ಅಕ್ರಮವಾಗಿ ಸ್ಪೋಟಕಗಳನ್ನು ಮನೆಯಲ್ಲಿ ಸಂಗ್ರಹಿಸಿದ್ದ, ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ವೆಂಕಟೇಶ್ವರ ಬಡಾವಣೆಯಲ್ಲಿ ಗುರುವಾರ ನಡೆದಿದೆ.

ವೆಂಕಟೇಶ್ವರ ಬಡಾವಣೆ ನಿವಾಸಿಯಾದ ನಾಗರಾಜ್ ಎಂಬ ವ್ಯಕ್ತಿಯ ಮನೆಯ ಮಂಚದ ಕೆಳಗೆ ಕಲ್ಲುಕ್ವಾರಿ ಪ್ರದೇಶಗಳಲ್ಲಿ ಸ್ಫೋಟದ ಕೆಲಸಕ್ಕೆ ಉಪಯೋಗಿಸುವ, ಮೂರು ಬಾಕ್ಸ್‌ಗಳಲ್ಲಿ 388 ಜಿಲೆಟಿನ್ ಪೇಸ್ಟ್ ಟ್ಯೂಬ್‌ಗಳು ಮತ್ತು 250 ಅಡಿ ಬತ್ತಿಯನ್ನು ಅಕ್ರಮವಾಗಿ ಅಪಾಯಕಾರಿ ಸ್ಪೋಟಕಗಳನ್ನು ಸಂಗ್ರಹಿಸಿದ್ದರು, ಈ ಕುರಿತು ಪೊಲೀಸರು ದಾಳಿ ನಡೆಸಿ ಸ್ಪೋಟಕಗಳೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಅಪಘಾತ: ಸವಾರ ಗಂಭೀರ
ಈ ಕುರಿತು ಚಿಕ್ಕಮಗಳೂರು ಆಂತರಿಕ ಭದ್ರತಾ ವಿಭಾಗದ ಪೊಲೀಸರು, ಕಡೂರು ಠಾಣೆಯ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಸ್ಪೋಟಕಗಳನ್ನು ವಶಪಡಿಸಿಕೊಂಡು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
