ಔರಾದ್ ಪಟ್ಟಣದಲ್ಲಿ ಏಪ್ರಿಲ್ 22ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಅದ್ದೂರಿ ಆಚರಣೆಗೆ ತೀರ್ಮಾನಿಸಲಾಗಿದ್ದು, ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸುನೀಲಕುಮಾರ್ ದೇಶಮುಖ ಅವರನ್ನು ಆಯ್ಕೆ ಮಾಡಲಾಗಿದೆ.
ವಿಶ್ವರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜನ್ಮೋತ್ಸವ ಸಮಿತಿ ಪದಾಧಿಕಾರಿಗಳು ಮಂಗಳವಾರ ಪಟ್ಟಣದಲ್ಲಿ ನಡೆಸಿದ ಸಭೆಯಲ್ಲಿ ದೇಶಮುಖ ಅವರನ್ನು ಆಯ್ಕೆ ಮಾಡಲಾಗಿದೆ.
ಅಂದಿನ ಕಾರ್ಯಕ್ರಮದಲ್ಲಿ ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ.ಅಪ್ಪುಗೆರೆ ಸೋಮಶೇಖರ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಸದ ಸಾಗರ್ ಖಂಡ್ರೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭೀಮಾ ಕೋರೆಗಾಂವ್ ಖ್ಯಾತಿ ಕಲಾವಿದ ಅಜಯ್ ದಿಹಾಂಡೆ, ಉದಗೀರ್ ಶಾಸಕ ಸಂಜಯ್ ಭಾನಸೋಡೆ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಪುಂಡಲಿಕರಾವ್, ಮುಖಂಡರಾದ ಭೀಮಶೇನರಾವ್ ಸಿಂಧೆ, ಮಾರುತಿ ಬೌದ್ಧೆ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.
ಸ್ವಾಗತ ಸಮಿತಿ ಅಧ್ಯಕ್ಷ ಸುನೀಲಕುಮಾರ್ ದೇಶಮುಖ ಅವರು ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ʼಔರಾದ್ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮೋತ್ಸವ ಕಾರ್ಯಕ್ರಮ ಐತಿಹಾಸಿಕವಾಗಲಿದೆ. ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣʼ ಎಂದು ಹೇಳಿದರು.
ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ ಕಾಂಬಳೆ ಮಾತನಾಡಿ, ʼಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿ ಆಚರಣೆ ಕುರಿತು ಈಗಾಗಲೇ ಅನೇಕ ಪೂರ್ವಸಿದ್ಧತಾ ಸಭೆಗಳು ನಡೆಸಿ ವಿವಿಧ ಸಮಿತಿ ರಚಿಸಲಾಗಿದೆ. ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕರಿಸಬೇಕುʼ ಎಂದರು.
ಈ ಸುದ್ದಿ ಓದಿದ್ದೀರಾ? Second PUC Result | ಪಿಯುಸಿ ಫಲಿತಾಂಶ : 19 ರಿಂದ 22ನೇ ಸ್ಥಾನಕ್ಕೆ ಕುಸಿದ ಬೀದರ್
ಪ್ರಮುಖರಾದ ಶರಣಪ್ಪ ಪಾಟೀಲ್, ಸೋಪಾನರಾವ ಡೊಂಗರೆ ಝರೇಪ್ಪ ನಾಗಮಾರಪಳ್ಳಿ, ಉತ್ತಮ ಮಾಂಜ್ರೆಕರ್, ಸುನಿಲ ಮೀತ್ರಾ, ಸಂತೋಷ ಶಿಂಧೆ, ಪ್ರಕಾಶ ಭಂಗಾರೆ, ವಿಶಾಲ್ ಶೇಳಕೆ, ಸಂತೋಷ ಸೂರ್ಯವಂಶಿ, ಆನಂದ ಕಾಂಬಳೆ, ಉತ್ತಮ ಗಾಯಕವಾಡ್, ರವಿ ಯರನಾಳೆ ಸೇರಿದಂತೆ ಅನೇಕರಿದ್ದರು. ಪ್ರಚಾರ ಸಮಿತಿ ಕಾರ್ಯದರ್ಶಿ ರತ್ನದೀಪ ಕಸ್ತೂರೆ ಸ್ವಾಗತಿಸಿ, ನಿರೂಪಿಸಿದರು.