ಗಾಯಕ ಸೋನು ನಿಗಮ್ ಅವರ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಭಿಮಾನಿಗಳು ವಾಗ್ದಾಳಿ ನಡೆಸಿದ್ದಾರೆ. ಗುರುವಾರ ನಡೆದ ಐಪಿಎಲ್ ಪಂದ್ಯದ ವೇಳೆ ವಿರಾಟ್ ಅವರನ್ನು ಔಟ್ ಮಾಡಿದ ಬೌಲರ್ ಕ್ರಿಕೆಟಿಗ ವಿಪ್ರಜ್ ನಿಗಮ್ ಅವರ ಬದಲಾಗಿ ಸೋನು ನಿಗಮ್ ಮೇಲೆ ತಪ್ಪಾಗಿ ವಾಗ್ದಾಳಿ ನಡೆಸಲಾಗಿದೆ.
ಲೆಗ್ ಸ್ಪಿನ್ನರ್ ವಿರಾಟ್ ಅವರನ್ನು ಕೇವಲ 22 ರನ್‌ಗಳಿಗೆ ವಿಪ್ರಜ್ ನಿಗಮ್ ಔಟ್ ಮಾಡಿದ್ದಾರೆ. ಆರ್‌ಸಿಬಿ ಸೋಲು ಕೂಡಾ ಕಂಡಿದೆ. ವಿರಾಟ್ ಔಟಾದ ಬಳಿಕ ಸೋನು ನಿಗಮ್ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್ ಅಭಿಮಾನಿಗಳ ಕಾಮೆಂಟ್‌ಗಳು ಬರಲು ಆರಂಭವಾಗಿದೆ.
ಇದನ್ನು ಓದಿದ್ದೀರಾ? ಐಪಿಎಲ್ 2023 | ಲಕ್ನೋ ತವರಲ್ಲಿ ಸೇಡು ತೀರಿಸಿಕೊಂಡ ಆರ್‌ಸಿಬಿ
“ನಾನು ನಿಮ್ಮ ದೊಡ್ಡ ಅಭಿಮಾನಿ ಸರ್, ಆದರೆ ನೀವು ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಬಾರದಿತ್ತು” ಎಂದು ಸೋನು ನಿಗಮ್ ಇನ್‌ಸ್ಟಾಗ್ರಾಮ್ ಪೋಸ್ಟ್‌ವೊಂದಕ್ಕೆ ಕೊಹ್ಲಿ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, “ಕೊಹ್ಲಿ ಅವರನ್ನು ಔಟ್ ಮಾಡಲು ನಿನಗೆಷ್ಟು ಧೈರ್ಯ” ಎಂದು ಪ್ರಶ್ನಿಸಿದ್ದಾರೆ.
ವಿಪ್ರಜ್ ನಿಗಮ್ ಅವರನ್ನು ತಪ್ಪಾಗಿ ಸೋನು ನಿಗಮ್ ಎಂದು ಭಾವಿಸಿ ತಪ್ಪಾಗಿ ಕ್ರಿಕೆಟ್ ಅಭಿಮಾನಿಗಳು ಸೋನು ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಬಾಲಿವುಡ್ ನಟ ಅರ್ಷದ್ ವಾರ್ಸಿ ಅವರನ್ನು ಗುಜರಾತ್ ಟೈಟಾನ್ಸ್ ಬೌಲರ್ ಅರ್ಷದ್ ಖಾನ್ ಎಂದು ಭಾವಿಸಿ ನೆಟ್ಟಿಗರು ನಟನಿಗೆ ಆನ್‌ಲೈನ್ ಮೂಲಕ ಕಿರುಕುಳ ನೀಡಿದ್ದರು. ಇದೀಗ ಸೋನು ನಿಗಮ್ ಮೇಲೆ ದಾಳಿ ನಡೆಯುತ್ತಿದೆ.
