ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಏ.4ರಂದು ವಿಶೇಷ ಕಾರ್ಯಾಚರಣೆ ಕೈಗೊಂಡು ಒಟ್ಟಾರೆ 505 ಕ್ಕೂ ಹೆಚ್ಚು ಡ್ರಗ್ಸ್ ಬಳಕೆದಾರರನ್ನು ಅವಳಿ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮತ್ತು ಧಾರವಾಡದ ಡಿಮಾನ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು.
ಇದನ್ನು ಓದಿದ್ದೀರಾ? ಧಾರವಾಡ | ಟೋಲ್ ದರ ಏರಿಕೆ ಖಂಡಿಸಿ ಏ.11ರಂದು ವಿವಿಧ ಸಂಘಟನೆಗಳಿಂದ ಪ್ರತಿಭಟನೆಗೆ ಕರೆ
ಪರೀಕ್ಷೆ ನಡೆಸಿದ ನಂತರ ಪಾಸಿಟೀವ್ ಬಂದ 197 ಜನ ಡ್ರಕ್ಸ್ ಬಳಕೆದಾರರ ವಿರುದ್ಧ 46 FIR ದಾಖಲಿಸಿ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ನಂತರ ಹುಬ್ಬಳ್ಳಿಯ R N ಶೆಟ್ಟಿ ಕಲ್ಯಾಣ ಮಂಟಪಕ್ಕೆ ಕರೆತಂದು ಡ್ರಗ್ಸ್ ಬಳಕೆದಾರರಿಗೆ ತಜ್ಞರಿಂದ ಕೌನ್ಸೆಲಿಂಗ್ ನಡೆಸಿ, ಅವರ ಪೋಷಕರ ಜೊತೆಗೆ ಓರಿಯಂಟೇಷನ್ ನಡೆಸಿದ್ದಾರೆ.