿ ಘೋಷಿಸುವ ಬಗ್ಗೆ ಆಗ್ಗಾಗ್ಗೆ ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಇಂದು (ಮಾರ್ಚ್ 5) ಸಿಎಸ್‌ಕೆ ಮತ್ತು ಡಿಸಿ ನಡುವೆ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ. ಸ್ಟೇಡಿಯಂನಲ್ಲಿ ಧೋನಿ ಅವರ ಪೋಷಕರಾದ ಪ್ಯಾನ್ ಸಿಂಗ್ ಧೋನಿ ಮತ್ತು ದೇವಕಿ ದೇವಿ ಅವರು ಕಾಣಿಸಿಕೊಂಡಿದ್ದಾರೆ.
2008ರಲ್ಲಿ ಐಪಿಎಲ್ ಆರಂಭವಾಗಿ, ಧೋನಿ ಅವರು ಸಿಎಸ್‌ಕೆ ತಂಡವನ್ನು ಸೇರಿದ ಬಳಿಕ, ಧೋನಿ ಅವರ ಪೋಷಕರು ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದಾರೆ. ಧೋನಿ ಅವರ ಪತ್ನಿ ಸಾಕ್ಷಿ ಮತ್ತು ಮಗಳು ಝಿವಾ ಕೂಡ ಇದ್ದಾರೆ. ಹೀಗಾಗಿ, ಬಹುಶಃ ಧೋನಿ ಅವರು ಇಂದು ಐಪಿಎಲ್‌ಗೆ ನಿವೃತ್ತಿ ಘೋಷಿಸಬಹುದು ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ನೆಟ್ಟಿಗರು ಧೋನಿ ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Happy retirement Thala 😭😭
— Siingha 🇮🇳🐅 (@PahadiiSiingha) April 5, 2025
ಈ ಪಂದ್ಯಕ್ಕೂ ಮುನ್ನ, ಸಿಎಸ್‌ಕೆ ನಾಯಕ ರುತುರಾಜ್ ಗೈಕ್ವಾಡ್ ಅವರಿಗೆ ಗಾಯಗಳಾಗಿರುವ ಕಾರಣ, ಎಂಎಸ್ ಧೋನಿ ಅವರು ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಆದಾಗ್ಯೂ, ಗೈಕ್ವಾಡ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಈ ಬೆನ್ನಲ್ಲೇ, ಧೋನಿ ಅವರ ಪೋಷಕರು ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಹಾಗೆ ನೋಡಿದರೆ, ಈ ಹಿಂದೆ, ಯಾವುದೇ ಟೂರ್ನಿಯ ಕೊನೆಯ ಸಮಯದಲ್ಲಿ ನಿವೃತ್ತಿ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬರುತ್ತಿದ್ದರು. ಆದರೆ, ಇತ್ತೀಚೆಗೆ, ಟೂರ್ನಿಯ ಮಧ್ಯದಲ್ಲಿಯೂ ನಿವೃತ್ತಿಯ ಕುರಿತು ಚರ್ಚೆಗಳಾಗುತ್ತಿವೆ. ಶನಿವಾರ ಧೋನಿ ನಿವೃತ್ತರಾಗಲಿದ್ದಾರೆಯೇ ಎಂದು ಹಲವರು ಆಶ್ಚರ್ಯಪಟ್ಟಿದ್ದಾರೆ. ಆದರೆ, ಈ ಬಗ್ಗೆ ಧೋನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.