ಯಾದಗಿರಿ | ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರ ಆಗ್ರಹ

Date:

Advertisements

ಅಂಗನವಾಡಿ ಕಾರ್ಯಕರ್ತೆಯರು ಇ-ಸರ್ವೆ ಮಾಡಲೇಬೇಕೆಂದು ಬಲವಂತ ಪಡಿಸಲಾಗುತ್ತಿದೆ. ಅದರ ಬದಲಾಗಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಬಟನೆ ನಡೆಸಿದ್ದಾರೆ.

ಯಾದಗಿರಿ ಜಿಲ್ಲಾ ಎಐಯುಟಿಯುಸಿ ನೇತ್ರತ್ವದಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಡಿ ಉಮಾದೇವಿ, “ಅಂನವಾಡಿ ಕೇಂದ್ರಗಳು ಈಗಾಗಲೇ ಆರಂಭಗೊಂಡಿದ್ದು, ಮಕ್ಕಳನ್ನು ದಾಖಲಿಸಿಕೊಳ್ಳುವುದು, ಶಾಲಾಪೂರ್ವ ಶಿಕ್ಷಣ ಭೋದಿಸುವುದು, ಮಕ್ಕಳನ್ನು ಸಂಜೆವರೆಗೆ ಕೇಂದ್ರಗಳಲ್ಲೇ ಉಳಿಸಿಕೊಂಡು ಅವರ ಪಾಲನೆ ಮಾಡುವುದರ ಜೊತೆಗೆ ಮಕ್ಕಳಿಗೂ ಸೇರಿದಂತೆ ಎಲ್ಲ ಫಲಾನುಭವಿಗಳಿಗೆ ಪೌಷ್ಠಿಕ ಆಹಾರ, ಔಷಧಿ ಸೇರಿದಂತೆ ಅಂಗನವಾಡಿ ಮೂಲ ಯೋಜನೆಯಾಗಿರುವ ಐಸಿಡಿಎಸ್ ಚಟುವಟಿಕೆಗಳನ್ನು ಮಾಡಬೇಕಾಗಿದೆ. ಇದರ ಜೊತೆಗೆ ಇ-ಸರ್ವೆ ಮಾಡಲೇಬೇಕೆಂಬುದು ಕಾರ್ಯಕರ್ತೆಯರನ್ನು ತೀವ್ರ ಒತ್ತಡಕ್ಕೆ ತಳ್ಳುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisements

“ರಾಷ್ಟ್ರೀಯ ಆರೋಗ್ಯ ಮತ್ತು ಪೌಷ್ಠಿಕ (ಎಚ್‌ಎನ್‌ಎಸ್) ಸಮೀಕ್ಷೆಯನ್ನು ಅಂಗನವಾಡಿ ನೌಕರರು ತಮ್ಮ ಮೊಬೈಲ್‌ಗಳಲ್ಲಿ ಕಡ್ಡಾಯವಾಗಿ ಮಾಡಲೇಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಒತ್ತಡ ಹೇರುತ್ತಿರುವುದು ಖಂಡನೀಯ. ಈಗಾಗಲೇ ಇರುವ ಮೊಬೈಲ್‌ಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ದಿನ ನಿತ್ಯದ ತಮ್ಮ ಕಾರ್ಯಚಟುವಟಿಕೆಗಳನ್ನು ನಮೂದಿಸುತ್ತಿರುವುದರಿಂದ ಹಲವರ ಮೊಬೈಲ್‌ಗಳ ಸ್ಟೋರೇಜ್ ತುಂಬಿದ್ದು, ಕೆಲವರ ಮೊಬೈಲ್‌ಗಳು ಹ್ಯಾಂಗ್ ಆಗುತ್ತಿವೆ. ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಸದರಿ ಮೊಬೈಲ್‌ಗಳಲ್ಲೇ ಇ-ಸರ್ವೆ ಮಾಡಬೇಕೆಂಬ ಒತ್ತಡ ಹೇರುತ್ತಿರುವುದು ವಿಷಾದನೀಯ” ಎಂದರು.

“ಇ-ಸಮೀಕ್ಷೆ ಕುರಿತಾದ ಸರ್ಕಾರದ ಆದೇಶದಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಸಮರ್ಪಕವಾಗಿ ಶೇ. 50ರಷ್ಟು ಸಿಬ್ಬಂದಿಗಳನ್ನು ನೇಮಕಮಾಡಿ ಒಂದು ತಂಡವಾಗಿ ಕೆಲಸಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದೆ. ಆದರೆ ಈ ಆದೇಶವನ್ನು ಸಮರ್ಪಕವಾಗಿ ಪಾಲಿಸದೆ ಕೇವಲ ಅಂಗನವಾಡಿ ಕಾರ್ಯಕರ್ತೆಯರು ಇ-ಸರ್ವೆ ಮಾಡಿ ಮುಗಿಸಬೇಕೆಂದು ಅನಗತ್ಯ ಒತ್ತಡ ಹೇರುತ್ತಿದ್ದು, ಕೆಲಸದಿಂದ ವಜಾಗೊಳಿಸುವುದಾಗಿ, ಕಾರ್ಯಕರ್ತೆಯರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ, ಇಲ್ಲವೇ ಪತ್ರ ಬರೆದು ಕೆಲಸಕ್ಕೆ ರಾಜಿನಾಮೆ ನೀಡಿ ಎಂದು ಒತ್ತಡ ಹೇರುತ್ತಿದ್ದಾರೆ” ಎಂದು ಆರೋಪಿಸಿದರು.

“ಇ-ಸರ್ವೆ ಮಾಡಲು ಸರ್ಕಾರದ ಆದೇಶದಂತೆ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳನ್ನೊಳಗೊಂಡ ಒಂದು ತಂಡ ರಚಿಸಬೇಕು. ಮೊಬೈಲ್‌ನಲ್ಲಿ ನಮೂದಿಸಲು ಬರದ ಅಂಗನವಾಡಿ ಕಾರ್ಯಕರ್ತೆಯರಿಗೆ ಅಗತ್ಯ ಒತ್ತಡ, ಕಿರುಕುಳ ನೀಡದೆ ತಂಡದ ನುರಿತ ಸದಸ್ಯರಿಗೆ ಮೊಬೈಲ್‌ನಲ್ಲಿ ನಮೂದಿಸುವ ಜವಬ್ದಾರಿ ವಹಿಸಬೇಕು” ಎಂದು ಆಗ್ರಹಿಸಿದರು.

“ಮೊಬೈಲ್ ಹ್ಯಾಂಗ್ ಆಗಿರುವ, ಸ್ಟೋರೆಜ್ ತುಂಬಿರುವ ಮೋಬೈಲ್‌ಗಳಲ್ಲೇ ಇ-ಸರ್ವೆ ಕೆಲಸ ಮಾಡಿಸದೆ, ಅದಕ್ಕೆ ಪರ್ಯಾಯವಾಗಿ ಹೊಸ ಮೊಬೈಲ್ ನೀಡುವುದು ಅಥವಾ ಇಲಾಖೆಯಿಂದ ಸೂಕ್ತ ವ್ಯವಸ್ಥೆ ಮಾಡಬೇಕು” ಎಂದು ಮನವಿ ಮಾಡಿದರು.

“ಐಸಿಡಿಎಸ್ ಕೆಲಸಗಳ ಜೊತೆಗೆ ಇ-ಸರ್ವೆ ಮಾಡಬೇಕೆಂಬ ಮೌಖಿಕ ಆದೇಶ ಬಿಟ್ಟು ಇ-ಸರ್ವೆ ಮಾಡಿ ಮುಗಿಸುವ ಕಾಲಾವಧಿ ನಿಗದಿ ಪಡಿಸಿ ಇ-ಸರ್ವೆ ಮಾಡಿಸಬೇಕು. ತದನಂತರ ಎಂದಿನಂತೆ ಐಸಿಡಿಎಸ್ ಚಟುವಟಿಕೆ ಮಾಡಬೇಕೆಂದು ಕಾರ್ಯಕರ್ತೆಯರಿಗೆ ಸ್ಪಷ್ಟ ನಿರ್ದೇಶನ ನೀಡಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ಬಿಸಿಯೂಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ ಪ್ರಕರಣ; ಅಧಿಕಾರಿಗಳು ಅಮಾನತು

ಅಪರ ಜಿಲ್ಲಾಧಿಕಾರಿ ಮನವಿ ಪತ್ರ ಸ್ವೀಕರಿಸಿ “ನಿಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದಂತೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲು ತಿಳಿಸಲಾಗುವುದು” ಎಂದು ಭರವಸೆ ನೀಡಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ರೇಣುಕಾ ಪಾಟೀಲ್, ಶಾರದಾದೇವಿ, ಮಮತಾ, ಅಯ್ಯಮ್ಮ, ನಿರ್ಮಲಾ, ರಾಧಾ, ಶೈಲಜಾ, ಗಿರಿಜಾ, ಶಕುಂತಲಾ, ಪ್ರತಿಮಾದೇವಿ, ಗಂಗಾಂಬಿಕಾ ಸೇರಿದಂತೆ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X