ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ದಾವಣಗೆರೆ ಘಟಕದ ವತಿಯಿಂದ ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ 134 ನೇ ಜಯಂತ್ಯೋತ್ಸವವನ್ನು ಪೌರಕಾರ್ಮಿಕರಿಗೆ ಬಟ್ಟೆ ವಿತರಿಸಿ ಸನ್ಮಾನಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂಭ್ರಮದ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ‘ಅರಿವೇ ಅಂಬೇಡ್ಕರ’ ವಿಶೇಷ ಸಂಚಿಕೆ ಬಿಡುಗಡೆ.
ಕಾರ್ಯಕ್ರಮ ಉದ್ಘಾಟಿಸಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಯಕೊಂಡ ಶಾಸಕ ಕೆ ಎಸ್ ಬಸವಂತಪ್ಪ, “ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಮತ್ತು ಬಟ್ಟೆ ವಿತರಣೆ ಅತ್ಯಂತ ಸಂತೋಷದ ಸಂಗತಿ. ಇಡೀ ಸಮಾಜದ ಸ್ವಚ್ಛತೆಯ ಸೈನಿಕರು ಪೌರಕಾರ್ಮಿಕರು. ಅವರಿಗೆ ಸನ್ಮಾನಿಸಿ ಸಮಾನತೆ ಎತ್ತಿ ಹಿಡಿಯುವ ಕೆಲಸ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮಾಡುತ್ತಿದೆ. ಅಂಬೇಡ್ಕರ್ ಜಯಂತಿ ಆಚರಣೆ ಅಷ್ಟೇ ಅಲ್ಲದೆ ಅಂಬೇಡ್ಕರ್ ಅವರ ವಿಚಾರ ನೆನೆದು, ಅವರ ದಾರಿಯಲ್ಲಿ ನೆಡೆಯಬೇಕು. ಒಳ್ಳೆಯ ಕೆಲಸಗಳಿಗೆ ಅಂಬೇಡ್ಕರ್ ಹೆಚ್ಚು ಶಕ್ತಿ ನೀಡಲಿ” ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಪ್ರೊ.ವಿಶ್ವನಾಥ್ ಎಚ್. ಮಾತನಾಡಿ “ಶೋಷಿತ ಜನಾಂಗದ ಎರಡು ಕಣ್ಣುಗಳು ಡಾ.ಅಂಬೇಡ್ಕರ್ ಮತ್ತು ಉಪಪ್ರಧಾನಿ ಜಗಜೀವನ್ ರಾಮ್. ಡಾ.ಅಂಬೇಡ್ಕರ್ ಕರಡು ಸಮಿತಿಯ ಅಧ್ಯಕ್ಷರಾಗಿ ದಲಿತರಿಗೆ , ಶೋಷಿತ ವರ್ಗದವರಿಗೆ ಸಾಮಾಜಿಕ ನ್ಯಾಯ ನೀಡಿದರು. ನನ್ನ ದೇಶ ಇವತ್ತು ಯಾರನ್ನಾದರೂ ಸ್ಮರಿಸಬೇಕು ಎಂದರೆ ‘ಅಂಬೇಡ್ಕರ್ ಮತ್ತು ಅವರ ಸಂವಿಧಾನ”ವನ್ನು ಸ್ಮರಿಸಬೇಕು. ಇವತ್ತು ಹಿಂದುಳಿದ, ದಲಿತ ವರ್ಗಗಳಿಗೆ ಅಧಿಕಾರ ಸಿಗಲು, ದೇಶದ ಪ್ರಧಾನಿ ಆಗಲು ಸಂವಿಧಾನವೇ ಕಾರಣ” ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಬಡಾವಣೆ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆರ್ ಎಲ್ ಚೌಬಿ, ಹಾಗೂ ಅತಿಥಿಗಳು ನಗರದ ಪೌರಕಾರ್ಮಿಕರಿಗೆ ಬಟ್ಟೆ ವಿತರಿಸಿ, ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಅವಿನಾಶ್ ಅಭಿನಂದಿಸಿದರು. ಸಂಘಟನೆಯ
ಶಾಮನೂರು ಆಶ್ರಯ ಸಮಿತಿ ಸದಸ್ಯ ಕನ್ನಾಳ ಅಂಜನಪ್ಪ, ಸಂಘಟನೆಯ ರಾಜ್ಯ ಮಹಿಳಾ ಅಧ್ಯಕ್ಷರು ಮಾಲಾ ನಾಗರಾಜ್, ರೆಹಮಾನ ಖಾನ್, ಜಿಲ್ಲಾಧ್ಯಕ್ಷ ಜಗದೀಶ್, ಎನ್ಎಸ್ ಈರಣ್ಣ, ರಾಘವೇಂದ್ರ, ಡಿಜೆ ರಾಜು, ಆನೆಕೊಂಡ ಚಮನ್, ಶರೀಫ್, ಫಯಾಜ್ ಅಹ್ಮದ್ ,ಇಮ್ತಿಯಾಜ್, ಆಯುಬ್, ಅಕ್ಬರ್ ಭಾಷ, ಭೋಜರಾಜ್, ಮುಮ್ತಾಜ್, ಚಂದ್ರು, ಬಸವರಾಜ್, ಅಯ್ಯುಬ್ ಖಾನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂಭ್ರಮದ ಅಂಬೇಡ್ಕರ್ ಜಯಂತಿ ಆಚರಣೆ ಮತ್ತು ‘ಅರಿವೇ ಅಂಬೇಡ್ಕರ’ ವಿಶೇಷ ಸಂಚಿಕೆ ಬಿಡುಗಡೆ.