ಹೆಜ್ಜೇನು ದಾಳಿಗೆ ತುತ್ತಾಗಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ಚಿಂತಾಮಣಿ ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಎಂದಿನಂತೆ ಕಾಲೇಜಿನ ವಿದ್ಯಾರ್ಥಿಗಳು ತರಗತಿಯ ವಿರಾಮದ ವೇಳೆ ಆವರಣದಲ್ಲಿ ಬಂದಾಗ ಏಕಾಏಕಿ ಹೆಜ್ಜೇನು ಗುಂಪು ದಾಳಿ ನಡೆಸಿದ ಹಿನ್ನೆಲೆ ಪ್ರಣತಿ, ರಿಫತ್ ಖಾನಂ, ಮುಸ್ತಫ, ಯೋಗೇಶ್, ಹರ್ಷವರ್ಧನ್, ಧನುಷ್ ಕುಮಾರ್, ವಿವೇಕ್, ಮಹೇಶ್, ಭರತ್ ಎಂ ಎನ್, ಲಲಿತ ಕುಮಾರ್, ಕೋದಂಡ ಸೇರಿದಂತೆ ಹಲವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ | ಭೀಕರ ಅಪಘಾತ: ಹೊತ್ತಿ ಉರಿದ ಕಾರು – ಇಬ್ಬರು ಸಜೀವ ದಹನ
ವಿಷಯ ತಿಳಿದ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.