ಇಂಡಿಯನ್ ಪ್ರೀಮಿಯರ್ ಲೀಗ್ನ 25ನೇ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಇದೀಗ ವಿವಾದಕ್ಕೀಡಾಗಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಸಿಎಸ್ಕೆ ತಂಡವು 72 ರನ್ ಕಲೆಹಾಕುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಮಹೇಂದ್ರ ಸಿಂಗ್ ಧೋನಿ, ಸುನಿಲ್ ನರೈನ್ ಎಸೆತದಲ್ಲಿ ಎಲ್ಬಿ ಆದರು. ಇತ್ತ ಧೋನಿ ಎಲ್ಬಿ ಆಗುತ್ತಿದ್ದಂತೆ ಕೆಕೆಆರ್ ಆಟಗಾರರು ಮನವಿ ಮಾಡಿದರು.
ಈ ಮನವಿಗೆ ಫೀಲ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ. ಇದರ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ ರಿವ್ಯೂ ತೆಗೆದುಕೊಂಡಿದ್ದಾರೆ. ರಿವ್ಯೂ ವೇಳೆ ಚೆಂಡು ಧೋನಿಯ ಬ್ಯಾಟ್ ಸವರಿ ಸಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದೆ. ಇದರಿಂದ ಅಲ್ಟ್ರಾಎಡ್ಜ್ ಮೀಟರ್ನಲ್ಲೂ ಸ್ಪೈಕ್ಗಳು ಕಾಣಿಸಿಕೊಂಡಿದೆ.
ಆದರೆ ಇದನ್ನು ಸರಿಯಾಗಿ ಪರಿಶೀಲಿಸದೇ ಮೂರನೇ ಅಂಪೈರ್ ಧೋನಿಯನ್ನು ಎಲ್ಬಿಡಬ್ಲ್ಯೂ ಎಂದು ಔಟ್ ನೀಡಿದ್ದಾರೆ. ಇತ್ತ ನಿರಾಸೆಯಿಂದಲೇ ಮಹೇಂದ್ರ ಸಿಂಗ್ ಧೋನಿ (1) ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಈ ಸುದ್ದಿ ಓದಿದ್ದೀರಾ? ಐಪಿಎಲ್ 2025 | ನಿವೃತ್ತಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಧೋನಿ
ಮಹೇಂದ್ರ ಸಿಂಗ್ ಧೋನಿ ನಾಟೌಟ್ ಆಗಿದ್ದರೂ ಔಟ್ ತೀರ್ಪು ನೀಡಿರುವ ಅಂಪೈರ್ ನಿರ್ಧಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಗಳು ವ್ಯಕ್ತವಾಗಿದೆ. ಅದರಲ್ಲೂ ಧೋನಿ ಬ್ಯಾಟ್ಗೆ ಚೆಂಡು ತಾಗಿರುವ ಭಾವಚಿತ್ರಗಳನ್ನು ಧೋನಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ಅಂಪೈರ್ ನಿರ್ಧಾರವನ್ನು ಪ್ರಶ್ನಿಸುತ್ತಿದ್ದಾರೆ.
ಈ ಫೋಟೋಗಳು ಹಾಗೂ ವಿಡಿಯೋವನ್ನು ಪರಿಶೀಲಿಸಿದರೆ, ಮೇಲ್ನೋಟಕ್ಕೆ ನಾಟೌಟ್ ಎಂದು ಗೊತ್ತಾಗುತ್ತಿದ್ದರೂ, ಮೂರನೇ ಅಂಪೈರ್ ಔಟ್ ನೀಡಿದ್ದೇಕೆ ಎಂಬುದೇ ಈಗ ಪ್ರಶ್ನೆಯಾಗಿ ಉಳಿದಿದೆ.
ಧೋನಿಯ ಈ ವಿಕೆಟ್ನೊಂದಿಗೆ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 20 ಓವರ್ಗಳಲ್ಲಿ 103 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. 104 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 10.1 ಓವರ್ಗಳಲ್ಲಿ 107 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
