ತಲ್ವಾರ್ ಹಿಡಿದು ಪೋಸ್ ಕೊಟ್ಟ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಸಂಘಪರಿವಾರದ ಇಬ್ಬರು ಕಾರ್ಯಕರ್ತರ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಸುವೋ ಮೋಟೋ (ಸ್ವಯಂ ಪ್ರೇರಿತ ದೂರು) ಕೇಸ್ ದಾಖಲಿಸಿ ಬಂಧಿಸಿದ್ದಾರೆ.
ಬಂಧಿತರನ್ನು ಪುತ್ತೂರು ತಾಲೂಕಿನ ಕುರಿಯದ ಕಟ್ಟದ ಬೈಲಿನ ಸುಜಿತ್, ಆರ್ಯಾಪುವಿನ ಮರಿಕೆಯ ಪುಟ್ಟಣ್ಣ ಎಂದು ಗುರುತಿಸಲಾಗಿದೆ. ಆರೋಪಿಗಳು ತಲ್ವಾರ್ ಹಿಡಿದಿರುವ ಫೊಟೋ ಹಾಕಿ ʼಟೈಮ್ʼ ಎಂಬ ಶೀರ್ಷಿಕೆ ಬರೆದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಮಂಗಳೂರು | ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಮನವಿ
ತಲ್ವಾರ್ ಪ್ರದರ್ಶಿಸಿರುವ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ತಡರಾತ್ರಿ ಅವರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿ ಸುಜಿತ್ ಈ ಹಿಂದೆ ಹಿಂದೂ ಜಾಗರಣಾ ವೇದಿಕೆಯಲ್ಲಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.