ಮೈಸೂರು ಜಿಲ್ಲೆ, ಸರಗೂರು ತಾಲ್ಲೂಕಿನ ಬಿ. ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮೊಳೆಯೂರು ಗ್ರಾಮದ 20 ಮನೆಗಳಿಗೆ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಸಂಚಾಲಕ ಬಸವರಾಜು ಮಾತನಾಡಿ ” ಮೊಳೆಯೂರಿನ ಒಂದು ಬೀದಿಯಲ್ಲಿನ 20 ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕವಿರದೆ ನೀರಿಗೆ ಪರದಾಡುವಂತಾಗಿದೆ. ಕಳೆದ ಒಂದು ವರ್ಷದಿಂದಲೂ ಸಹ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಹಾಗಾಗಿ, ಗ್ರಾಮದ ಜನರು ಪ್ರತಿನಿತ್ಯ ತಮ್ಮ ದೈನಂದಿನ ಬಳಕೆಗೆ ನೀರಿಲ್ಲದೆ ಚಡಪಡಿಸಿದ್ದಾರೆ. ಕುಡಿಯುವ ನೀರಿಗೆ ಹಾಹಕಾರವಿದ್ದು, ವರ್ಷಗಳಿಂದಲೇ ತೊಂದರೆ ಅನುಭವಿಸುತಿದ್ದರು ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿ ಹಾಗೂ ಜನ ಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ ” ಎಂದು ಆರೋಪ ಮಾಡಿದರು.
ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯು ಇಲ್ಲದೆ ಇರುವುದು ಬಹಳ ಖಂಡನಿಯ. ಈ ಹಿಂದೆ ಹಲವು ಬಾರಿ ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದರು ಸಹ ಸಮಸ್ಯೆ ಬಗೆಹರಿದಿಲ್ಲ.ಜಲ ಜೀವನ್ ಮಿಷನ್ ಅಡಿಯಲ್ಲಿ ನೂರಾರು ಕೋಟಿ ಖರ್ಚು ಮಾಡಿ ಕಳಪೆ ಕಾಮಗಾರಿ ಮಾಡಿರುವುದರಿಂದಾಗಿ ಈ ಸಮಸ್ಯೆ ಆಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಭಗತ್ ಸಿಂಗ್, ನೇತಾಜಿ ಕನಸಿನ ಸಮಾಜವಾದಿ ಭಾರತ ನಿರ್ಮಿಸಲು ಸಜ್ಜಾಗಿ : ಮಹಾಂತೇಶ್ ಬೀಳೂರು
ಅಖಿಲ ಭಾರತ ಜನಾಧಿಕಾರ ಸುರಕ್ಷಾ ಸಮಿತಿ ಜಿಲ್ಲಾ ಸಂಚಾಲಕ ಸುನಿಲ್ ಟಿ ಆರ್ ,ಮೊಳೆಯೂರು ಮುಖಂಡ ನಾಗರಾಜು, ಚಂದ್ರಿಕಾ, ಸುಧ, ತಾಯಮ್ಮ, ಲಕ್ಷಮ್ಮ, ರಮ್ಯ, ಗೌರಿ, ರೇಣುಕಮ್ಮ, ಮಹದೇವಮ್ಮ, ರತ್ನಮ್ಮ, ರೇಖಾ ಪ್ರತಿಭಟನೆಯಲ್ಲಿ ಇದ್ದರು.