ವಕ್ಫ್‌ ತಿದ್ದುಪಡಿ ಮಸೂದೆ 2025 | ತಾವೇ ಗೊಂದಲ ಸೃಷ್ಟಿಸಿ, ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಿದೆ ಮೋದಿ ಸರ್ಕಾರ!

Date:

Advertisements

ವಕ್ಫ್‌ ಮಂಡಳಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ತರಲು ಹಿಂದಿನ ಕಾಯ್ದೆಯಲ್ಲಿ ಇದ್ದ ಅವಕಾಶವನ್ನು ತೆಗೆದುಹಾಕಲಾಗಿದೆ. ಒಮ್ಮೆ ಅಧ್ಯಕ್ಷನಾದರೆ ಅವನು ಕಡ್ಡಾಯವಾಗಿ 5 ವರ್ಷ ಅಧ್ಯಕ್ಷನಾಗಿಯೇ ಇರಬೇಕು. ಇದು ಮಂಡಳಿಯಲ್ಲಿ ನಿರಂಕುಶವಾದಕ್ಕೆ ಅವಕಾಶ ನೀಡುತ್ತದೆ. ಅಲ್ಲದೇ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಡ್ಡಾಯವಾಗಿ ಮುಸ್ಲಿಂ ಆಗಿರಬೇಕು ಎಂದು ಹಿಂದಿನ ಕಾಯ್ದೆಯಲ್ಲಿದ್ದ ಅಂಶವನ್ನು ತೆಗೆದು ಹಾಕಲಾಗಿದೆ. ಇದು ಇತರೆ ಸಮುದಾಯಗಳ ದತ್ತಿ ಕಾಯ್ದೆಗಳಲ್ಲಿ ಅದೇ ಸಮುದಾಯದ ಅಧಿಕಾರಿ ಇರುವ ಅಂಶಗಳಿಗೆ ವಿರುದ್ದವಾಗಿದೆ.

ದೇಶದಲ್ಲಿ ಮತ್ತೊಮ್ಮೆ ವಕ್ಫ್‌ ತಿದ್ದುಪಡಿ ಮಸೂದೆ 2025ರ ಚರ್ಚೆ ಶುರುವಾಗಿದೆ. ಸರಕಾರದ ಪರವಾಗಿ ಮತ್ತು ಸರಕಾರದ ವಿರುದ್ದವಾಗಿ ಹಲವು ಅಂಶಗಳು ಮುನ್ನಲೆಗೆ ಬರುತ್ತಿವೆ. ಇದರಿಂದ ದೇಶದ ಜನತೆ ಗೊಂದಲದಲ್ಲಿದ್ದಾರೆ. ಕೆಲವೊಬ್ಬರು ವಕ್ಫ್‌ ತಿದ್ದುಪಡಿ ಮಸೂದೆ 2025ರಿಂದ ಬಡ, ನಿರ್ಗತಿಕ ಮುಸ್ಲಿಮರಿಗೆ ಅನುಕೂಲವಾಗಲಿದೆ ಎಂದೂ, ವಕ್ಫ್‌ ಜಮೀನು ಅತಿಕ್ರಮಣದಾರರಿಂದ ವಾಪಸ್ ಪಡೆಯಲು ಸಾಧ್ಯವಾಗುತ್ತದೆ ಎಂದು ವಾದಿಸುತ್ತಿದ್ದಾರೆ. ಮತ್ತೊಂದು ಕಡೆ ಇದರಿಂದ ವಕ್ಫ್‌ ಆಸ್ತಿಗಳನ್ನು ಕಳೆದುಕೊಳ್ಳುವ ಆತಂಕ ವ್ಯಕ್ತಪಡಿಸಲಾಗುತ್ತಿದೆ. ವಾಸ್ತವವಾಗಿ Waqf Amendment Bill 2025 ವಕ್ಫ್‌ ತಿದ್ದುಪಡಿ ಮಸೂದೆ 2025ರಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿದೆ. ವಕ್ಫ್‌ ಅಧಿನಿಯಮ 1995 ಹಾಗೂ ವಕ್ಫ್‌ ತಿದ್ದುಪಡಿ ಅಧಿನಿಯಮ 2013ರ ಮೂಲಕ ದೇಶದಲ್ಲಿ ಧಾರ್ಮಿಕ ವಕ್ಫ್‌ ಸಂಸ್ಥೆಗಳನ್ನು ನಿರ್ವಹಣೆ ಮಾಡುವ ಮಂಡಳಿಯೇ ವಕ್ಫ್‌ ಮಂಡಳಿಯಾಗಿದೆ. ಜಂಟಿ ಸಂಸದೀಯ ಮಂಡಳಿ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ಮಾಡಿ ವಕ್ಫ್‌ ಸಂಸ್ಥೆಗಳ ಮುಖ್ಯಸ್ಥರ ಜೊತೆಗೆ ಚರ್ಚೆ ಮಾಡಿ ಅಭಿಪ್ರಾಯ ಸಂಗ್ರಹ ಮಾಡಬೇಕಾಗಿತ್ತು. ಆದರೆ, ವಕ್ಫ್‌ ಸಂಸ್ಥೆಗಳಿಗೆ ಸಂಬಂಧವೇ ಇಲ್ಲದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಜೊತೆಗೆ ಹೆಚ್ಚು ಚರ್ಚೆ ಮಾಡಿರುವುದು ದುರದೃಷ್ಟಕರ.

ವಕ್ಫ್‌ ಎಂದರೆ ಯಾವುದೇ ವ್ಯಕ್ತಿ ಧಾರ್ಮಿಕ ಉದ್ದೇಶಕ್ಕಾಗಿ ದಾನ ಮಾಡುವ ಆಸ್ತಿಯಾಗಿವೆ, ಇದು ಮಸೀದಿ, ದರ್ಗಾ, ಆಶುರಖಾನಾ, ಖಬರಸ್ಥಾನ ಇತ್ಯಾದಿ ಗಳಾಗಿವೆ, ಇದು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಯಾವುದೇ ಸರಕಾರ ನೀಡಿದ ಆಸ್ತಿಗಳಲ್ಲ, ಈಗಲೂ ಪ್ರತಿ ವರ್ಷ ಲಕ್ಷಾಂತರ ಜನ ತಮ್ಮ ಸ್ವತ್ತನ್ನು ವಕ್ಫ್‌ ಮಾಡುತ್ತಾರೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ. ಒಬ್ಬ ತಾನೇ ಮುಂದಾಗಿ ಒಂದು ಮಸ್ಜೀದ ಕಟ್ಟಿ ವಕ್ಫ್‌ ಮಂಡಳಿಗೆ ಬರೆದುಕೊಡುತ್ತಾನೆ. ಒಬ್ಬ ವ್ಯಕ್ತಿ ತಾನು ನಂಬುವ ದರ್ಗಾ ಹೆಸರಿನಲ್ಲಿ ಆಸ್ತಿ ಬರೆದುಕೊಡುತ್ತಾನೆ. ಇದು ಹೀಗೆ ಬೆಳೆಯುತ್ತಲೇ ಹೋಗುತ್ತದೆ ವಿನಃ ಕಡಿಮೆಯಾಗುವುದಿಲ್ಲ. ಈ ಸರಕಾರ ಜನರಲ್ಲಿ ಮೂಡಿಸಿರುವ ಭ್ರಮೆ ಏನೆಂದರೆ, ವಕ್ಫ್‌ ಮಂಡಳಿ ಯಾವುದು ಬೇಕೋ ಆ ಆಸ್ತಿ ತನ್ನದೆಂದು ಘೋಷಿಸುತ್ತಲೇ ಹೊರಟಿದೆ. ಅದಕ್ಕೆ ವಕ್ಫ್‌ ಮಂಡಳಿ ಆಸ್ತಿಗಳು ಹೆಚ್ಚಾಗುತ್ತಲೇ ಇವೆ. ಇದು ಅತ್ಯಂತ ಕೀಳುಮಟ್ಟದ ಸುಳ್ಳು.

ವಕ್ಫ್‌ ತಿದ್ದುಪಡಿ ಮಸೂದೆ 2025ರಲ್ಲಿ ಮೊದಲಿಗೆ ಬರುವ ವಿಷಯವೆನೆಂದರೆ, ಯಾವುದೇ ವ್ಯಕ್ತಿ ತನ್ನ ಆಸ್ತಿಯನ್ನು ವಕ್ಫ್‌ ಮಾಡಬೇಕಾದರೆ, ಅವನು/ಅವಳು ಐದು ವರ್ಷದಿಂದ ಇಸ್ಲಾಂ ಧರ್ಮ ಆಚರಣೆ ಮಾಡುತ್ತಿರಬೇಕು. ಇಲ್ಲಿ ಬರುವ ಸಮಸ್ಯೆಯೇನೆಂದರೆ, ಇಸ್ಲಾಂ ಧರ್ಮ ಆಚರಣೆ ಮಾಡುತ್ತಿದ್ದನು ಎನ್ನುವುದಕ್ಕೆ ಪ್ರಮಾಣ ಪತ್ರ ಪಡೆಯುವುದು ಎಲ್ಲಿ, ಯಾರೂ ನೀಡುತ್ತಾರೆ ಎನ್ನುವುದು. ಎರಡನೆಯದಾಗಿ ಇತರೆ ಧರ್ಮಗಳ ಕಾಯ್ದೆಗಳಲ್ಲಿ ಇಲ್ಲದ ಈ ವಿಷಯ ವಕ್ಫ್‌ ಕಾಯ್ದೆಯಲ್ಲಿ ಸೇರಿಸಿರುವುದು ಸಂವಿಧಾನದ ಅನುಚ್ಛೇಧ 14 ಮತ್ತು 15 (ಧರ್ಮಗಳ ಆಧಾರದಲ್ಲಿ ಸಮಾನತೆ) ಉಲ್ಲಂಘನೆಯಾಗಿದೆ. ಈಗಿನ ಕಾಯ್ದೆಯಲ್ಲಿ ವಕ್ಫ್‌ ಸಂಸ್ಥೆಗಳು ಬಳಕೆಯ ಆಧಾರದಲ್ಲಿ ವಕ್ಫ್‌ ಮಂಡಳಿಗೆ ಸೇರಿವೆ ಎನ್ನುವ ಕುರಿತು ಇದೆ. ಈ ಕಾಯ್ದೆ ಜಾರಿಯಾಗುವ ಮುಂಚೆ ಇದ್ದಂತಹ ಎಲ್ಲಾ ವಕ್ಫ್‌ ಸಂಸ್ಥೆಗಳು ಬಳಕೆಯ ಆಧಾರದಲ್ಲಿ ವಕ್ಫ್‌ ಮಂಡಳಿಗೆ ಸೇರಿವೆ. ಆದರೆ ಯಾವುದೇ ವಕ್ಫ್‌ ಆಸ್ತಿಯ ಮೇಲೆ ವ್ಯಾಜ್ಯಗಳಿದ್ದರೆ ಅಥವಾ ಸರಕಾರಿ ಆಸ್ತಿಗಳಿದ್ದಲ್ಲಿ ಅಂತಹ ಆಸ್ತಿಗಳು ವಕ್ಫ್‌ ಆಸ್ತಿಗಳಲ್ಲ. ದೇಶದಲ್ಲಿ ಸುಮಾರು 60 ಸಾವಿರ ಆಸ್ತಿಗಳ ಮೇಲೆ ವ್ಯಾಜ್ಯಗಳಿವೆ. ಈಗ ಅವುಗಳನ್ನು ವಕ್ಫ್‌ ಆಸ್ತಿಯೆನ್ನಲು ಸಾಧ್ಯವಿಲ್ಲ, ಇದು ಗೊಂದಲಕ್ಕೀಡು ಮಾಡುತ್ತದೆ.

Waqf
ಲೋಕಸಭಾ ಸ್ಪೀಕರ್‌ಗೆ ವರದಿ ಸಲ್ಲಿಸಿದ್ದ ಸಂಸದೀಯ ಸಮಿತಿ

ವಕ್ಫ್‌ ಆಸ್ತಿಗಳಲ್ಲಿ ಗೊಂದಲಗಳಿದ್ದಲ್ಲಿ, ಅವುಗಳನ್ನು ವಕ್ಫ್‌ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ನ್ಯಾಯಮಂಡಳಿ ನೀಡುವ ತೀರ್ಪು ಅಂತಿಮ ಎನ್ನುವುದು ಹಿಂದಿನ ಕಾಯ್ದೆಯಲ್ಲಿದೆ. ನ್ಯಾಯ ಮಂಡಳಿಯ ತೀರ್ಪು ಅಂತಿಮ ಎನ್ನುವುದು ದೇಶದ ನ್ಯಾಯಾಲಯಗಳಿಗಿಂತ ವಕ್ಫ್‌ ನ್ಯಾಯಮಂಡಳಿಗಳು ಹೆಚ್ಚಾದವೇ ಎಂದು ವಾದಿಸಲಾಗುತ್ತಿದೆ. ಈ ವಾದವೇ ಸುಳ್ಳು, ಉದಾಹರಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ಬಂದಿರುವ ತೀರ್ಪು ಅಂತಿಮ, ಅದನ್ನು ಸರಕಾರ ಒಪ್ಪಬೇಕು, ಇಲ್ಲ ಅಭ್ಯರ್ಥಿ ಅಥವಾ ಸರಕಾರ ರಿಟ್ ಪಿಟಿಶನ್ ಮೂಲಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಕ್ಫ್‌ ನ್ಯಾಯಮಂಡಳಿಯಲ್ಲಿ ಬಂದಂತಹ ತೀರ್ಪನ್ನು ಅರ್ಜಿದಾರರು ಅಥವಾ ಮಂಡಳಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಬಹುದು. ಈ ರೀತಿ ವಕ್ಫ್‌ ನ್ಯಾಯಮಂಡಳಿಯಲ್ಲಿ ಬಂದಂತಹ ಸಾವಿರಾರು ತೀರ್ಪುಗಳನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಪ್ರಶ್ನಿಸಲು ಸಾಧ್ಯವೇ ಇಲ್ಲ ಎಂದು ವಾದ ಮಾಡುವುದು ಹಾಸ್ಯಾಸ್ಪದ. ವಕ್ಫ್‌ ಕಾಯ್ದೆ 1995ರಲ್ಲಿ ರಾಜ್ಯ ವಕ್ಫ್‌ ಮಂಡಳಿಯಲ್ಲಿ ಕಡ್ಡಾಯವಾಗಿ ಇಬ್ಬರು ಮಹಿಳೆಯರು ಸದಸ್ಯರಾಗಿರಬೇಕು ಎಂದಿದೆ. ಮಹಿಳೆಯರಿಗೆ ವಕ್ಫ್‌ ಮಂಡಳಿಯಲ್ಲಿ ಸ್ಥಾನವೇ ಇಲ್ಲ ಎಂದು ಸುಳ್ಳು ವಾದ ಮಾಡಿರುವುದು ದುರಂತ.

ವಕ್ಫ್‌ ಮಂಡಳಿ ಸದಸ್ಯರ ಬಗ್ಗೆ ಮತ್ತು ಸದಸ್ಯರ ನಾಮನಿರ್ದೇಶನಗಳ ಬಗ್ಗೆ ಅನುಮಾನ ಉಂಟಾಗಿದೆ, ಈಗಿನ ಕಾಯ್ದೆ ಪ್ರಕಾರ ರಾಜ್ಯ ವಕ್ಫ್‌ ಮಂಡಳಿಗಳಲ್ಲಿ ಒಟ್ಟು 11 ಜನ ಸದಸ್ಯರು ಇರಬೇಕು. ಅದರಲ್ಲಿ ಒಬ್ಬ ಅಧ್ಯಕ್ಷ, ಒಬ್ಬ ಸಂಸದ, ಒಬ್ಬ ಶಾಸಕ, ಇಬ್ಬರು ಅನುಭವಿ ವ್ಯಕ್ತಿಗಳು, ಒಬ್ಬ ವಕೀಲರ ಸಂಘದ ಸದಸ್ಯ, ಒಬ್ಬ ಸರಕಾರದ ಅಧಿಕಾರಿಯನ್ನು ಸರಕಾರ ನಾಮನಿರ್ದೇಶನ ಮಾಡಬೇಕು. ಈ 7 ಜನ ಸದಸ್ಯರಲ್ಲಿ ಕನಿಷ್ಠ ಇಬ್ಬರು ಮುಸ್ಲಿಮೇತರರು ಇರಬೇಕು ಎಂದಿದೆ ಹಾಗೂ ಒಂದು ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ವಕ್ಫ್‌ ಸಂಸ್ಥೆಯ ಒಬ್ಬರು, ಮೂವರಲ್ಲಿ ಒಬ್ಬ ಇಸ್ಲಾಮಿಕ ಪರಿಣಿತ, ಇಬ್ಬರು ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಸರಕಾರ ನಾಮನಿರ್ದೇಶನ ಮಾಡಬೇಕು. ಈ 4 ಜನ ನಾಮನಿರ್ದೇರ್ಶಿತ ಸದಸ್ಯರು ಮುಸ್ಲಿಮರಾಗಿರಬೇಕು. ಮಂಡಳಿಯಲ್ಲಿ ಇರುವ 11 ಜನ ಸದಸ್ಯರಲ್ಲಿ 7 ಜನ ಮುಸ್ಲಿಮೇತರರನ್ನು ನಾಮನಿರ್ದೇಶನ ಮಾಡಲು ಅವಕಾಶ ನೀಡಲಾಗಿದೆ. 4 ಜನ ಮಾತ್ರ ಕಡ್ಡಾಯವಾಗಿ ಮುಸ್ಲಿಮರು ಇರಬೇಕು ಎಂದಿದೆ. ಒಂದು ಧಾರ್ಮಿಕ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಆ ಧರ್ಮಕ್ಕೆ ಸೇರದ ವ್ಯಕ್ತಿಗಳನ್ನು ನೇಮಿಸಿರುವುದು ಸಂವಿಧಾನದ ಅನುಚ್ಛೇಧ 25 ಮತ್ತು 26ರ ಸ್ಪಷ್ಟ ಉಲ್ಲಂಘನೆಯಾಗಿದೆ.

Advertisements

ಪ್ರಜಾಪ್ರಭುತ್ವ ದೇಶದಲ್ಲಿ ವಕ್ಫ್‌ ಮಂಡಳಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ತರಲು ಹಿಂದಿನ ಕಾಯ್ದೆಯಲ್ಲಿ ಇರುವ ಅವಕಾಶವನ್ನು ತೆಗೆದುಹಾಕಲಾಗಿದೆ. ಒಮ್ಮೆ ಅಧ್ಯಕ್ಷನಾದರೆ ಅವನು ಕಡ್ಡಾಯವಾಗಿ 5 ವರ್ಷ ಅಧ್ಯಕ್ಷನಾಗಿಯೇ ಇರಬೇಕು. ಇದು ಮಂಡಳಿಯಲ್ಲಿ ನಿರಂಕುಶವಾದಕ್ಕೆ ಅವಕಾಶ ನೀಡುತ್ತದೆ. ಅಲ್ಲದೇ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಡ್ಡಾಯವಾಗಿ ಮುಸ್ಲಿಂ ಆಗಿರಬೇಕು ಎಂದು ಹಿಂದಿನ ಕಾಯ್ದೆಯಲ್ಲಿ ಇರುವ ಅಂಶವನ್ನು ತೆಗೆದು ಹಾಕಲಾಗಿದೆ. ಇದು ಇತರೆ ಸಮುದಾಯಗಳ ದತ್ತಿ ಕಾಯ್ದೆಗಳಲ್ಲಿ ಅದೇ ಸಮುದಾಯದ ಅಧಿಕಾರಿ ಇರುವ ಅಂಶಗಳಿಗೆ ವಿರುದ್ದವಾಗಿದೆ. ಇದು ತಾರತಮ್ಯವಾಗಿದೆ. ವಕ್ಫ್‌ ಮಂಡಳಿಗೆ ಹಿಂದಿನ ಕಾಯ್ದೆಯಲ್ಲಿ ಸೆಕ್ಷನ್ 40ರಲ್ಲಿ ಇರುವ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಇದರ ಮೂಲಕ ಮಂಡಳಿಗಳು ವಕ್ಫ್‌ ಆಸ್ತಿಗಳ ಬಗ್ಗೆ ತೆಗೆದುಕೊಂಡ ನಿರ್ಣಯವು ನ್ಯಾಯಮಂಡಳಿ ತೀರ್ಪು ನೀಡುವವರೆಗೆ ಅಂತಿಮ ಎಂದಿರುವುದನ್ನು ತೆಗೆದುಹಾಕಲಾಗಿದೆ. ಇದರಿಂದ ವಕ್ಫ್‌ ಆಸ್ತಿಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದೇ ಗೊಂದಲ ಮುಂದುವರೆಯಬೇಕು ಎನ್ನುವುದು ಸರಕಾರದ ಇಚ್ಛೆ ಎನ್ನುವಂತಾಗಿದೆ.

Waqf Bill in Lok Sabha jpg

ವಕ್ಫ್‌ ತಿದ್ದುಪಡಿ ಅಧಿನಿಯಮ 2025ರಲ್ಲಿ ವಕ್ಫ್‌ ಮಂಡಳಿ ತನ್ನ ಆಸ್ತಿಗಳನ್ನು ಒತ್ತುವರಿ ಮಾಡಿದಲ್ಲಿ, ಅದನ್ನು ಒತ್ತುವರಿ ಮಾಡಿದ 12 ವರ್ಷಗಳಲ್ಲಿ ನ್ಯಾಯಮಂಡಳಿಗಳಲ್ಲಿ ಪ್ರಶ್ನೆ ಮಾಡಬಹುದಾಗಿದೆ. ಅದಕ್ಕಿಂಥ ಹೆಚ್ಚು ಅವಧಿಯಾಗಿದ್ದರೆ ಪ್ರಶ್ನೆ ಮಾಡುವ ಅಧಿಕಾರ ಕಿತ್ತುಕೊಳ್ಳಲಾಗಿದೆ. ವಕ್ಫ್‌ ಮಂಡಳಿ ತನ್ನ ಸಂಸ್ಥೆಗಳ ನಿರ್ವಹಣೆಗೆ ನಿಯಮಗಳನ್ನು ಮಾಡುವ ಅಧಿಕಾರ ಕಿತ್ತುಹಾಕಲಾಗಿದೆ. ಈ ರೀತಿ ವಕ್ಫ್‌ ಮಂಡಳಿ ಸಶಕ್ತಗೊಳಿಸಬೇಕಾದ ಸರಕಾರ, ಅದನ್ನು ದುರ್ಬಲಗೊಳಿಸಿ ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗುವ ರೀತಿ ನಡೆದುಕೊಂಡಿರುವುದು ದುರದೃಷ್ಟಕರ.

ಸದನದಲ್ಲಿ ಬಹುತೇಕ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸದಸ್ಯರು ವಕ್ಫ್‌ ತಿದ್ದುಪಡಿ ಅಧಿನಿಯಮ 2025 ಬಡ, ನಿರ್ಗತಿಕ ಹಾಗೂ ವಿಧವೆಗೆ ಅನುಕೂಲಕರವಾಗಿದೆ ಎಂದು ವಾದಿಸಿದ್ದಾರೆ. ಇಡೀ ಕಾಯ್ದೆಯಲ್ಲಿ ಅಂತಹ ಯಾವ ಅಂಶವು ಕಾಣುವುದಿಲ್ಲ. ಸರಕಾರ ವಕ್ಫ್‌ ತಿದ್ದುಪಡಿ ಮಸೂದೆ 2025ರ ಕಾಯ್ದೆಯಲ್ಲಿ ಎಲ್ಲಾ ವಕ್ಫ್‌ ಸಂಸ್ಥೆಗಳು ತನ್ನ ವಾರ್ಷಿಕ ಆದಾಯದ ಅರ್ಧದಷ್ಟು ಮೊತ್ತವನ್ನು ಆಯಾ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಾಸಿಸುವ ಬಡ, ನಿರ್ಗತಿಕ ಹಾಗೂ ವಿಧವೆಯರ ಅಭ್ಯುದಯಕ್ಕೆ ಬಳಸಬೇಕು ಎಂದು ಸೇರಿಸಬಹುದಾಗಿತ್ತು. ಅಲ್ಲದೇ ಹೆಚ್ಚಿನ ಆದಾಯವಿರುವ ಸಂಸ್ಥೆಗಳು ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು ಎಂದು ಸೂಚಿಸಬಹುದಾಗಿತ್ತು. ಅದ್ಯಾವುದನ್ನು ಮಾಡದೇ ಕೇವಲ ಕಣ್ಣೊರೆಸುವ ತಂತ್ರಗಾರಿಕೆ ಮಾತ್ರ ಕಂಡಿದೆ. ಈ ಕೇಂದ್ರ ಸರಕಾರದಲ್ಲಿಯೇ ವಕ್ಫ್‌ ಕಾಯ್ದೆ ಬಗ್ಗೆ ಗೊಂದಲವಿದೆ. ಒಂದು ಕಡೆ ವಕ್ಫ್‌ ಮಂಡಳಿ ಬೇರೆಯವರ ಆಸ್ತಿಗಳನ್ನು ತನ್ನದೆಂದು ಘೋಷಿಸಿಕೊಳ್ಳುತ್ತದೆ. ಇದು ಬಡವರ ರೈತರ ಜಮೀನುಗಳನ್ನು ತನ್ನದೆನ್ನುತ್ತದೆ ಎಂದು ವಾದಿಸುತ್ತಾರೆ. ಇನ್ನೊಂದು ಕಡೆ ವಕ್ಫ್‌ ಮಂಡಳಿತ ಆಸ್ತಿಗಳು ಒತ್ತುವರಿಯಾಗಿವೆ. ಅವುಗಳನ್ನು ವಕ್ಫ್‌ ವಶಕ್ಕೆ ವಾಪಸ್ ಪಡೆಯಲಾಗುವುದು ಎಂದು ಹೇಳುತ್ತಿದ್ದಾರೆ. ಇವೆರಡು ವ್ಯತಿರಿಕ್ತವಾಗಿವೆ.

ಆನ್‌ಲೈನ್‌ನಲ್ಲಿ ಮಾಂಸ ಮಾರಾಟ ಅಬಾಧಿತ; ಸ್ಥಳೀಯ ವ್ಯಾಪಾರಿಗಳ ಮೇಲೇಕೆ ನಿಷೇಧದ ಬರೆ?

ಸದನದಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಸಚಿವರು ಒಂದು ಪ್ರಕರಣವನ್ನು ಉಲ್ಲೇಖ ಮಾಡಿ ವಕ್ಫ್‌ ಮಂಡಳಿ ತಮಿಳುನಾಡಿನ ಒಂದು ಇಡೀ ಊರನ್ನೇ ತನ್ನ ಆಸ್ತಿಯೆಂದು ಘೋಷಿಸಿದೆ ಎಂದು ಹೇಳಿದ್ದರು. ತಮಿಳುನಾಡು ಸಂಸದ ಎ.ರಾಜಾ ಅವರು ಅದನ್ನು ಉಲ್ಲೇಖಿಸಿ ಇತ್ತೀಚಿಗೆ ಜಂಟಿ ಸದನ ಸಮಿತಿ ತಮಿಳುನಾಡಿಗೆ ಭೇಟಿ ನೀಡಿದಾಗ ಸಚಿವರು ಉಲ್ಲೇಖಿಸಿರುವ ಊರಿನ ವ್ಯಾಪ್ತಿಯ ಜಿಲ್ಲಾಧಿಕಾರಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ಫ್‌ ಮಂಡಳಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕರೆದು ವಿಚಾರಿಸಿದಾಗ, ಅಂತಹ ಯಾವುದೇ ಊರನ್ನು ವಕ್ಫ್‌ ತನ್ನದೆಂದು ಘೋಷಿಸಿಲ್ಲ ಎಂದು ಹೇಳಿರುತ್ತಾರೆ ಎಂದಾಗ ಬಿಜೆಪಿಯ ಒಬ್ಬರೂ ಉತ್ತರ ನೀಡಲಿಲ್ಲ. ಒಟ್ಟಾರೆಯಾಗಿ ವಕ್ಫ್‌ ತಿದ್ದುಪಡಿ ಮಸೂದೆ 2025ರ ಹೆಸರಿನಲ್ಲಿ ಬಿಜೆಪಿ, ವಕ್ಫ್‌ ಸಮಸ್ಯೆ ಇಡೀ ದೇಶದ ಸಮಸ್ಯೆ, ಇದು ಸರಿ ಮಾಡಿದರೆ ಇಡೀ ದೇಶ ಸರಿಯಾಗುತ್ತದೆ ಎನ್ನುವಂತೆ ನಡೆದುಕೊಂಡಿರುವುದು ಖಂಡನಾರ್ಹ.

ರಜಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X