ಸಹೋದರಿಯನ್ನು ಚುಡಾಯಿಸಿದ ಮತ್ತು ಹಳೆಯ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಂಚು ರೂಪಿಸಿ ಮೊಹಮ್ಮದ್ ಜಾವಿದ್ ಎನ್ನುವ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಂದ ಘಟನೆ ಎಪ್ರಿಲ್ 2ರಂದು ನೆಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿತರನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಲ್ಲೂರು ಗ್ರಾಮದ ರುದ್ರೇಗೌಡರ ಹೊಸ ಲೇಔಟ್ ನಲ್ಲಿ ನಲ್ಲೂರು ಗ್ರಾಮದ ಸಂತೆ ಬೀದಿಯ ಮಹಮದ್ ರೆಹಮತ್ ವುಲ್ಲಾ ದೂರು ನೀಡಿ , ಮಹಮದ್ ಜಾವಿದ್ ತಂದೆ ಲೇ|| ಅಮೀರ್ ಅಹಮದ್ ರವರನ್ನು ಕೊಲೆ ಮಾಡಿದ್ದು, ತಮ್ಮನನ್ನು ಕೊಲೆ ಮಾಡಿದ ಆರೋಪಿತರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಚನ್ನಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಬೆಸ್ಕಾಂ ನೌಕರರಿಗೆ ಎಚ್ಚರಿಕೆ ಗಂಟೆ, ನಿರ್ಲಕ್ಷ್ಯದ ಅವಘಡಕ್ಕೆ ಜೈಲು ಶಿಕ್ಷೆ.
ಕೊಲೆ ಪ್ರಕರಣ ಮಾಹಿತಿ ಬಂದ ಕೂಡಲೇ ಸದರಿ ಪ್ರಕರಣದ ಘಟನಾ ಸ್ಥಳಕ್ಕೆ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಐಪಿಎಸ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚನ್ನಗಿರಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರವೀಶ್ ಕೆ.ಎನ್ ರವರ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರನ್ನು ಒಳಗೊಂಡ ಒಂದು ತಂಡವನ್ನು ರಚನೆ ಮಾಡಿದ್ದು, ನಂತರ ಆರೋಪಿತರ ಪತ್ತೆಗಾಗಿ ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದರು.
ಇನ್ಸ್ ಪೆಕ್ಟರ್ ರವೀಶ್ ಕೆ.ಎನ್ ರವರ ನೇತೃತ್ವದಲ್ಲಿ ಚನ್ನಗಿರಿ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರನ್ನು ಒಳಗೊಂಡ ತಂಡವನ್ನು ತನಿಖೆ ಮಾಡಿದ್ದು, ಈ ತಂಡವು 2025 ಎಪ್ರಿಲ್ 2ರಂದು ಬೆಳಿಗ್ಗಿನ ಜಾವ ಸಂತೆಬೆನ್ನೂರು ಬಸ್ ನಿಲ್ದಾಣದಲ್ಲಿ ಪ್ರಕರಣದ ಆರೋಪಿತರಾದ ಎ1 ಮಹಮದ್ ನಿಹಾಲ್ ಎ2. ರೋಷನ್ ಖಾನ್ ಪತ್ತೆ ಮಾಡಿಕೊಂಡು ಬಂದಿದ್ದು, ಆರೋಪಿತರನ್ನು ವಿಚಾರಣೆ ಮಾಡಲಾಗಿ ಮೇಲ್ಕಂಡ ಎ1, ಎ2 ಆರೋಪಿತರು ಹಾಗೂ ಎ3 ಮಹಮದ್ ಅಬು ತಲಹಾ ಹಾಗೂ ಎ4 ಮಹಮದ್ ಸಮೀರ್ ಇವರು ನಾಲ್ಕು ಜನರು ಸೇರಿಕೊಂಡು ಹಳೆಯ ಧ್ವೇಷದ ಹಿನ್ನೆಲೆಯಲ್ಲಿ ಹಾಗೂ ಎ1 ಆರೋಪಿಯ ಅಕ್ಕನನ್ನು ಚುಡಾಯಿಸುತ್ತಿದ್ದ ಎಂಬ ಕಾರಣಕ್ಕೆ ನಲ್ಲೂರಿನ ವಾಸಿ ಮಹಮದ್ ಜಾವಿದ್ ತಂದೆ ಲೇ. ಅಮೀರ್ ಅಹಮದ್ (25) ಇವನನ್ನು ಕೊಲೆ ಮಾಡಲು ಸಂಚು ರೂಪಿಸಿ, ಅದರಂತೆ 2025 ಎಪ್ರಿಲ್ 1ರಂದು ರಾತ್ರಿ ಚನ್ನಗಿರಿಯಿಂದ ನಲ್ಲೂರಿಗೆ ಬಂದು ನಲ್ಲೂರಿನ ಸಂತೆ ಬೀದಿಯಲ್ಲಿದ್ದ ಮಹಮದ್ ಜಾವಿದ್ ನನ್ನು ಸ್ನೇಹಿತರಂತೆ ಮಾತನಾಡಿಸಿ ಆರೋಪಿತರು ಕರೆದುಕೊಂಡು ಹೋಗಿ ನಲ್ಲೂರಿನ ರುದ್ರೇಗೌಡ ರವರ ಹೊಸ ಲೇಔಟ್ ಜಾಗದಲ್ಲಿ ರಾತ್ರಿ ಸಮಯದಲ್ಲಿ ಮಹಮದ್ ಜಾವಿದ್‌ನಿಗೆ ಚಾಕುಗಳಿಂದ ಚುಚ್ಚಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿತರ ಮಾಹಿತಿ ಮೇರೆಗೆ ಆರೋಪಿ ಎ3 ಮಹಮದ್ ಅಬು ತಲಹಾನನ್ನು ಎಪ್ರಿಲ್ 5ರಂದು ಪತ್ತೆ ಮಾಡಿ ದಸ್ತಗಿರಿ ಮಾಡಲಾಗಿದೆ. ಆರೋಪಿತರು ವೈಯಕ್ತಿಕ ಧ್ವೇಷ ಹಾಗೂ ಎ1 ಆರೋಪಿಯ ಅಕ್ಕನನ್ನು ಮೃತನು ಚುಡಾಯಿಸಿರುವ ಕಾರಣಕ್ಕೆ ಮಹಮದ್ ಜಾವಿದ್ ನನ್ನು ಕೊಲೆ ಮಾಡಿರುವುದು ಈವರೆಗಿನ ತನಿಖೆಯಿಂದ ದೃಢಪಟ್ಟಿರುತ್ತದೆ. ಆರೋಪಿ ಎ4 ಮಹಮದ್ ಸಮೀರನ ಪತ್ತೆ ಕಾರ್ಯ ಮುಂದುವರೆದಿರುತ್ತದೆ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಾಜಕೀಯದಲ್ಲಿ ಬೆಳೆಯುವ ಶೋಷಿತ ವರ್ಗದವರಿಗೆ ಅಡ್ಡಿಬೇಡ, ಗುಲಾಮರಾಗಿ ಬದುಕುವುದು ಬೇಡ;ವಿನಯ್ ಕುಮಾರ್ ಜಿಬಿ.
ಸದರಿ ಪ್ರಕರಣದ ಆರೋಪಿತರನ್ನು ಪತ್ತೆ ಮಾಡುವಲ್ಲಿ ಚನ್ನಗಿರಿ ಪೊಲೀಸ್ ಠಾಣಾ ಅಧಿಕಾರಿ ಮತ್ತು ಸಿಬ್ಬಂದಿಯರವರನ್ನು ಪೊಲೀಸ್ ಅಧೀಕ್ಷಕರು ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಂತೋಷ ವಿಜಯಕುಮಾರ್, ಮಂಜುನಾಥ್ ಹಾಗೂ ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಸ್ಯಾಮ್ ವರ್ಗೀಸ್
ಪ್ರಶಂಸನೆ ವ್ಯಕ್ತಪಡಿಸಿರುತ್ತಾರೆ.