ಪ್ರೀತಿಸಿದ್ದ ಹುಡುಗಿ ಕೈಕೊಟ್ಟಿದ್ದ ಕಾರಣಕ್ಕೆ ಯುವಕನೊಬ್ಬ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮಲಾಪುರ ತಾಲ್ಲೂಕಿನ ಕುರಿಕೋಟಾ ಬಳಿ ನಡೆದಿದೆ.
ಕಮಲಾಪುರ ತಾಲ್ಲೂಕಿನ ಮಹಾಗಾಂವ ಮೂಲದ, ಕಲಬುರಗಿಯಲ್ಲಿ ವಾಸವಿದ್ದ ಪ್ರಥಮೇಶ (21) ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ.
ಏ.3ರಂದು ಪ್ರಥಮೇಶ ಮನೆಯಿಂದ ಗ್ರಂಥಾಲಯಕ್ಕೆ ಹೋಗುವುದಾಗಿ ಹೇಳಿ ಬೈಕ್‌ನಲ್ಲಿ ತೆರಳಿದ್ದ. ರಾತ್ರಿಯಾದರೂ ಮನೆಗೆ ಬರಲಿಲ್ಲ. ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಸೇತುವೆ ಮೇಲಿಂದ ಬೆಣ್ಣೆತೊರೆ ಹಿನ್ನೀರಿನಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಪೊಲೀಸರು ಅಗ್ನಿಶಾಮಕ ದಳ ಹಾಗೂ ಮೀನುಗಾರರ ನೆರವಿನಿಂದ ಶೋಧಕಾರ್ಯ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಶನಿವಾರ (ಏ.5) ಬೆಳಿಗ್ಗೆ ನೀರಿನಲ್ಲಿ ಪ್ರಥಮೇಶನ ಮೃತ ದೇಹ ಪತ್ತೆಯಾಗಿದೆ.
ಮೃತ ಪ್ರಥಮೇಶ ಅವರು ಯುವತಿಯೊಬ್ಬರನ್ನು ಪ್ರಿತಿಸುತ್ತಿದ್ದರು. ಬಹಳ ಸಲುಗೆಯಿಂದಲೂ ವರ್ತಿಸಿ, ಅವಳ ಜೊತೆ ಸಂಬಂಧವೂ ಹೊಂದಿದ್ದ. ಎರಡು ತಿಂಗಳ ಬಳಿಕ ಆ ಯುವತಿ, ಬೇರೆ ಹುಡುಗನನ್ನು ಪ್ರೀತಿಸುವುದಾಗಿ ಹೇಳಿ, ತನ್ನನ್ನು ಮರೆಯುವಂತೆ ಪ್ರಥಮೇಶಗೆ ಹೇಳಿದ್ದಳು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆʼ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? ಏ.16ರಂದು ಸಿಎಂ ಸಿದ್ದರಾಮಯ್ಯ ಬೀದರ್ ಜಿಲ್ಲೆ ಪ್ರವಾಸ
ಸ್ಥಳಕ್ಕೆ ಮಹಾಗಾಂವ್ ಠಾಣೆಯ ಪಿಎಸ್ಐ ಆಶಾ ರಾಠೋಡ, ಸಿಬ್ಬಂದಿ ಶವ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಮೃತ ಯುವಕನ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.