ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನ ಕೊಲೆ ಮಾಡಿದ್ದ ಆರೋಪಿಗೆ ಶಿವಮೊಗ್ಗ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2022ರ ಸೆ.20ರಂದು ದುಮ್ಮಳ್ಳಿ ಗ್ರಾಮದ ಕರುಣಾಕರ (36) ಎಂಬಾತ ವರದಕ್ಷಿಣೆ ವಿಚಾರವಾಗಿ ಪತ್ನಿ ಅಮಿತಾ (27)ಳನ್ನು ಹಿಂಸಿಸಿ ಆಕೆಯನ್ನು ಚುಚ್ಚಿ ಕೊಂದಿದ್ದನೆಂದು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ತನಿಖಾಧಿಕಾರಿ ತುಂಗಾ ನಗರದ ಪೊಲೀಸ್ ಠಾಣೆಯ ಪಿಐ ಬಿ ಮಂಜುನಾಥ್ ತನಿಖೆ ನಡೆಸಿದ್ದರು. ಶಿವಮೊಗ್ಗದ ಡಿವೈಎಸ್ಪಿ ಬಾಲರಾಜ್, ಪ್ರಕರಣದ ತನಿಖೆಯನ್ನು ಪೂರೈಸಿ ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾದ ಹಿನ್ನೆಲೆ ಕರುಣಾಕರನಿಗೆ ಜೀವಾವಧಿ ಶಿಕ್ಷೆ ಮತ್ತು ರೂ 1,85,000/- ದಂಡ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ: ಶಿವಮೊಗ್ಗ | ಈದ್ಗಾ ಮೈದಾನಕ್ಕೆ ಸಿಸಿಟಿವಿ ಕಣ್ಗಾವಲು